ರಾಷ್ಟ್ರೀಯ

ನೇಪಾಳಿಗರ ಕಣ್ಣೀರೊರೆಸಲು ನಾವಿದ್ದೇವೆ : ಪ್ರಧಾನಿ ಮೋದಿ

Pinterest LinkedIn Tumblr

modiii

ನವದೆಹಲಿ, ಏ.26: ಭೂಕಂಪದಿಂದ ನೊಂದಿರುವ ನೇಪಾಳಿಗರ ಕಣ್ಣೊರೆಸಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರಮೋದಿ ಇಂದಿನ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನೇಪಾಳದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಅವರು, ಗುಜರಾತ್‌ನ ಕಛ್‌ನಲ್ಲಿ ಸಂಭವಿಸಿದ್ದ ಭೂಕಂಪದ ದೃಶ್ಯವನ್ನು ಕಣ್ಣಾರೆ ಕಂಡಿರುವ ನನಗೆ ಭಾರೀ ಭೂಕಂಪದ ಪರಿಣಾಮಗಳ ಅರಿವಿದೆ ಎಂದಿದ್ದಾರೆ. ನೇಪಾಳದ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ಭಾರತೀಯ ರಕ್ಷಣಾ ಪಡೆಗಳು ತೆರಳಿದ್ದು, ನಾವು ಎಲ್ಲರನ್ನೂ ರಕ್ಷಿಸುತ್ತೇವೆ. ರಕ್ಷಣೆಗೆ ಮೊದಲು ಆದ್ಯತೆ ನೀಡಬೇಕು. ಯೆಮೆನ್‌ನಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಭಾರತೀಯ ರಕ್ಷಣಾ ತಂಡಗಳು ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ. ನೇಪಾಳದಲ್ಲೂ ಅದೆ ರೀತಿ ರಕಷ್ಣಾ ಕಾರ್ಯವನ್ನು ಅವರು ನಡೆಸಲಿದ್ದಾರೆ. ನಮ್ಮ ರಕ್ಷಣಾ ಕಾರ್ಯಕರ್ತರು ಇಡೀ ವಿಶ್ವವೇ ಬೆರಗಾಗುವಂಥ ಕೆಲಸ ಮಾಡಿದ್ದಾರೆ ಎಂದು ಮೋದಿ ಹೇಳಿದರು.

ಭಾರತ ಸದಾ ನೇಪಾಳದ ಜನತೆಯ ಕಷ್ಟಕ್ಕೆ ಸ್ಪಂದಿಸುತ್ತದೆ. ಹಾಗಾಗಿ ನೇಪಾಳಿಯರು ಭಯಪಡುವ ಅಗತ್ಯವಿಲ್ಲ. ಅವಶೇಷಗಳಡಿ ಸಿಲುಕಿರುವವರನ್ನೆಲ್ಲ ರಕ್ಷಿಸೋಣ ಎಂದು ಅವರು ಅಭಯ ನೀಡಿದರು. ಸೋಲಿನಿಂದ ನಾವು ಪಾಠ ಕಲಿಯಬೇಕೇ ಹೊರತು ಧೃತಿಗೆಡಬಾರದು. ಸೋಲಿನಿಂದ ಕಂಗೆಟ್ಟು ಹತಾಷೆಯ ಪ್ರತಿಕ್ರಿಯೆ ನೀಡಬಾರದು ಎಂದರು. ಟೀಮ್ ಇಂಡಿಯಾ (ಕ್ರಿಕೆಟ್) ತಂಡವನ್ನು ನಾವು ಸದಾ ಬೆಂಬಲಿಸಬೇಕು. ಗೆದ್ದಾಗ ಹೊಗಳುವುದು, ಸೋತಾಗ ತೆಗಳುವುದು ಸರಿಯಲ್ಲ ಎಂದು ಹೇಳಿದ ಮೋದಿ, ಟೆನಿಸ್ ತಾರೆಯರಾದ ಸಾನಿಯಾ ಮಿರ್ಜಾ ಮತ್ತು ಸೈನಾ ನೆಹ್ವಾಲ್ ಅವರನ್ನು ಪ್ರಶಂಸಿಸಿದರು. ಇವರ ಸಾಧನೆಗೆ ದೇಶವೇ ಗರ್ವ ಪಡುತ್ತಿದೆ ಎಂದರು.

Write A Comment