ಕರಾವಳಿ

ಸಿಟಿ ಸೆಂಟರ್‌ನಲ್ಲಿ ಕ್ರಿಸ್ಮಸ್ ಸಂಭ್ರಮ.

Pinterest LinkedIn Tumblr

city_centre_photo_1

ಮಂಗಳೂರು,ಡಿ.18 : ಅತ್ಯಂತ್ರ ಪ್ರತಿಷ್ಠಿತ ಹಾಗೂ ಸದಾ ವಿವಿಧ ಚಟುವಟಿಕೆಗಳಿಂದ ಜನರನ್ನು ಆಕರ್ಷಿಸುತ್ತಿರುವ ಸಿಟಿ ಸೆಂಟರ್ ಮಾಲ್ ಡಿಸೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಕ್ರಿಸ್ಮಸ್ ಖರೀದಿಯು ಭರದಿಂದ ಸಾಗಿದ್ದು, ಈ ಸಂಭ್ರಮದಲ್ಲಿ ಮಾಲ್‌ನ ಆಡಳಿತ ಮಂಡಳಿಯು ವಿವಿಧ ಕಾರ್ಯಕ್ರಮಗಳು ಹಾಗೂ ಮಕ್ಕಳಿಗಾಗಿ ವಿಶೇಷ ಸ್ಟರ್ಧೆಗಳನ್ನು ಆಯೋಜಿಸಿ ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸುತ್ತಿದೆ.

city_centre_photo_2

ಈ ಪ್ರಯುಕ್ತ ಇತ್ತೀಚೆಗೆ ವಿಶೇಷವಾಗಿ ಆಯೋಜಿಸಿದ್ದ ಪ್ಯಾಂಟಲೂನ್ ಫ್ಯಾಷನ್ ನಡಿಗೆ ಎಲ್ಲರ ಮನ ಸೆಳೆಯಿತು. ಹಿಮ್ಮೇಳದ ಜೊತೆಗೆ ಸ್ಥಳದಲ್ಲೇ ಕಲಾವಿದನ ಕುಂಚದಿಂದ ಅರಳಿದ ಪೋರ್ಟ್ರೈಟ್ ಭಾವಚಿತ್ರಗಳು ಕಲಾ ಪ್ರೇಮಿಗಳನ್ನು ಆಕರ್ಷಿಸಿದವು. ಜತೆಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಪುಟಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು.

city_centre_photo_3

ಈ ಸಂಭ್ರಮಾಚರಣೆಯಲೂ ಮಾಲ್‌ನ ಆಡಳಿತ ಮಂಡಳಿಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತಿಲ್ಲ. ಇದಕ್ಕಾಗಿ ಮಾಲ್‌ನ ಮಧ್ಯದಲ್ಲಿ ವಿಶ್ ಟ್ರೀಯನ್ನು ಇರಿಸಿದ್ದು ಅದರಲ್ಲಿ ಪ್ರಜ್ಞಾ ಸೆಂಟರ್‌ನ ಮಕ್ಕಳ ವಿವಿಧ ಬಯಕೆಗಳನ್ನು ಬಿತ್ತರಿಸಲಾಗಿದೆ. ಗ್ರಾಹಕರು ಡಿಸೆಂಬರ್ ಅಂತ್ಯದೊಳಗಾಗಿ ಯಾವುದೇ ಮಗುವಿನ ಬಯಕೆಯನ್ನು ಈಡೇರಿಸಿ ಮಕ್ಕಳಲ್ಲಿ ಮಂದಹಾಸ ಮೂಡಿಸುವ ಅಪೂರ್ವ ಅವಕಾಶವನ್ನು ಸಹ ಕಲ್ಪಿಸಲಾಗಿದೆ.

ಪ್ರಜ್ಞಾ ಸೆಂಟರ್‌ನ ಮಕ್ಕಳಿಗೆ ಗಿಫ್ ಗಳನ್ನು ಕೊಡುವ ಅವಕಾಶವನ್ನು ಸಾರ್ವಜನಿಕರಿಗೆ ನೀಡುವ ಮೂಲಕ ನಾವು ಮಕ್ಕಳ ಮನಸ್ಸನ್ನು ಖುಷಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಂಗಳೂರು ಸಿಟಿ ಸೆಂಟರ್‌ನ ಮಾರ್ಕೆಟಿಂಗ್ ಆಂಡ್ ಕಮ್ಯುನಿಕೇಶನ್ ನ ಮ್ಯಾನೇಜರ್ ಸುನಿಲ್ ಕೆ.ಎಸ್ ತಿಳಿಸಿದರು.

Write A Comment