ಗಲ್ಫ್

ಕನ್ನಡಿಗರ ದುಬೈ ವತಿಯಿಂದ ಅದ್ದೂರಿಯಾಗಿ ನಡೆದ “ಸಂಗೀತ ಸೌರಭ 2019”

Pinterest LinkedIn Tumblr

ಕನ್ನಡಿಗರ ದುಬೈ ವತಿಯಿಂದ ಪ್ರಿಶಿಯಸ್ ಪಾರ್ಟೀಸ್ ಇದರ ಸಹಯೋಗದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ “ಸಂಗೀತ ಸೌರಭ 2019” ಮಾ.29ರಂದು ಕ್ರೆಡೆನ್ಸ ಹೈ ಸ್ಕೂಲ್ ,ಅಲ್ ಕುಜ್ ,ದುಬೈ ನಲ್ಲಿ ಅದ್ದೂರಿಯಾಗಿ ನಡೆಯಿತು.

ಅನಿವಾಸಿ ಕನ್ನಡಗರನ್ನು ರಂಜಿಸಲು ಬಂದ ಖ್ಯಾತ ಹಿನ್ನೆಲೆ ಗಾಯಕಿಯಾದ ಸಂಗೀತ ಕಟ್ಟಿ ಮತ್ತು ತಂಡ ತಮ್ಮ ಸುಮಧುರ ಹಾಡುಗಳೊಂದಿಗೆ ಪ್ರೇಕ್ಷಕರನ್ನು ಕುಣಿಸುವಂತೆ ಮಾಡಿದರು.

ಹಾಗು ಖ್ಯಾತ ಮಿಮಿಕ್ರಿ ಕಲಾವಿದರಾದ ರಮೇಶ್ ಬಾಬು ಮೈಸೂರು ಇವರ ಹಾಸ್ಯವಂತೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಲಿಸಿತು.ಈ ಕಾರ್ಯಕ್ರಮವನ್ನು ನಟಿ ಹಾಗು ನಿರೂಪಕಿ ಸ್ಪೂರ್ತಿ ವಿಶ್ವಾಸ್ ರವರು ತುಂಬಾ ಸೊಗಸಾಗಿ ನಡೆಸಿಕೊಟ್ಟರು.

ಈ ಸುಂದರ ಸಂಜೆಗೆ ಮುಖ್ಯ ಅತಿಥಿಯಾಗಿ ಎಂ ಸ್ಕ್ಯೂರ್ ಮುಖ್ಯಸ್ಥರಾದ ಶ್ರೀಯುತ ಮುಸ್ತಾಫಾ ಮೊಹಮ್ಮದ್ ಆಗಮಿಸಿದ್ದರು.

ಕಾರ್ಯಕ್ರಮದ ಕೊನಯಲ್ಲಿ ಎಲ್ಲ ಗಣ್ಯರನ್ನು ಹಾಗು ತಮ್ಮ್ ಕನ್ನಡ ಸೇವೆಗಾಗಿ ಮಾಜಿ ಅದ್ಯಕ್ಷರಧಾ ಶ್ರೀ ಸಾಧನ್ ದಾಸ್ ದಂಪತಿಗಳು , ಶ್ರೀ ದೀಪಕ್ ಸೋಮಶೇಖರ್ ದಂಪತಿಗಳನ್ನು ಹಾಗು ಶಶಿಧರ್ ನಾಗರಾಜಪ್ಪ ದಂಪತಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ವೇಧಿಕೆಯಲ್ಲಿ ಮುಖ್ಯ ಅಥಿತಿಯಾದ ಶ್ರೀ ಮುಸ್ತಾಫಾ ಮೊಹಮ್ಮದ್ ,ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ್ ಗೌಡ ,ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಉಮಾ ವಿದ್ಯಾಧರ್ ,ಶ್ರೀ ವೀರೆಂದ್ರ ಬಾಬು ,ಮುಖ್ಯ ಕಾರ್ಯದರ್ಶಿ ಚಂದ್ರಕಾಂತ್ ಗೌಡ ,ಮಲ್ಲಿಕಾರ್ಜುನ್ ಅಂಗಡಿ ,ವೆಂಕಟರಮಣ ಕಾಮತ ,ರಫೀಕ್ ಅಲಿ ,ಮಧು ಗೌಡ ,ಶ್ರೀನಿವಾಸ್ ಅರಸ್ ಹಾಗು ಮುಂತಾದವರು ಉಪಸ್ಥಿತರಿದ್ದರು.

Comments are closed.