ರಾಷ್ಟ್ರೀಯ

ಸಾನಿಯಾ -ಶೋಯಿಬ್ ಮಲಿಕ್ ಗಾಸಿಪ್ ಸುದ್ದಿಗೆ ತೆರೆ; ನಾವಿಬ್ಬರು ಒಟ್ಟಿಗೆ ಇದ್ದೇವೆ: ಸಾನಿಯಾ

Pinterest LinkedIn Tumblr

sania-mirza-shoai

ಹೈದರಾಬಾದ್: ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸಾನಿಯಾ ಮತ್ತು ಶೋಯಿಬ್ ಮಲಿಕ್ ಕೆಲ ತಿಂಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನುವ ಗಾಸಿಪ್ ಸುದ್ದಿಗೆ ಸಾನಿಯಾ ಇದೀಗ ತೆರೆ ಎಳೆದಿದ್ದಾರೆ.

ಮಾಧ್ಯಮಗಳ ವಿಚ್ಛೇದನ ವದಂತಿಗಳನ್ನು ಸುಳ್ಳು ಮಾಡಲೆಂದೇ ನಿನ್ನೆ ತನ್ನ ಫೇಸ್ ಬುಕ್‍ನಲ್ಲಿ ಪತಿ ಶೋಯಿಬ್ ಜೊತೆಗಿರುವ ಮುದ್ದಾದ ಫೊಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಟೆನ್ನಿಸ್ ಸೂಪರ್ ಸ್ಟಾರ್ ಸಾನಿಯಾ ಇತ್ತೀಚಿನ ದಿನದಲ್ಲಿ ತನ್ನ ವೃತ್ತಿಜೀವನದಲ್ಲಿ ವಿಜೃಂಭಿಸುತ್ತಿದ್ದು, ಪಾಕಿಸ್ತಾನಿ ಕ್ರಿಕೆಟಿಗ ಪತಿ ಶೋಯಿಬ್ ಜೊತೆಗೆ ಇರದೆ ಭಾರತದಲ್ಲೇ ತನ್ನ ಪೋಷಕರೊಂದಿಗೆ ಹೆಚ್ಚು ಸಮಯ ಕಳಿಯುತ್ತಿದ್ದಾರೆ. ಶೋಯಿಬ್ ಕೂಡ ಪಾಕ್‍ನ ನಟಿಯೊಂದಿಗೆ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು ದಾಂಪತ್ಯದ ಬಿರುಕಿಗೆ ಕಾರಣವಾಗಿದೆ. ಹೀಗಾಗಿ ಇವರು ವಿಚ್ಛೇದನ ಪಡೆಯಲು ಮುಂದಾಗುತ್ತಿದ್ದಾರೆ ಎನ್ನುವ ಸುದ್ದಿ ಎಂದು ಮಾಧ್ಯಮ ಮತ್ತು ಅವರ ಅಭಿಮಾನಿಗಳಲ್ಲಿ ಹರಿದಾಡುತ್ತಿತ್ತು.

ಈ ಎಲ್ಲಾ ವದಂತಿಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತನ್ನ ಪತಿ ಶೋಯಿಬ್ ಜೊತೆಗಿನ ¯ವ್ವಿ ಡವ್ವಿ ಫೋಟೋ ಒಂದನ್ನು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡುತ್ತಾ ದಾಂಪತ್ಯ ಜೀವನದ ಬಗ್ಗೆ ಹರಡಿದ್ದ ವದಂತಿಗಳನ್ನು ಸಾನಿಯಾ ತಳ್ಳಿ ಹಾಕಿದ್ದಾರೆ.

ಟಾಲಿವುಡ್ ನಟ ರಾಮ್ ಚರಣ್ ತೇಜಾ ಜೊತೆಗೆ ಸಾನಿಯಾ ಸಂಬಂಧವಿರೋದೆ ಇವರಿಬ್ಬರ ವಿಚ್ಛೇದನಕ್ಕೆ ಕಾರಣ ಎಂದು ಸುದ್ದಿಯಾಗಿತ್ತು. ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಅನ್ಯ ದೇಶದವರಾಗಿದ್ದು, ಈ ಆಟಗಾರರು ತಮ್ಮ ವಿವಾಹ ಜೀವನ್ನವನ್ನು ಮತ್ತು ಮಾಧ್ಯಮ ಜೊತೆಗಿನ ಸಂಬಂಧವನ್ನ ಕಾಯ್ದುಕೊರ್ಳಳುವುದು ಕಷ್ಟವಾಗಿರಬಹುದು. ಆದರೆ ಕಾದಾಡುತ್ತಿರುವ ದೇಶಗಳ ನಡುವೆ ಇವರ ದಾಂಪತ್ಯ ಉತ್ತಮ ಭರವಸೆ ನೀಡುವಂತಾಗಲಿ ಎಂದು ಆಶಿಸೋಣ.

Write A Comment