ಗಲ್ಫ್

ಬಂಟರ ಸಂಘ ಕುವೈತ್ – ‘ಬಂಟಾಯನ 2018’

Pinterest LinkedIn Tumblr

ಕುವೈತ್: ಬಂಟರ ಸಂಘ, ಕುವೈತ್ ಇವರ ಭಾರಿ ನಿರೀಕ್ಷೆಯ ವಾರ್ಷಿಕ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ’ಬಂಟಾಯನ 2018’ ಇದೇ ಬರುವ ಮೇ 4, ಶುಕ್ರವಾರ, 2018 ರಂದು ಮಂಗಾಫ್ ನ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆಯ ಸಭಾಂಗಣದಲ್ಲಿ ನೆಡೆಯಲಿರುವುದು.

ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಸಂಘದ ಸದಸ್ಯರು ಹಾಗೂ ಮಕ್ಕಳು ತಮ್ಮ ಕಲಾಪ್ರತಿಭೆಯಿಂದ ಕಣ್ಮನ ಸೆಳೆಯುವ ಮನೋರಂಜನಾ ಕಾರ್ಯಕ್ರಮವಾಗಿ ಬಂಟ ಸಮುದಾಯದ ಸಂಸ್ಕೃತಿ, ದೈವ-ದೇವರು, ಆಚರಣೆ, ಕೂಡುಕಟ್ಟ್, ಸಂಪ್ರದಾಯಗಳನ್ನು ಬಿಂಬಿಸುವ ’ಬಂಟ ಐಸಿರಿ’ ಪ್ರದರ್ಶನವನ್ನು ನೀಡಲಿದ್ದಾರೆ. ’ತುಳುನಾಡ ರತ್ನ’ ಬಿರುದು ಪಡೆದ ಕಲಾವಿದ ಶ್ರೀ ದಿನೇಶ್ ಅತ್ತಾವರ ವಿರಚಿತ, ತುಳು ಹಾಸ್ಯಮಯ ನಾಟಕ, ’ಪೊರ್ಲು ದಾಯೆ!!!?’ ಯನ್ನು ಶ್ರೀ ವಿಶ್ವನಾಥ್ ಶೆಟ್ಟಿ ದುಬೈ ಯವರ ನಿರ್ದೇಶನದಲ್ಲಿ, ’ಗಮ್ಮತ್ ಕಲಾವಿದರು ದುಬೈ’ ಯವರು ಪ್ರದರ್ಶಿಸಲಿದ್ದಾರೆ. ಬಂಟರ ಸಂಘ, ಕುವೈತ್ ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಈ ಸಾಂಸ್ಕೃತಿಕ ಕಾರ್ಯಕ್ರಮದ ಮನೋರಂಜನೆಯ ರಸದೌತಣವನ್ನು ಸವಿಯಲು ತಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ದಾರೆ.

Comments are closed.