ರಾಷ್ಟ್ರೀಯ

2013-14ರಲ್ಲಿ ಎಫ್‌ಐಯುನಿಂದ 7,800 ಕೋಟಿ ರೂ. ಕಪ್ಪು ಹಣ ಪತ್ತೆ

Pinterest LinkedIn Tumblr

black-money

ನವದೆಹಲಿ, ಏ.26: ದೇಶದ ಒಳಗೆ ಮತ್ತು ಹೊರಗೆ 2013-14ರಲ್ಲಿ ಸುಮಾರು 7,800 ಕೋಟಿ ರೂ. ಕಪ್ಪುಹಣವನ್ನು ಪತ್ತೆ ಹಚ್ಚಿರುವ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್ (ಆರ್ಥಿಕ ಗುಪ್ತಚರ ಘಟಕ-ಎಫ್‌ಐಯು) ಈ ಮೊತ್ತವನ್ನು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿರುವ ಶಂಕೆ ವ್ಯಕ್ತಪಡಿಸಿದೆ. ಈ ಅವಧಿಯಲ್ಲಿ (2013-14) ಸುಮಾರು 7,078 ಕೋಟಿ ರೂ. ಮೊತ್ತದ ಲೆಕ್ಕಕ್ಕೆ ಸಿಗದ ಆದಾಯ ಹಾಗೂ ಆದಾಯ ತೆರಿಗೆ ಇಲಾಖೆಗೆ 750ಕೋಟಿ ರೂ.ಗಳಷ್ಟು ಭಾರೀ ಮೊತ್ತದ ತೆರಿಗೆ ವಂಚಿಸಿರುವ ಬಗ್ಗೆ ಎಫ್‌ಐಯು ಶೋಧಿಸಿ ಪತ್ತೆ ಹಚ್ಚಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವಾಲಯದ ವರದಿಯೊಂದು ತಿಳಿಸಿದೆ.

ಕೇಂದ್ರ ಹಣಕಾಸು ಸಚಿವಾಲಯದ ಒಂದು ಭಾಗವಾಗಿರುವ ಎಫ್‌ಐಯು ದೇಶಾದ್ಯಂತ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಭಾರೀ ಮೊತ್ತದ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಇದೇ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಕೂಡ 20 ಕೋಟಿ ರೂ. ಅಕ್ರಮ ನಗದು ಹಾಗೂ 17 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಿ ಜಫ್ತಿ ಮಾಡಿಕೊಂಡಿದೆ.

ಎಫ್‌ಐಯು ನೀಡಿರುವ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದ ಆದಾಯ ತೆರಿಗೆ (ಐಟಿ) ಇಲಾಖೆ ಕೆಲವು ಕಡೆ ದಾಳಿ ನಡೆಸಿ 163 ಕೋಟಿ ರೂ. ಆಸ್ತಿ ಹಾಗೂ ಸೇವಾಶುಲ್ಕ ಇಲಾಖೆ 17 ಕೋಟಿ ರೂ. ಆಸ್ತಿಗಳನ್ನು ಜಫ್ತಿ ಮಾಡಿಕೊಂಡಿದೆ ಎಂದು ವರದಿಯೊಂದು ಹೇಳಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಅವಧಿಯಲ್ಲೇ 105 ಹೊಸ ಕಪ್ಪುಹಣದ (ತೆರಿಗೆ ವಂಚನೆ) ಪ್ರಕರಣಗಳ ಬಗ್ಗೆ ಎಫ್‌ಐಆರ್ ದಾಖಲಿಸಿದ್ದು, ಅಕ್ರಮ ಹಣಕಾಸು ವ್ಯವಹಾರ ಹಾಗೂ ಹವಾಲಾ ವ್ಯವಹಾರದ ಮೇಲೂ ನಿಯಂತ್ರಣ ಹೇಳಿದೆ. ಒಟ್ಟಾರೆ ಎಫ್‌ಐಯು ಪತ್ತೆ ಹಚ್ಚಿರುವ ಕಪ್ಪು ಹಣದ ಮೊತ್ತ 7,848 ಕೋಟಿ ರೂ.ಗಳು.

Write A Comment