
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಯುಎಇ ಚಾಪ್ಟರ್ ವತಿಯಿಂದ ದುಬೈನ ಪ್ರತಿಷ್ಠಿತ ಎಡ್ರಸ್ ಹೋಟೆಲ್ ನ ಬಾಲ್ ರೂಮಿನಲ್ಲಿ ಮಾರ್ಚ್ 7ರಂದು ಬ್ಯುಸಿನೆಸ್ ನೆಟ್ವರ್ಕ್ ಸಮ್ಮಿಟ್ ಮತ್ತು ಮೊಬೈಲ್ ಆಪ್ ಲಾಂಚ್ ಕಾರ್ಯಕ್ರಮ ನಡೆಯಲಿದೆ.
ಬುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಆಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದೊಂದಿಗೆ ಕಳೆದ ಎರಡು ವರ್ಷಗಳಿಂದ ಯುಎಇಯಲ್ಲಿ ಸಕ್ರಿಯವಾಗಿರುವ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಯುಎಇ ಇದೀಗ ಬ್ಯುಸಿನೆಸ್ ನೆಟ್ವರ್ಕಿಂಗ್’ಗನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ಹೆಚ್ಚಿನ ಜನರಿಗೆ ಉಪಯುಕ್ತವಾಗಿಸುವ ಉದ್ದೇಶದಿಂದ ಮೊಬೈಲ್ ಆಪ್ ಲಾಂಚ್ ಮಾಡಲು ಉದ್ದೇಶಿಸಿದೆ ಎಂದು ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದ ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್ ಅಧ್ಯಕ್ಷರಾದ ಎಸ್. ಎಮ್ ಬಷೀರ್ ತಿಳಿಸಿದರು.
ಬಿ.ಸಿ.ಎಫ್ ಅಧ್ಯಕ್ಷರಾದ ಡಾ| ಬಿ.ಕೆ ಯೂಸುಫ್ ಬ್ಯುಸಿನೆಸ್ ನೆಟ್ವರ್ಕ್ ಸಮ್ಮಿಟ್ ಉದ್ಘಾಟಿಸಲಿದ್ದು, ಬ್ಯಾರೀಸ್ ಚೇಂಬರ್ಸ್ ಅಧ್ಯಕ್ಷರಾದ ಎಸ್ ಎಂ ರಶೀದ್ ಹಾಜಿಯವರು ಬಹುನಿರೀಕ್ಷಿತ ಮೊಬೈಲ್ ಆಪ್ ಲಾಂಚ್ ಮಾಡಲಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದಲ್ಲಿ ‘ಸ್ಟಾರ್ಟಪ್ ಗುರು’ ಎಂದೇ ಹೆಸರುವಾಸಿಯಾಗಿರುವ ಸ್ಫೂರ್ತಿದಾಯಕ ಮಾತುಗಾರ ಜಝೀರ್ ಜಮಾಲ್ “Building Start-up for better tomorrow” ವಿಷಯದ ಕುರಿತು ಮಾತನಾಡಲಿದ್ದಾರೆ ಮತ್ತು ಬ್ಯಾರೀಸ್ ಚೇಂಬರ್ಸ್ ಯುಎಈ ಕಾರ್ಯದರ್ಶಿ, ಉದ್ಯಮಿ ಮಹಮ್ಮದ್ ನವೀದ್ ಮಾಗುಂಡಿ “7 habits of highly effective people” ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್ ಉಪಾಧ್ಯಕ್ಷರಾದ ಅಬ್ದುಲ್ಲಾ ಮದುಮೂಲೆ ತಿಳಿಸಿದ್ದಾರೆ.
Comments are closed.