ಗಲ್ಫ್

ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಯು ಎ ಇ ಸಮಿತಿ ಅಧ್ಯಕ್ಷರಾಗಿ ನವಾಜ್ ಬಿ ಸಿ ರೋಡ್, ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್ ಬೆಟ್ಟಂಪಾಡಿ ಪುನರಾಯ್ಕೆ

Pinterest LinkedIn Tumblr

ಕೆ ಐ ಸಿ ಆಲ್ ಕೌಸರ್ ಯೂತ್ ವಿಂಗ್ ಇದರ ಯು ಎ ಇ ಸಮಿತಿ ಐದನೇ ವಾರ್ಷಿಕ ಮಹಾ ಸಭೆಯು ಜನಾಬ್ ನವಾಜ್ ಬಿ ಸಿ ರೋಡ್ ರವರ ಘನ ಅದ್ಯಕ್ಷತೆಯಲ್ಲಿ ಓರಿಯೆಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಸುಲೈಮಾನ್ ಉಸ್ತಾದ್ ಕಲ್ಲೇಗ ರ ಪ್ರಾರ್ಥನೆ ಯೊಂದಿಗೆ ಸಭಾ ಕಾರ್ಯ ಕ್ರಮವು ಪ್ರಾರಂಭ ಗೊಂಡಿತು..

ಇಸ್ಲಾಮಿನಲ್ಲಿ ಯುವಕರ ಪಾತ್ರ ಯಾವ ರೀತಿ ಆಗಿರಬೇಕು , ಪರಿಶುದ್ಧ ಇಸ್ಲಾಂ ಧರ್ಮವನ್ನು ಉಳಿಸಿ ಬೆಳೆಸಿಕೊಳ್ಳಲು ನಮ್ಮ ಹಿಂದಿನ ತಲೆಮಾರು ಅಂದರೆ,,ನಬಿ ಸ ಅ ಸಲ್ಲಮ ತಂಙಳ್ ಹಾಗು ಅವರ ಸಹಾಬಿಗಳು ಯುವತ್ವವನ್ನು ಯಾವ ರೀತಿ ಉಪಯೋಗಿಸಿ ಕೊಂಡು ದೀನಿ ಸೇವೆ ಮಾಡಿದ್ದಾರೆ ,ಎಂಬುದರ ಕಿರು ವಿವರಣೆಯ ಮೂಲಕ ಸಭಾ ಕಾರ್ಯ ಕ್ರಮಕ್ಕೆ ಆಗಮಿಸಿದ ಸಭಿಕರನ್ನು ಅಶ್ರಫ್ ಪರ್ಲಡ್ಕ ರವರು ಅಥಿತಿ ಗಳನ್ನೂ ಸಭೆಗೆ ಸ್ವಾಗತಿಸಿದರು.

, ಗೌರವಾನ್ವಿತ ಸಯ್ಯದ್ ಆಸ್ಕರ್ ಅಲಿ ತಂಙಳ್ ರವರು ಸಭಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಜೀವನದ 15 ರಿಂದ 35 ವರ್ಷಗಳ ವರೆಗಿನ ಸಮಯದಲ್ಲಿ ಮಾಡುವ ಇಬಾದತ್ ಅತ್ಯಂತ ಶ್ರೇಷ್ಠ ಹಾಗು ಅಲ್ಲಾಹನಿಗೆ ಬಹಳ ಇಷ್ಟ .. ಆದುದರಿಂದ ಎಲ್ಲಾ ಯುವಕರು ಈ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಎಂಬ ಸಂಘಟನೆಯಲ್ಲಿ ,, ಭಾಗೀದಾರರಾಗಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಿ ಎನ್ನುತ್ತಾ ಅಲ್ಕಾಹನ ಪುಣ್ಯ ನಾಮದೊಂದಿಗೆ ಈ ಸಭಾ ಕಾರ್ಯ ಕ್ರಮವನ್ನು ಉದ್ಘಾಟಿಸಿದರು .. ವರದಿ ಹಾಗು ಲೆಕ್ಕ ಪತ್ರ ಜಾಬಿರ್ ಬೆಟ್ಟಂಪಾಡಿ , ರಿಫಾಯಿ ಗೂನಡ್ಕ ಅವರು ಮಂಡಿಸಿದರು .

ನಂತರ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ಮಾತನಾಡಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಇವರ ಕಾರ್ಯ ಚಟುವಟಿಕೆಗಳನ್ನು ಹೋಗಳಿ, ನಮ್ಮ ಯುವಕರು ಮಾಡಿದ ದೀನಿ ಸೇವೆ ಇತರರಿಗೆ ಮಾದರಿಯಾಗಿದೆ ಕೆ ಐ ಸಿ ಕೇಂದ್ರ ಸಮಿತಿಯೊಂದಿಗೆ ಎಲ್ಲಾ ಕಾರ್ಯ ಕ್ರಮಗಳಲ್ಲೂ ತಮ್ಮ ನಿಷ್ಕಳಂಕತೆಯ ಸೇವೆಯನ್ನು ಮನ್ನಿಸಲು ಪದಗಳಿಲ್ಲ ತಮ್ಮ ಇಂತಹಾ ದೀನಿ ಸೇವೆ ಮುಂದುವರಿಯಲಿ ಎಂದು ಹಾರೈಸುತ್ತ ಸದಸ್ಯರೆಲ್ಲರಿಗೂ ಶುಭ ಹಾರೈಸಿ ಪ್ರಾರ್ಥಿಸಿದರು

ಮುಂದೆ ಯೂತ್ ವಿಂಗ್ ಗೌರವಾಧ್ಯಕ್ಷರಾದ ರಫೀಕ್ ಆತೂರ್ ರವರು ಮಾತನಾಡಿ ಐದು ವರ್ಷಗಳಲ್ಲಿ ತಮ್ಮ ಕೈಲಾದ ಸೇವೆಯನ್ನು ಮಾಡಲು ಸಾಧ್ಯವಾಗಿದ್ದು ಯಾವ ಸಮಯದಲ್ಲಿ ಕರೆದರೂ ಕರೆಯನ್ನು ಸ್ವೀಕರಿಸಿ ಬಂದು ಯೂತ್ ವಿಂಗ್ ನೊಂದಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ನಾನು ಅಭಾರಿಯಾಗಿದ್ದು ಎಲ್ಲರೂ ತಮ್ಮ ತಮ್ಮ ಯೌವ್ವನ ಸಮಯದ ಜವಾಬ್ದಾರಿಯನ್ನು ಅರಿತು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ನೊಂದಿಗೆ ಸಹಕರಿಸುವಂತೆ ಕೋರಿ ಕೊಂಡರು ..

ಇದರ ಮದ್ಯೆ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಇದರ ಪ್ರಧಾನ ಕಾರ್ಯ ದರ್ಶಿಯಾಗಿ ನಾಲ್ಕು ವರ್ಷ ಪೂರ್ತಿ ಗೊಳಿಸಿ ಕೆ ಐ ಸಿ ಯೂತ್ ವಿಂಗಿನೊಂದಿಗೆ ಅವರು ಮಾಡಿದ ನಿಸ್ವಾರ್ಥ ಸೇವೆಯನ್ನು ಮನಗಂಡು ಜಾಬೀರ್ ಬೆಟ್ಟಂಪಾಡಿ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಂತರ ಯೂತ್ ವಿಂಗ್ ಅಧ್ಯಕ್ಷರಾದ ನವಾಜ್ ಬಿ ಸಿ ರೋಡ್ ಮಾತನಾಡಿ ಸಹಕರಿಸಿದ ಸರ್ವ ಸದಸ್ಯರನ್ನು ನೆನಪಿಸಿ ಕೊಳ್ಳುತ್ತಾ , ನನಗಿಂತ ಹಿರಿಯರು ಸಭಾ ಕಾರ್ಯ ಕ್ರಮದ ಸಭಾಂಗಣದಲ್ಲಿರುವಾಗ ನಾನು ಸಭಾ ವೇದಿಕೆಯಲ್ಲಿ ಮೇಲೆ ಕುಳಿತುಕೊಳ್ಳಲು ಅರ್ಹ ನಲ್ಲ ಬೇರೆ ದಾರಿಯಿಲ್ಲದೆ ಕುಳಿತು ಕೊಂಡಿರುತ್ತೇನೆ ಹಿರಿಯರು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾ ,, ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು ..

ಅದರಂತೆ ನೂತನ ಸಮಿತಿ ರಚನೆ ಜವಾಬ್ದಾರಿ ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಅವರಿಗೆ ನೀಡಲಾಯಿತು .. ಜವಾಬ್ದಾರಿ ಹೊತ್ತು ಮಾತನಾಡಿದ ನೂರ್ ಮುಹಮ್ಮದ್ ರವರು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ 5 ವರ್ಷಗಳ ಹಿಂದೆ ಪ್ರಾರಂಭ ಗೊಂಡಿದ್ದು ಹಲವಾರು ನಿಸ್ವಾರ್ಥತೆಯ ನಿಷ್ಕಳಂಕತೆಯ ಯುವಕರ ಜವಾಬ್ದಾರಿಯುತ ಕೆಲಸ ಕಾರ್ಯ ಗಳು ಈ ರೀತಿ ಉನ್ನತ ಮಟ್ಟದಲ್ಲಿ ತಲುಪಲು ಸಾಧ್ಯವಾಯಿತು ಇನ್ನು ಇದಕ್ಕಿಂತಲೂ ಉತ್ತವಾಗಿ ಮುಂದು ವರಿಯಲಿ ಅಲ್ಲಾಹನು ತೌಫೀಕ್ ನೀಡಲಿ ಎಂದು ಪ್ರಾರ್ಥಿಸುತ್ತ ನೂತನ ಸಮಿತಿಗೆ ಚಾಲನೆ ನೀಡಿದರು .

ಅದರಂತೆ 2019-20 ರ ನೂತನ ಸಮಿತಿ

ಗೌರವಾಧ್ಯಕ್ಷರಾಗಿ – ರಫೀಕ್ ಆತೂರು

ಅಧ್ಯಕ್ಷರಾಗಿ – ನವಾಜ್ ಬಿ ಸಿ ರೋಡ್

ಕಾರ್ಯಾಧ್ಯಕ್ಷರಾಗಿ – ಆಸೀಫ್ ಮರೀಲ್

ಪ್ರಧಾನ ಕಾರ್ಯ ದರ್ಶಿಯಾಗಿ — ಜಾಬಿರ್ ಬೆಟ್ಟಂಪಾಡಿ

ಕೋಶಾಧಿಕಾರಿಯಾಗಿ – ನಾಸಿರ್ ಬಪ್ಪಳಿಗೆ ಇವರು ಪುನಾರಾಯ್ಕೆಗೊಂಡರು

ಈ ಕೆಳಕಂಡಂತೆ ಇತರ ಪಧಾಧಿಕಾರಿಗಳನ್ನು ನೇಮಕ ಮಾಡಲಾಯಿತು

ಉಪಾಧ್ಯಕ್ಷರು : ಜಬ್ಬಾರ್ ಬೈತಡ್ಕ , ಶಾಹುಲ್ ಬಿ ಸಿ ರೋಡ್ ,
ಕಾರ್ಯದರ್ಶಿ : ಹಾರಿಸ್ ಪಾಪೆತ್ತಡ್ಕ , ಇಸಾಕ್ ಸಾಲೆತ್ತೂರು,

ಲೆಕ್ಕ ಪರಿಶೋಧಕರು : ರಿಫಾಯಿ ಅರಂತೋಡ್

ಸಂಘಟನಾ ಕಾರ್ಯದರ್ಶಿ : ಅಶ್ರಫ್ ಪರ್ಲಡ್ಕ , ರಫೀಕ್ ಮುಕ್ವೆ , ಅನ್ಸಾಫ್ ಪಾತೂರ್ , ಇಫ್ತಿಕಾರ್ ಅಡ್ಯಾರ್ ಕನ್ನೂರ್ , ಅಝೀಝ್ ಸೊಂಪಾಡಿ

ಸಂಚಾಲಕರು : ಜಾಬೀರ್ ಬಪ್ಪಳಿಗೆ, ನವಾಝ್ ಕುಕ್ಕಾಜೆ , ಜಲೀಲ್ ಉಕ್ಕುಡ ಸಿನಾನ್ ಪೆರ್ಲಂಪಾಡಿ ಸಾಬಿತ್ ಪರ್ಲಡ್ಕ ಸಮೀರ್ ಪರ್ಲಡ್ಕ , ನಿಝಾಮ್ ತೋಡಾರ್, ಅಝರ್ ತೋಡಾರ್. ತಯ್ಯಿಬ್ ಹೆಂತಾರ್ ಆರಿಫ್ ಕೂರ್ನಡ್ಕ , ಆರಿಫ್ ಮುಕ್ವೆ , ಆಶಿಕ್ ಕೂರ್ನಡ್ಕ, ತಾಹಿರ್ ಹೆಂತಾರ್ , ಸಿರಾಜ್ ಬಂಟ್ವಾಳ, ಜೌಹರ್ ಮರಕಿಣಿ , ರಿಯಾಜ್ ಮರಕಿಣಿ, ನಾಸೀರ್ ದೇರಳಕಟ್ಟೆ, ಮುನೀರ್ ಸಾಲ್ಮರ , ಸಿದ್ದೀಕ್ ಸುಳ್ಯ , ಜೌಹರ್ ದೇರಳಕೆಟ್ಟೇ , ಮೊದಲಾದವರನ್ನು ಆರಿಸಲಾಯಿತು.

ನಂತರ ಅಶ್ರಫ್ ಷಾ ಮಾಂತೂರ್ , ಷರೀಫ್ ಕಾವು , ಹಮೀದ್ ಮುಸ್ಲಿಯಾರ್ , ಅಬ್ಬಾಸ್ ಕೇಕುಡೆ . ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಸಂದರ್ಬೋಜಿತವಾಗಿ ಮಾತನಾಡಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರ ಕಾರ್ಯ ವೈಖರಿಗಳನ್ನು ಶ್ಲಾಘಿಸಿ ನೂತನ ಸಮಿತಿಗೆ ಶುಭ ಹಾರೈಸಿದರು .

ಕೊನೆಗೆ ಮರ್ಹೂಂ ಮಿತ್ತಬೈಲ್ ಜಬ್ಬಾರ್ ಉಸ್ತಾದರ ಅನುಸ್ಮರಣೆ ಕಾರ್ಯ ಕ್ರಮವು ನಡೆಯಿತು .. ಗೌರವಾನ್ವಿತ ಸುಲೈಮಾನ್ ಉಸ್ತಾದ್ರವರು ಮಾರ್ಹೂಂ ಜಬ್ಬಾರ್ ಉಸ್ತಾದ್ (ನ ಮ) ಅವರ ಜೀವನ ಶೈಲಿಗಳನ್ನು ಸಂಕ್ಷಿಪ್ತವಾಗಿ ಬಹಳ ಸುಂದರವಾಗಿ ವಿವರಿಸಿ ಜೀವನದುದ್ದಕ್ಕೂ ಅವರು ತೋರಿಸಿದ ಮಾರ್ಗ ದರ್ಶನ ನಮಗೆ ಮಾದರಿ ಅಂತಹ ಮಹಾನುಭಾವರನ್ನು ನಾವು ಕಳೆದುಕೊಂಡದ್ದು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿ ಅವರ ಪಾರತ್ರಿಕ ಜೀವನದ ಸುಖಕ್ಕಾಗಿ ಪ್ರಾರ್ಥಿಸಿದರು .. ಕೊನೆಯಲ್ಲಿ ನಾಸಿರ್ ಬಪ್ಪಳಿಗೆ ಅವರ ದನ್ಯವಾದದೊಂದಿಗೆ ಕಾರ್ಯ ಕಾರ್ಯ ಕ್ರಮವು ಮುಕ್ತಾಯ ಗೊಂಡಿತು.

ಅಶ್ರಫ್ ಪರ್ಲಡ್ಕ ಕಾರ್ಯ ಕ್ರಮ ನಿರೂಪಿಸಿ ಹಾಶಿಮ್ ಪರ್ಲಡ್ಕ ಕಿರಾತ್ ಪಠಿಸಿದರು

Comments are closed.