ರಾಷ್ಟ್ರೀಯ

ಅಪ್ರಾಪ್ತ ಬಾಲಕಿ ಮೇಲೆ ಅಪ್ಪ, ಅಣ್ಣ, ಚಿಕ್ಕಪ್ಪ ರಿಂದ ಅತ್ಯಾಚಾರ

Pinterest LinkedIn Tumblr

Girl-Rape

ನವದೆಹಲಿ, ಏ.11: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅವಳ ತಂದೆ, ಅಣ್ಣ ಹಾಗೂ ಚಿಕ್ಕಪ್ಪ ಅವರೇ ಕಳೆದ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ ಅತ್ಯಂತ ಅಮಾನವೀಯ, ಹೇಯ ಘಟನೆ ಮಹಿಳೆಯೇ ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದ ಜಲಪಾಯ್‌ಗುರಿ ಜಿಲ್ಲೆಯಲ್ಲಿ ನಡೆದಿದ್ದು, ಹಳ್ಳಿಗೆ ಹಳ್ಳಿಯೇ ತೀವ್ರ ಆಘಾತಕ್ಕೊಳಗಾಗಿದೆ.

ಈ ಮೂವರು ಕಿರಾತಕರು ಸತತವಾಗಿ ಎರಡು ವರ್ಷಗಳಿಂದಲೂ ಅತ್ಯಾಚಾರ ನಡೆಸಿದ್ದರೂ ಆ ಬಾಲಕಿಯ ತಾಯಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಗಳನ್ನು ರಕ್ಷಿಸುವ ಬದಲು ಅವರು ನಿನ್ನ ತಂದೆ, ಅಣ್ಣ, ಚಿಕ್ಕಪ್ಪ ತಾನೆ, ಹೊರಗಿನವರಲ್ಲವಲ್ಲ ಎಂದಿದ್ದಾಳೆ. ಬಾಲಕಿ ಎರಡು ಬಾರಿ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಲಾಗಿದೆ. ಇದರಿಂದ ಬೇಸತ್ತ ಬಾಲಕಿ ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಯಲಾಗಿದ್ದು ಹೀಗೆ: ತನ್ನವರಿಂದಲೇ ನಡೆದ ದೌರ್ಜನ್ಯ ಸಹಿಸಲಾರದೆ ಕೊನೆಗೆ ಧೈರ್ಯ ಮಾಡಿ ತನ್ನ ಶಾಲಾ ಶಿಕ್ಷಕಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಅದೇ ದಿನವೇ ಅವಳ 20 ವರ್ಷದ ಅಣ್ಣ ಅವರ ಕೈಗಳನ್ನು ಕಟ್ಟಿ ಹಾಕಿ ಅತ್ಯಾಚಾರ ನಡೆಸಿದ್ದಾನೆ.

ಮೂರನೆ ದಿನ ಶಾಲೆಗೆ ಹೋದಾಗ ಮತ್ತೆ ಶಿಕ್ಷಕಿ ಎದುರು ಎಲ್ಲವನ್ನೂ ಹೇಳಿದ್ದಾಳೆ. ಕೂಡಲೇ ಶಿಕ್ಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಪಡೆದು ಕಾರ್ಯಪ್ರವೃತ್ತರಾದ ಪೊಲೀಸರು ತಕ್ಷಣ ಮೂವರೂ ಕಿರಾತಕರನ್ನು ಬಂಧಿಸಿದ್ದಾರೆ. ಇದಕ್ಕೆಲ್ಲ ಬೆಂಬಲ ನೀಡಿದ್ದ ತಾಯಿ ತಲೆತಪ್ಪಿಸಿಕೊಂಡಿದ್ದಾಳೆ. ಬಾಲಕಿಯನ್ನು ಬಾಲಮಂದಿರದಲ್ಲಿ ಬಿಡಲಾಗಿದೆ. ಈ ಕಥೆ ಕೇಳಿದ ಜಲಪಾಯ್‌ಗುರಿ ಜಿಲ್ಲೆಯ ಧೂಪ್‌ಗುರಿ ಜನ ತೀವ್ರ ಆಘಾತಕ್ಕೊಳಗಾಗಿದ್ದಾರೆ.

Write A Comment