ರಾಷ್ಟ್ರೀಯ

ಪ್ರೀತಿಸಿ ಮೋಸ ಮಾಡಿದ ಉಪನ್ಯಾಸಕನ ಮೇಲೆ ವಿದ್ಯಾರ್ಥಿನಿಯಿಂದ ಆಸಿಡ್ ದಾಳಿ

Pinterest LinkedIn Tumblr

stop

ಗುಂಟೂರು, ಡಿ.21: ಮದುವೆಯಾಗುವುದಾಗಿ ಹೇಳಿ ನಂತರ ಬೇರೆಯವಳನ್ನು ವಿವಾಹವಾದ ಉಪನ್ಯಾಸಕನ ಮೇಲೆ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆಸಿಡ್ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಲ್ಲಪಾಡು ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.

ಇತರರಿಗೆ ಗುರುತು ಸಿಕ್ಕದಂತೆ ಬುರ್ಖಾ ಧರಿಸಿದ್ದ ಯುವತಿ ಸೌಜನ್ಯ ತನ್ನ ಹಳೆಯ ಉಪನ್ಯಾಸಕ ವೆಂಕಟರಮಣ ಕಾಲೇಜ್ ಗೇಟ್‌ನಲ್ಲಿ ಬರುತ್ತಿದ್ದಂತೆ ಅವನ ಮೇಲೆ ಆಸಿಡ್ ಎರಚಿದ್ದಾಳೆ. ಮುಖದ ಮೇಲೆ ಆಸಿಡ್ ಬಿದ್ದು ಉಪನ್ಯಾಸಕ ವೆಂಕಟರಮಣ ತೀವ್ರ ಗಾಯಗೊಂಡಿದ್ದಾನೆ. ಈ ಸಂದರ್ಭ ಸೌಜನ್ಯಳ ದಾಳಿ ತಡೆಯಲು ಮುಂದಾದ ವೆಂಕಟರಮಣ ಅವಳ ಕೈಗಳನ್ನು ಹಿಡಿದುಕೊಂಡಿದ್ದಾನೆ.

ಈ ವೇಳೆ ಸೌಜನ್ಯಳ ಮುಖದ ಮೇಲೂ ಕೆಲವು ಹನಿಗಳು ಬಿದ್ದಿದ್ದು, ಆಕೆಯೂ ಗಾಯಗೊಂಡಿದ್ದಾಳೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ನರಸಿಂಹ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:

ಈ ಮೊದಲು ವೆಂಕಟರಮಣ ನರಸರಾವ್‌ಪೇಟ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ. ಸೌಜನ್ಯ ಅವನ ವಿದ್ಯಾರ್ಥಿನಿಯಾಗಿದ್ದಳು. ಇವರಿಬ್ಬರಲ್ಲೂ ಪ್ರೇಮಾಂಕುರವಾಯಿತು. ಅದು ಮದುವೆ ಹಂತಕ್ಕೂ ಬಂತು. ಸೌಜನ್ಯಳನ್ನು ಮದುವೆಯಾಗುತ್ತೇನೆಂದು ಅವಳಿಗೆ ಭಾಷೆಯನ್ನೂ ನೀಡಿದ್ದ. ಕೆಲವು ಕಾಲ ಕಳೆಯುತ್ತಿದ್ದಂತೆ ಸೌಜನ್ಯ ತನ್ನ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ವಿಶಾಖಪಟ್ಟಣಂಗೆ ತೆರಳಿದ್ದಳು. ವೆಂಕಟರಮಣ ನಲ್ಲಪಾಡುವಿನ ಸರ್ಕಾರಿ ಪಾಲಿಟೆಕ್ನಿಕ್‌ಗೆ ವರ್ಗಾವಣೆಯಾಗಿ ಹೋದ. ಸೌಜನ್ಯ ತಾನು ವೆಂಕಟರಮಣನ ನಿರೀಕ್ಷೆಯಲ್ಲೇ ಇದ್ದರೆ. ಅತ್ತ ವೆಂಕಟರಮಣ ಕಳೆದ ವರ್ಷ ಬೇರೊಬ್ಬಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಅಂತೂ ಸೌಜನ್ಯ-ವೆಂಕಟರಮಣನ ಪ್ರೇಮ ಆಸಿಡ್‌ನಲ್ಲಿ ಅಂತ್ಯಗೊಂಡಿದೆ.

Write A Comment