ಗಲ್ಫ್

ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ವತಿಯಿಂದ ಬೃಹತ್ ಮೀಲಾದ್

Pinterest LinkedIn Tumblr

ಸಮಾವೇಶವು ದಿನಾಂಕ 30.11.2018 ನೇ ಶುಕ್ರವಾರದಂದು ಮಾಯಾನಗರಿ ದುಬೈ ಯ ಹೃದಯ ಭಾಗವಾದ ಬುರ್ ದುಬೈ ಹಾಲಿಡೇ ಇನ್ ಹೋಟೆಲ್ ಭವ್ಯ ಸಭಾಂಗಣದಲ್ಲಿ ನಡೆಯಲಿದೆ. ಅಂತ್ಯಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹುಅಲೈಹಿ ವಸಲ್ಲಮ್ ರವರ ಜನ್ಮ ದಿನಾಚರಣೆ ಪ್ರಯುಕ್ತ *”ಓ ಸಂದೇಶವಾಹಕರೇ ತಮ್ಮೆಡೆಗೆ”ಎಂಬ ಘೋಷ ವಾಕ್ಯದಲ್ಲಿ ನಡೆಯುವ ಈ ಸಮಾರಂಭಕ್ಕೆ ಕೇರಳ ಕರ್ನಾಟಕ ರಾಜ್ಯಗಳಲ್ಲಿ ಆಧ್ಯಾತ್ಮಿಕವಾಗಿ ಸಮೂಹಕ್ಕೆ ಅಭಯ ನೀಡುತ್ತಿರುವ ಬಹು: ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಗಳ್ (ಬಾಯಾರ್ ತಂಙಳ್) ರವರು ಆತ್ಮೀಯ ಉಪದೇಶ ಹಾಗೂ ದುವಾ: ಮಜಲಿಸ್ ಗೆ ನೇತೃತ್ವ ವಹಿಸಲಿದ್ದಾರೆ.

ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಸಿದ್ದಕಟ್ಟೆ ಯವರು ಅಧ್ಯಕ್ಷತೆ ವಹಿಸಲಿದ್ದು, ಇಬ್ರಾಹೀಂ ಮುಸ್ಲಿಯಾರ್ ಕಾಯಕ್ಕೊಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಂಝ ಮಿಸ್ಬಾಹಿ ಒಟ್ಟಪಾದವು ರವರು ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ KCF ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ PMH ಅಬ್ದುಲ್ ಹಮೀದ್ ಈಶ್ವರಮಂಗಿಲ, ಅಂತರ್ರಾಷ್ಟ್ರೀಯ ಕೋಶಾಧಿಕಾರಿ ಶೇಖ್ ಬಾವ ಮಂಗಳೂರು, ಕೆ. ಸಿ. ಎಫ್. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಕಾಜೂರ್, ಮೀಲಾದ್ ಸಮಿತಿ ನಿರ್ದೇಶಕರಾದ ಖಾದರ್ ಸಾಲೆತ್ತೂರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಂಜೆ 5:30 ಕ್ಕೆ ಸರಿಯಾಗಿ ಶಾಹುಲ್ ಹಮೀದ್ ಸಖಾಫಿ, ಅಬ್ದುಲ್ಲ ಉಸ್ತಾದ್ ಕುಡ್ತ ಮುಗೇರು, ಅಬ್ದುಲ್ ಅಝೀಝ್ ಲತೀಫಿ ಮತ್ತು ಇಲ್ಯಾಸ್ ಮದನಿಯವರ ನೇತೃತ್ವದಲ್ಲಿ ಮೌಲಿದ್ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ಸಾರ್ ಸಖಾಫಿ ಮುಖ್ವೆ ಹಾಗೂ ಆಸಿಫ್ ಇಂದ್ರಾಜೆ ಯವಯರ ತಂಡದವರಿಂದ ಬುರ್ದಾ ಆಲಾಪನೆ, KCF ಯುವ ಪ್ರತಿಭೆಗಳಿಂದ ದಫ್ಫ್ ಪ್ರದರ್ಶನ ಗಳು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಲಿವೆ.

ಆದ್ದರಿಂದ ಅನಿವಾಸಿ ಕನ್ನಡಿಗರಾದ ಪ್ರವಾದಿ ಸ್ನೇಹಿಗಳೆಲ್ಲರೂ ಈ ಬ್ರಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಮೀಲಾದ್ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಸಿದ್ದಕಟ್ಟೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. KCF ಸೌತ್ ಝೋನ್ ಅಧ್ಯಕ್ಷರಾದ ಅಝೀಜ್ ಅಹ್ಸನಿ, ರಫೀಕ್ ಕಲ್ಲಡ್ಕ, ಷರೀಫ್ ಹೊಸ್ಮಾರ್ ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ್ದರು.

*ವಿ. ಸೂ: ಸ್ತ್ರೀಯರಿಗೆ ಪ್ರತ್ಯೇಕ ಆಸನದ ವ್ಯವಸ್ತೆ ಹಾಗೂ ವಿಶಾಲವಾದ ವಾಹನ ನಿಲುಗಡೆ ವ್ಯವಸ್ತೆ ಮಾಡಲಾಗಿದೆ*.

Comments are closed.