ಕನ್ನಡ ವಾರ್ತೆಗಳು

ಬಲ್ಲಂಗೇರಿ- ಅಂಗರಕರಿಯ ಇದರ ಪುನರ್ ನಿರ್ಮಾಣ ಸಮಿತಿಯ ಸಮಾಲೋಚನಾ ಸಭೆ

Pinterest LinkedIn Tumblr

samalochne_sabhe_photo

ವೇಣೂರು,ಡಿ.18:  ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇದರ ಪುನರ್ ನಿರ್ಮಾಣ ಸಮಿತಿಯ ಸಮಾಲೋಚನಾ ಸಭೆ ಕ್ಷೇತ್ರ ಆವರಣದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಯನ್.ಸೀತಾರಾಮ ರೈ ವಹಿಸಿದ್ದರು. ಜನವರಿ 5 ರಂದು ಬೆಳಗ್ಗೆ 10 ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ ತಂತ್ರಿವರ್ಯ ಬ್ರಹ್ಮಶ್ರೀ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಕ್ಷೇತ್ರ ನಿರ್ಮಾಣದ ಬಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಸುವ ವಿಷಯದಲ್ಲಿ ವಿಚಾರ ವಿಮರ್ಶೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜ.೩ರಂದು ನಡೆಯಲಿರುವ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭದ ಧಾರ್ಮಿಕ ವಿಧಿ ವಿಧಾನಗಳ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೋಶಾಧಿಕಾರಿ ಉದಯ ಕುಮಾರ್, ಕಾರ್ಯದರ್ಶಿ ಕಿರಣ್ ಕುಮಾರ್, ಪ್ರಚಾರ ಸಮಿತಿ ಮುಖ್ಯಸ್ಥ ಹರೀಶ್ ಕೆ.ಆದೂರು, ಸಮಿತಿ ಸದಸ್ಯರಾದ , ಸತೀಶ್ ಶೆಟ್ಟಿ, ಗಂಗಾಧರ್ ಆಚಾರ್ಯ,ನಾಗೇಶ್ ಕೋಟ್ಯಾನ್,ಗೋಪಾಲಕೃಷ್ಣ ಭಟ್, ರಾಜೇಶ್ ಭಟ್ ಮಂದಾರ ಉಪಸ್ಥಿತರಿದ್ದರು.

Write A Comment