ರಾಷ್ಟ್ರೀಯ

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರದಲ್ಲಿ 5 ರು. ಕಡಿತ

Pinterest LinkedIn Tumblr

LPG

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಹೆಚ್ಚಳದ ನಡುವೆಯೇ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಗಳ ದರದಲ್ಲಿ 5 ರು.ಗಳಷ್ಟು ಕಡಿತವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಏರಿಳಿತ ವಿದ್ಯಮಾನಗಳನ್ನಾಧರಿಸಿ ಸಬ್ಸಿಡಿ ರಹಿತ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 5 ರೂ. ಕಡಿತಗೊಳಿಸಲಾಗಿದೆ. ಆದರೆ ಪ್ರಮುಖ ಬೆಳವಣಿಗೆಯಲ್ಲಿ ಜೆಟ್ ಇಂಧನ ದರವನ್ನು ಹೆಚ್ಚಿಳ ಮಾಡಲಾಗಿದೆ. ಜೆಟ್ ಇಂಧನದ  ದರವರನ್ನು ಮೊದಲಿನ ದರಕ್ಕಿಂತ 272 ರೂ. ಹೆಚ್ಚಿಸಲಾಗಿದ್ದು, 49,609,84 ರೂ. ಆಗಲಿದೆ.

ನೂತನ ದರ ಏರಿಳಿತದಿಂದಾಗಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 14.2 ಕೆಜಿ. ಸಿಲಿಂಡರ್‌ಗೆ 616 ರು.ಗಳಾಗಿದೆ ಎಂದು ತೈಲೋತ್ಪನ್ನ ಸಂಸ್ಥೆಗಳು ತಿಳಿಸಿವೆ. ಪ್ರಸ್ತುತ ದೆಹಲಿಯಲ್ಲಿ ಪ್ರತಿ ಕುಟುಂಬಕ್ಕೆ ಸಬ್ಸಿಡಿ ಸಹಿತ 12 ಸಿಲಿಂಡರ್‌ಗಳನ್ನು 416ರು.ಗಳಿಗೆ ವಿತರಿಸಲಾಗುತ್ತಿದ್ದು, ಮುಂಬೈಯಲ್ಲಿ 4.50 ರೂ. ಕಡಿತ ಮಾಡಲಾಗಿದೆ. ಒಟ್ಟಾರೆ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ದರ ವ್ಯತ್ಯಾಸವಾಗಿರುತ್ತದೆ.

ನಿನ್ನೆಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಳವಾದ  ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್‌ ಬೆಲೆಯನ್ನುಪ್ರತಿ ಲೀಟರ್ ಗೆ 3.96 ಹಾಗೂ  ಡೀಸೆಲ್‌ ಬೆಲೆಯನ್ನು ಲೀಟರ್ ಗೆ 2.37 ರೂ.ನಷ್ಟು ಹೆಚ್ಚಿಸಲಾಗಿತ್ತು.
-ಕೃಪೆ: ಕನ್ನಡಪ್ರಭ

Write A Comment