ರಾಷ್ಟ್ರೀಯ

ಬಿಎಸ್‌ಎಫ್ ಯೋಧನಿಂದ ಸಹೋದ್ಯೋಗಿ ಹತ್ಯೆ

Pinterest LinkedIn Tumblr

Firing

ಕೋಲ್ಕತ್ತಾ, ಫೆ.17: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧನೊಬ್ಬ ತನ್ನ ಮಿಲಿಟರಿ ಬಂದೂಕಿನಿಂದ ಗುಂಡು ಹಾರಿಸಿ, ತನ್ನ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ಇತರ ಮೂವರನ್ನು ಗಾಯಗೊಳಿಸಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬಸಂತ್‌ಸಿಂಗ್ ಎಂಬ ಬಿಎಸ್‌ಎಫ್ ಯೋಧ ಫರಕ್ಕಾ ಬೆಟಾಲಿಯನ್ ಶಿಬಿರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಮೂಲ್‌ಚಂದ್ ಎಂಬ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಮಲ್ ಬಾಸಾ, ಎಸ್.ಕೆ.ಪ್ರಭಾಕರ್ ಹಾಗೂ ಸುರೇಂದರ್ ಗಾಯಗೊಂಡವರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಗುಂಡು ಹಾರಿಸಿದ ಸಿಂಗ್ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ.

Write A Comment