ರಾಷ್ಟ್ರೀಯ

ದೇಶೀ ರುಚಿ ಬಡಿಸಲು ಹೊರಟ ಶ್ರೀನಿವಾಸ್, ಸತ್ಯನ್ ರಲಿಯಾ ಸಿದ್ದೀಕ್, ಪರ್ಲಿಯ

Pinterest LinkedIn Tumblr

pattayam

ತೃಶೂರ್: ಮಲೆಯಾಳಂ ಸಿನೆಮಾ ನಿರ್ದೇಶಕ ಸತ್ಯನ್ ಅಂದಿ ಕ್ಕಾಡ್ ಹಾಗೂ ಜನಪ್ರಿಯ ನಟ ಶ್ರೀನಿವಾಸನ್ ಜೊತೆಯಾಗಿ ಪತ್ತಾಯಂ (ಹೊಟೇಲ್) ತೆರೆದಿದ್ದಾರೆ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ವಿಷಯವಿರುವುದೇ ಅಲ್ಲಿ…

ಅಲ್ಲಿ ನಿಮಗೆ ರಾಸಾಯನಿಕ ಬೆರೆತ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಆಹಾರ ಕಾಣ ಸಿಗುವುದಿಲ್ಲ. ಬದಲಾಗಿ ವಿಷ ಬೆರೆಯದ ತರಕಾರಿ ಗಳು, ಅಕ್ಕಿಯ ಆಹಾರವನ್ನು ಮಾತ್ರ ಬಡಿಸುವುದರ ಜೊತೆಗೆ ಏನು ತಿನ್ನ ಬೇಕು, ಯಾವುದನ್ನು ತಿನ್ನಬಾರದುಎಂಬುದನ್ನು ಕೂಡ ಹೇಳಿಕೊಡಲಾ ಗುತ್ತದೆ.

ಹೊಟೇಲಲ್ಲಿ ಬರೆದಿಡಲಾದ ಒಂದು ಪ್ರಕಟನೆ ಹೀಗಿದೆ. ‘ಮೈದಾ, ಪೋಸ್ಟರ್‌ಗಳನ್ನು ಅಂಟಿಸಲು ಬಳ ಸುವ ಅಂಟು, ಅದು ಆಹಾರವಲ್ಲ.’

ಹೊಟೇಲಲ್ಲಿ ಬೆಳಗ್ಗಿನ ಆಹಾರಕ್ಕೆ ಪುಟ್ಟು, ಇಡ್ಲಿ, ದೋಸೆ ಮತ್ತಿತರ ತಿಂಡಿ ಗಳನ್ನು ಮಾಡಲಾಗುತ್ತದೆ. ಪದಾರ್ಥ ಹಾಗೂ ನಾಲ್ಕು ಇಡ್ಲಿಗೆ ಒಟ್ಟು 35 ರೂಪಾಯಿ. ಬೆಳಗ್ಗೆ 6:30ಕ್ಕೆ ಹೊಟೇ ಲ್ ತೆರೆದು, ರಾತ್ರಿ 9 ಗಂಟೆಗೆ ಮುಚ್ಚ ಲಾಗುತ್ತದೆ. ಇಲ್ಲಿ ಹಣ್ಣಿನ ರಸದ ದೊಡ್ಡ ವಿಭಾಗವಿದೆ. ಇಲ್ಲಿ ಕೊಡುವ ಜ್ಯೂಸ್‌ಗೆ ಸಕ್ಕರೆ ಹಾಗೂ ಐಸ್ ಹಾಕುವುದಿಲ್ಲ. ಸ್ಟ್ರಾ ಕೂಡ ಕೊಡುವುದಿಲ್ಲ. ಆಹಾರದ ಸ್ವಾದವನ್ನು ಅನುಭವಿಸಿ ತಿನ್ನಬೇಕೇ ಹೊರತು ಅದು ನೇರವಾಗಿ ಗಂಟಲಿಗೆ ಸುರಿಯುವಂತಹದ್ದಲ್ಲ ಎಂಬುದೇ ಇದರ ಹಿಂದಿನ ಉದ್ದೇಶ. ಇಲ್ಲಿ ದೇಶೀ ಸಿಹಿ ತಿಂಡಿ ಹಾಗೂ ಜೇನಿನಲ್ಲಿ ಅದ್ದಿದ ನೆಲ್ಲಿಕಾಯಿಯೂ ದೊರೆಯುತ್ತದೆ.

ಮಧ್ಯಾಹ್ನದ ಊಟದಲ್ಲಿ ಎರಡು ವಿಧವಿದೆ. ಸಾದ ಹಾಗೂ ಸ್ಪೆಶಲ್. ಹಣ್ಣು, ತರಕಾರಿಗಳು, ಮಜ್ಜಿಗೆ, ರಸಂ, ಪಾಯಸ ಜೊತೆ ಸೇರಿದರೆ ಅದು ಸ್ಪೆಶಲ್. ಇದಕ್ಕೆ 100 ರೂಪಾಯಿ. ಸಾದಾ ಊಟಕ್ಕೆ 50 ರೂಪಾಯಿ. ಕೆಂಪು ಮೆಣಸು, ಸಕ್ಕರೆ, ಹುಳಿ, ಮಸಾಲೆ ಹುಡಿಗಳು, ಸಾಸಿವೆ, ಉಪ್ಪಿನಕಾಯಿ, ಹಪ್ಪಳ, ಹಾಲು ಇಲ್ಲಿ ಸಿಗುವುದಿಲ್ಲ. ಆರೋಗ್ಯಕ್ಕೆ ಉತ್ತಮ ಎಂದು ಖಚಿತವಾಗಿರುವ ಆಹಾರ ಪದಾರ್ಥಗಳನ್ನು ಮಾತ್ರ ಇಲ್ಲಿ ನೀಡಲಾಗುತ್ತದೆ. ಇಲ್ಲಿ ತಿನ್ನುವ ಆಹಾರ ಪದಾರ್ಥಗಳಲ್ಲಿ ಏನೆಲ್ಲ ಗುಣವಿದೆ ಎಂಬುದನ್ನು ತಿಳಿಸಲಾಗುತ್ತದೆ. ಯಾವುದೇ ಸಮಯದಲ್ಲಿ ಹೋದರೂ ಹಣ್ಣುಗಳನ್ನು ಕತ್ತರಿಸಿ ಕೊಡಲು ಇಲ್ಲಿನ ಸಿಬ್ಬಂದಿ ಸಿದ್ಧರಿರುತ್ತಾರೆ. ತೃಶೂ ರಿನ ಹಣ್ಣುಗಳ ಅಂಗಡಿಯಲ್ಲಿ ಯೂ ಫ್ರುಟ್ ಬೌಲ್ ಸಿಗುವು ದಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ಹಣ್ಣುಗಳನ್ನು ತಿನ್ನಲು ಬಯಸುವ ಹಲವರು ಈಗ ಅದನ್ನು ಹುಡು ಕಿಕೊಂಡು ಹೋಗುತ್ತಾರೆ.

ಇನ್ನು ಇಂತಹ ಅಹಾರ ಪದಾರ್ಥಗಳನ್ನು ಕಲಿಯಬೇಕು ಎಂಬ ಆಗ್ರಹವಿದ್ದರೆ ಅದನ್ನು ಕಲಿಸಿಕೊಡಲೂ ಇಲ್ಲಿನ ಸಿಬ್ಬಂದಿ ರೆಡಿ. ಹೊಟೇಲಿನ ಸಾರಥಿ ಸಿ.ವಿ.ಗಂಗಾಧರರಿಗೆ ಕರೆ ಮಾಡಿದರೆ ಅಲ್ಲಿ ಅಡುಗೆ ಕಲಿಯಲು ವ್ಯವಸ್ಥೆ ಮಾಡುತ್ತಾರೆ. ಫೋನ್ ನಂಬರ್. 9387391082.

ಸತ್ಯನ್ ಅಂದಿಕ್ಕಾಡ್ ಹಾಗೂ ಶ್ರೀನಿವಾಸನ್ ಅಂಗಡಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋ ಗುವುದಿಲ್ಲ. ಮತ್ತೆ ಇವರೇಕೆ ಹೊಟೇಲನ್ನು ಹುಡುಕಿ ಬಂದರು ಎಂಬ ಪ್ರಶ್ನೆ ಬರಬಹುದು. ವಿಷರಹಿತ ಆಹಾರ ಎಂಬ ಕನಸನ್ನು ಪ್ರೋತ್ಸಾಹಿಸುವುದು ಮಾತ್ರ ಈಗ ಅವರ ಮುಂದಿರುವ ಗುರಿ.

ವಿಷರಹಿತ ಸಿನೆಮಾ ಮಾಡಿ ಜನರಿಗೆ ಉಣಿಸಿದ ಇಬ್ಬರೂ ಈಗ ಆಹಾರ ಬಡಿ ಸುವುದರಲ್ಲಿ ನಿರತರಾಗಿದ್ದಾರೆ. ಜೊತೆ ಗೆ ಇಂತಹ ಕೆಲಸಗಳನ್ನು ಮಾಡುತ್ತಿ ರುವವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ತಿರು ವನಂತಪುರಂ ಹಾಗೂ ಕೋಝಿಕ್ಕೋಡ್‌ನಲ್ಲಿರುವ ‘ಪತ್ತಾಯಂ’ಗೆ ಇವರು ನಿತ್ಯ ಭೇಟಿನೀಡುತ್ತಿದ್ದಾರೆ. ಎರಡು ಕಡೆಗಳಲ್ಲಿ ಎರಡು ‘ಪತ್ತಾ ಯಂ’ಗಳಿವೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ನಗರದಲ್ಲಿ ಹೊಟೇಲ್ ಗಳನ್ನು ತೆರೆಯಲು ಇವರು ಚಿಂತನೆ ನಡೆಸುತ್ತಿದ್ದಾರೆ.

Write A Comment