ರಾಷ್ಟ್ರೀಯ

ಅವರು ನನ್ನನ್ನು ಒಮ್ಮೆ ಕರೆದರೆ ಸಾಕು ಮನೆಗೆ ಹೋಗುವೆ

Pinterest LinkedIn Tumblr

modi-wife

ಅಹಮದಾಬಾದ್, ನ.25: ಅವರು ನನ್ನನ್ನು ಒಂದು ಬಾರಿ ಕರೆದರೆ ಸಾಕು, ಖಂಡಿತವಾಗಿಯೂ ಮನೆಗೆ ಹೋಗುವೆ. ಹೀಗೆ ಹೇಳಿದ್ದು ಬೇರ‍್ಯಾರೂ ಅಲ್ಲ , ಪ್ರಧಾನಮಂತ್ರಿ ನರೇಂದ್ರಮೋದಿಯವರ ಪತ್ನಿ ಜಶೋದಾ ಬೆನ್. ವಿವಾಹವಾದ ಬಳಿಕ ಕಳೆದ 43 ವರ್ಷಗಳಿಂದ ಪರಸ್ಪರ ದೂರವಾಗಿರುವ ಜಶೋದಾ ಬೆನ್ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಾಸ ಮಾಡುತ್ತಿದ್ದಾರೆ.

ನನ್ನನ್ನು ಮೋದಿಯವರು ಮನೆಗೆ ಆಹ್ವಾನಿಸಿದರೆ ಖಂಡಿತವಾಗಿಯೂ ಹೋಗಲು ಸಿದ್ಧಳಿದ್ದೇನೆ. ಆದರೆ, ಕರೆಯದೆ ಹೋಗುವುದು ಹೇಗೆ ಎಂಬ ಮುಜುಗರ ನನಗಿದೆ. ಒಂದಲ್ಲ ಒಂದು ದಿನ ನನಗೆ ಆಹ್ವಾನ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗತಕಾಲದಲ್ಲಿ ಆಗಿರುವ ಕೆಟ್ಟ ಘಳಿಗೆಗಳನ್ನು ಮರೆತು ಒಂದಾಗಬೇಕೆಂದು ಹಿರಿಯರು ಸಲಹೆ ಮಾಡಿದ್ದಾರೆ.

ನನಗೂ ಅವರ ಜತೆ ಕೊನೆಯ ಕ್ಷಣಗಳನ್ನು ಕಳೆಯಬೇಕೆಂಬ ಮಹದಾಸೆ ಇದೆ. ಆದರೆ, ಅಂತಹ ಒಳ್ಳೆಯ ದಿನ ಬರುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಬಳಿಕ ಜಶೋದಾ ಬೆನ್‌ಗೆ ಜೆಡ್‌ಪ್ಲಸ್ ಭದ್ರತೆ ನೀಡಲಾಗಿದೆ. ತಮ್ಮ ಅಂಗರಕ್ಷಕರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ತಮಗೆ ನೀಡಿರುವ ಭದ್ರತೆಯ ಆರ್‌ಟಿಐ ಅರ್ಜಿ ಸಲ್ಲಿಸಿದ್ದಾರೆ.

Write A Comment