ರಾಷ್ಟ್ರೀಯ

ಅಂಡಮಾನ್ ದ್ವೀಪ ಸಮೂಹದಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು, ಸಾವು ನೋವಿನ ವರದಿ ಇಲ್ಲ

Pinterest LinkedIn Tumblr

andaman

ಅಂಡಮಾನ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಶುಕ್ರವಾರ ಮಧ್ಯಾಹ್ನ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ.

ಅಂಡಮಾನ್ ದ್ವೀಪ ಸಮೂಹದ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು, ಈ ವರೆಗೂ ಸಾವು-ನೋವಿನ ಕುರಿತು ವರದಿಗಳು ಬಂದಿಲ್ಲ. ಇನ್ನು ಭೂಕಂಪನ ಸಂಭವಿಸಿದ ಹಿನ್ನಲೆಯಲ್ಲಿ ಅಲ್ಲಿಯ ಸ್ಥಳೀಯ ಜನತೆ ಭಯಭೀತಿಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ನು ವಿಜ್ಞಾನಿಗಳು ತಿಳಿಸಿರುವಂತೆ ಇದು ಸುನಾಮಿ ಸೃಷ್ಟಿಸುವಂತೆ ಪ್ರಬಲ ಕಂಪನವೇನು ಅಲ್ಲ. ಈ

ಕಂಪನದಿಂದ ಸುನಾಮಿ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಪ್ರಭಲ ಭೂಕಂಪನದಿಂದಾಗಿ ಈ ವರೆಗೂ ಸುಮಾರು 6.200 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಾಕಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೇಪಾಳ ಭೂಕಂಪನದಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಭೂಮಿ ಸಣ್ಣಗೆ ಕಂಪಿಸಿದರೂ ಅತೀವವಾಗಿ ಹೆದರುವಂತಹ ಪರಿಸ್ಥಿತಿ ಎದುರಾಗಿದೆ.
-ಕೃಪೆ; ಕನ್ನಡಪ್ರಭ

Write A Comment