ರಾಷ್ಟ್ರೀಯ

ಗಣರಾಜ್ಯೋತ್ಸವದ ನಡುವೆಯೇ ಅಸ್ಸಾಂನಲ್ಲಿ 2 ಬಾಂಬ್ ಸ್ಫೋಟ

Pinterest LinkedIn Tumblr

Bomb-Blasttt

ಗುವಾಹಟಿ,ಜ.26: ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ನಡೆದಿರುವಂತೆಯೇ ಅಸ್ಸಾಂನತೀನ್ ಸುಖಿಯ ಜಿಲ್ಲೆಯ ದಿಗ್ಬೊಯಿಯಲ್ಲಿ 2 ಬಾಂಬ್‌ಗಳು ಸ್ಫೋಟಿಸಿರುವ ಘಟನೆ ನಡೆದಿದೆ. ಎರಡೂ ಬಾಂಬ್‌ಗಳೂ ಕಡಿಮೆ ತೀವ್ರತೆಯಿಂದ ಕೂಡಿದ್ದು, ಇದುವರೆಗೆ ಯಾವುದೇ ಸಾವುನೋವಿನ ಬಗ್ಗೆ ವರದಿ ಬಂದಿಲ್ಲ. ರೈಲು ಹಳಿಯ ಬಳಿ ಸುರಿದಿದ್ದ ಕಸದ ರಾಶಿಯಲ್ಲಿ ಒಂದು ಹಾಗೂ ಅಲ್ಲಿಗೆ ಸಮೀಪದ ಚರಂಡಿಯಲ್ಲಿ ಇನ್ನೊಂದು ಬಾಂಬ್ ಸ್ಫೋಟಗೊಂಡಿವೆ. ಈ ಎರಡೂ ಬಾಂಬ್‌ಗಳೂ ಕೈಯಿಂದ ತಯಾರಿಸಲ್ಪಟ್ಟಿದ್ದು ಕಡಿಮೆ ಅಪಾಯದವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment