ಅಂತರಾಷ್ಟ್ರೀಯ

ಬಾಗ್ದಾದಿಯ ಬಲಗೈ ಹಾಗೂ ಐಸಿಸ್ ವಕ್ತಾರ ಅಬು ಹಸನ್ ಅಲ್-ಮುಹಾಜಿರ್‌ನ ಹತ್ಯೆ

Pinterest LinkedIn Tumblr

ಕಮಿಶ್ಲಿ : ಉತ್ತರ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಕ್ತಾರನನ್ನು ರವಿವಾರ ಹತ್ಯೆ ಮಾಡಲಾಗಿದೆ ಎಂದು ಕುರ್ದಿಷ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಹಾದಿಗಳ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಬಾಂಬ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಐಸಿಸ್ ವಕ್ತಾರ ಅಬು ಹಸನ್ ಅಲ್-ಮುಹಾಜಿರ್ ನನ್ನು ಕೊಲ್ಲಲಾಗಿದೆ ಎಂದು ವರದಿ ತಿಳಿಸಿದೆ

“ಎಸ್ಡಿಎಫ್ ಗುಪ್ತಚರ ಮತ್ತು ಯುಎಸ್ ಸೈನ್ಯ ಸಂಘಟಿತ ಕಾರ್ಯಾಚರಣೆಯಲ್ಲಿ ಬಾಗ್ದಾದಿಯ ಬಲಗೈ ಮತ್ತು ಐಸಿಸ್ ವಕ್ತಾರ ಅಲ್-ಮುಹಾಜಿರ್ ನ್ನು ಜರಾಬ್ಲಸ್ ಬಳಿಯ ಐನ್ ಅಲ್-ಬೇಡಾ ಗ್ರಾಮದಲ್ಲಿ ಗುರಿಯಾಗಿಸಲಾಗಿತ್ತು” ಎಂದು ಎಸ್ಡಿಎಫ್ ಮುಖ್ಯಸ್ಥ ಮಜ್ಲೌಮ್ ಅಬ್ಡಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Comments are closed.