ಗಲ್ಫ್

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹರೇನ್ ನ ಅಧ್ಯಕ್ಷರಾಗಿ ಶ್ರೀ ಪ್ರದೀಪ್ ಶೆಟ್ಟಿ ಮರು ಆಯ್ಕೆ

Pinterest LinkedIn Tumblr

ಬಹರೈನ್; ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಮಹಾ ಸಭೆಯು ಇತ್ತೀಚಿಗೆ ಜರುಗಿ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರದೀಪ್ ಶೆಟ್ಟಿ ಯವರು ಮರು ಆಯ್ಕೆಗೊಂಡಿದ್ದಾರೆ . ಶ್ರೀಯುತರು 2017 -18ರ ಸಾಲಿನ ಸಂಘದ ಅಧ್ಯಕ್ಷರಾಗಿ ಎರಡು ವರುಷಗಳ ತನ್ನ ಪ್ರಥಮ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದು ತನ್ನ ಉತ್ತಮ ಕಾರ್ಯವೈಖರಿಯಿಂದಾಗಿ 2018-19ರ ಸಾಲಿಗೆ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡು ಸಂಘದ ಸಾರಥ್ಯವನ್ನು ವಹಿಸಿದ್ದಾರೆ .

ಶ್ರೀಯುತರು ಕಳೆದ ಸುಮಾರು ಮೂರು ದಶಕಗಳಿಂದ ದ್ವೀಪ ರಾಷ್ಟ್ರದಲ್ಲಿ ನೆಲೆಸಿದ್ದು ಇಲ್ಲಿನ ಗಲ್ಫ್ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ದ್ವೀಪದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಈ ಹಿಂದೆ ‘ಬಂಟ್ಸ್ ಬಹರೈನ್ ” ನ ಅಧ್ಯಕ್ಷರಾಗಿ ಎರಡು ಅವಧಿಗಳಿಗೆ ಸೇವೆ ಸಲ್ಲಿಸಿದ್ದಾರೆ . ಪ್ರದೀಪ್ ಶೆಟ್ಟಿ ಯವರು ಮಾತ್ರವಲ್ಲದೆ ಆಡಳಿತ ಮಂಡಳಿಯ ಇತರ ಪಧಾದಿಕಾರಿಗಳೆಲ್ಲರೂ ಮರು ಆಯ್ಕೆಗೊಂಡಿದ್ದು ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಇದೇ ಏಪ್ರಿಲ್ ತಿಂಗಳ 27 ರ ಶುಕ್ರವಾರದಂದು ಇಲ್ಲಿನ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಸಂಜೆ 6 ಘಂಟೆಗೆ ಜರುಗಲಿರುವುದು . ಈ ಸಮಾರಂಭದಲ್ಲಿ ಹೊಸ ಆಡಳಿತ ಮಂಡಳಿಯ ಪಧಾದಿಕಾರಿಗಳ ವಿದ್ಯುಕ್ತ ಪದಗ್ರಹಣವಾಗಲಿರುವುದು .

ಚಿತ್ರದಲ್ಲಿ ಕಾಣುತ್ತಿರುವಂತೆ ನೂತನ ಆಡಳಿತ ಮಂಡಳಿಯ ಪಧಾದಿಕಾರಿಗಳು ಈ ಕೆಳಗಿನಂತಿದ್ದಾರೆ.
ಚಿತ್ರದಲ್ಲಿ: ಕುಳಿತವರು (ಎಡದಿಂದ ಬಲಕ್ಕೆ) ಶ್ರೀ ಚಂದ್ರಹಾಸ ಐಲ್ – ಆಂತರಿಕ ಲೆಕ್ಕ ಪರಿಶೋಧಕರು, ಶ್ರೀ ಪ್ರವೀಣ್ ಶೆಟ್ಟಿ ಕಿನ್ನಿಗೋಳಿ – ಖಜಾಂಚಿ, ಶ್ರೀ ಕಿರಣ್ ಉಪಾಧ್ಯಾಯ್ – ಪ್ರಧಾನ ಕಾರ್ಯದರ್ಶಿ, ಶ್ರೀ ಪ್ರದೀಪ್ ಶೆಟ್ಟಿ – ಅಧ್ಯಕ್ಷರು, ಶ್ರೀ ಡಿ. ರಮೇಶ್ – ಉಪಾಧ್ಯಕ್ಷರು, ಶ್ರೀ ವರುಣ್ ಹೆಗ್ಡೆ – ಮನರಂಜನಾ ಕಾರ್ಯದರ್ಶಿ.

ನಿಂತವರು (ಎಡದಿಂದ ಬಲಕ್ಕೆ) ಶ್ರೀ ಅಯ್ಯಪ್ಪ ಎಡನೀರು – ಸಮಿತಿ ಸದಸ್ಯ, ಶ್ರೀ ಮಹೇಶ್ ಕುಮಾರ್ ಕೆ. – ಕ್ರೀಡಾ ಕಾರ್ಯದರ್ಶಿ, ಶ್ರೀ ಅರುಣ್ ಐರೋಡಿ – ಸಹ ಕಾರ್ಯದರ್ಶಿ, ಶ್ರೀ ಪ್ರಕಾಶ್ ಅಂಚನ್ – ಸಮಿತಿ ಸದಸ್ಯ, ಶ್ರೀ ಜಗದೀಶ ಜೆಪ್ಪು – ಉಪ ಮನರಂಜನಾ ಕಾರ್ಯದರ್ಶಿ, ಶ್ರೀ ಸಂತೋಷ್ ಆಚಾರ್ಯ – ಸಮಿತಿ ಸದಸ್ಯ, ಶ್ರೀ ಅಶೋಕ್ ಕಟೀಲ್ – ಉಪ ಖಜಾಂಚಿ.

Comments are closed.