ರಾಷ್ಟ್ರೀಯ

ಕ್ರಿಸ್‌ಮಸ್ ರಜೆ ಆಸೆಗೆ ತಣ್ಣೀರು; ಸಚಿವರು, ಸಂಸದರು, ಸರ್ಕಾರಿ ನೌಕರರಿಗಿಲ್ಲ ರಜೆ

Pinterest LinkedIn Tumblr

Christmas

ನವದೆಹಲಿ: ಕ್ರಿಸ್‌ಮಸ್ ಹಬ್ಬದಂದು ರಜೆಯ ಮಜಾ ಅನುಭವಿಸಬಹುದು ಎಂಬ ಕೇಂದ್ರ ಸರ್ಕಾರಿ ನೌಕರರು ಹಾಗೂ ಸಚಿವರುಗಳ ಆಸೆಗೆ ತಣ್ಣೀರು ಬಿದ್ದಿದೆ. ಕ್ರಿಸ್‌ಮಸ್‌ನಂದು ರಜೆ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿರುವುದೇ ಇದಕ್ಕೆ ಕಾರಣ.

ಪ್ರಸಕ್ತ ವರ್ಷದ ಡಿ.25 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಉತ್ತಮ ಆಡಳಿತ ದಿನ’ ಎಂದು ಈಗಾಗಲೇ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಆ ದಿನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು, ಹಾಗಾಗಿ ಕೇಂದ್ರ ಸರ್ಕಾರಿ ನೌಕರರು ಗುರುವಾರದಂದು ರಜೆ ತೆಗೆದುಕೊಳ್ಳದೆ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕು.

ಸಚಿವರು ಹಾಗೂ ಸಂಸದರು ಸೂಕ್ಷ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಉತ್ತಮ ಆಡಳಿತ ಹಾಗೂ ನೈರ್ಮನ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಬೇಕು. ಅಷ್ಟೇ ಅಲ್ಲ, ಸೆಮಿನಾರ್‌ಗಳು, ಇ-ಆಡಳಿತ ಶಿಬಿರಗಳು, ಡಿಜಿಟಲ್ ಸಾಕ್ಷತರೆ ಮತ್ತಿತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂದು ಪ್ರಧಾನಿ ಕಾರ್ಯಾಲಯದ ಸುತ್ತೋಲೆ ತಿಳಿಸಿದೆ.

ಸಚಿವರು, ಸರ್ಕಾರಿ ನೌಕರರು ಕೈಗೊಳ್ಳಬೇಕಾದ ಚಟುವಟಿಕೆಗಳ ವಿವರಗುಳ್ಳ ಮತ್ತೊಂದು ಸುತ್ತೋಲೆಯನ್ನು ಸದ್ಯದಲ್ಲೇ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಕಳುಹಿಸಲಿದೆ.

Write A Comment