ಗಲ್ಫ್

‘ತತ್ವ’: ದುಬೈ ನಗರದ ಸಂಕೀರ್ಣ ನೃತ್ಯ ಶಾಲೆಯ ವಾರ್ಷಿಕೋತ್ಸವ

Pinterest LinkedIn Tumblr

ದುಬೈಯ ಭಾರತೀಯ ದೂತಾವಾಸದ ಸಭಾಂಗಣದಲ್ಲಿ ಏಪ್ರಿಲ್ 13 ರ ಸಂಜೆ ಜರುಗಿದ “ಸಂಕೀರ್ಣ’ ನೃತ್ಯ ಶಾಲೆಯ 6ನೇ ವಾರ್ಷಿಕೋತ್ಸವವನ್ನು ಕಾರ್ಯಕ್ರಮದ ಅತಿಥಿಗಳು ,ಗುರು, ವಿದುಷಿ, ಶ್ರೀಮತಿ ಸಪ್ನಾ ಕಿರಣ್ ಹಾಗು ಶ್ರೀ ಕಿರಣ್ ಕುಮಾರ್ ಕದ್ರಿ ಯವರು ಸಾಂಪ್ರದಾಯಿಕ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು .

ನಾಟ್ಯ ದೇವಾ ನಟರಾಜನಿಗೆ ಭಕ್ತಿ ಪೂರ್ವಕ “ಪುಷ್ಪಾಂಜಲಿ”ಯೊಂದಿಗೆ ನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸಂಕೀರ್ಣದ ವಿದ್ಯಾರ್ಥಿನಿಯರು ನಂತರ ವಿಘ್ನ ವಿನಾಶಕ ಗಣಪನನ್ನು ಗಣೇಶ ಕೌತುವಂ ,ಶಕ್ತಿಯನ್ನು ಕಾಳಿ ಕೌತುವಂ ಮೂಲಕ, ಥೊಡ್ಯಾ ಮಂಗಳಂ ನಲ್ಲಿ ಮಹಾವಿಷ್ಣುವನ್ನು , ಭಕ್ತ ಕನಕದಾಸರ ಹಾಡಿನ ಮೂಲಕ ದೇವಿ ಸರಸ್ವತಿಯನ್ನು, ಪುರಂದರ ದಾಸರ ‘ಭಾಗ್ಯದ ಲಕ್ಷ್ಮಿ ಬಾರಮ್ಮ”ದ ಮೂಲಕ ದೇವಿ ಲಕ್ಷ್ಮೀ ಗೆ ನಾಟ್ಯ ವಂದನೆ ಸಲ್ಲಿಸಿದರು .

ಅಡವು, ಅಜ್ಹಾಗು ದೇವಾ, ಆಡಿದ ನಾಡಿದ ,ಕೊರವಂಜಿ, ಗೋವಿಂದ ನಿನ್ನ , ಮುಂತಾದ ನೃತ್ಯ ವೈವಿದ್ಯಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ ನರ್ತಕಿಯರು ,ತುಂಟ ಕೃಷ್ಣ ಮುಗ್ದರಾಧೆಯರ ಬಾಲ್ಯದಾಟವನ್ನು ‘ವಿಷಮಕರ ಕಣ್ಣನ್ ‘ ಮೂಲಕ ನರ್ತಿಸಿ ಜನರ ಮನ ಗೆದ್ದರು. ಅಯಗಿರಿ ನಂದಿನಿಯ ಮೂಲಕ ನವದುರ್ಗೆಯರು ನೆರೆದವರನ್ನು ರೋಮಾಂಚನಗೊಳಿಸಿದರೆ ,ಕೊನೆಯದಾಗಿ ಪ್ರದರ್ಶನಗೊಂಡ ‘ಧರ್ಮಕ್ಷೇತ್ರ ‘ ಕೃಷ್ಣಾರ್ಜುನರ ಗೀತೋಪದೇಶದ ನೃತ್ಯವನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಭರತನಾಟ್ಯ ಕಲಾವಿದೆ ಶ್ರೀಮತಿ ಚಂದ್ರಾ ಸುಬ್ರಮಣ್ಯನ್ ಗುರು ಸಪ್ನಾ ಕಿರಣ್ ರವರ ಪರಿಶ್ರಮವನ್ನು ಕೊಂಡಾಡಿ ಕಾರ್ಯಕ್ರಮದ ಗುಣಮಟ್ಟ ,ಶಿಸ್ತು ಹಾಗು ಅಚ್ಚುಕಟ್ಟುತನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇನ್ನೋರ್ವ ಅತಿಥಿ ಶ್ರೀ ಎನ್ . ಮೋಹನ್ ಅವರು ‘ಸಂಕೀರ್ಣ”ದೊಂದಿಗಿನ ತಮ್ಮ ಕೆಲವು ವರ್ಷಗಳ ಒಡನಾಟವನ್ನು ಮೆಲುಕು ಹಾಕಿ ಈ ನೃತ್ಯ ಶಾಲೆಯ ಬೆಳವಣಿಗೆಗೆ ಹರ್ಷ ವ್ಯಕ್ತ ಪಡಿಸಿದರು.

ಅದ್ಭುತ ಸಂಗೀತ , ಸೂಕ್ತ ಹಾಡುಗಳು ,ಪ್ರತಿಭಾನ್ವಿತ ನೃತ್ಯ ಪಟುಗಳು, ಚಂದದ ವಸ್ತ್ರಭಾರಣಗಳು ಹಾಗು ನೈಪುಣ್ಯತೆಯ ನೃತ್ಯ ಸಂಯೋಜನೆ ಯ ಸುಂದರ. ಕಾರ್ಯಕ್ರಮವನ್ನು ಕಥೆ, ಇತಿಹಾಸ ,ಪುರಾಣ ಹಾಗು ವೇದಗಳ ನಿದರ್ಶನಗಳೊಂದಿಗೆ ಬಹಳ ಸೊಗಸಾದ ಭಾಷೆಯಲ್ಲಿ ಶ್ರುತಿ ಕಾರ್ತಿಕ್ ನಿರೂಪಿಸಿದರು

ಗುರು ವಿದುಷಿ ಸಪ್ನಾ ಕಿರಣ್ ವಿದ್ಯಾರ್ಥಿಗಳ ಪ್ರದರ್ಶನಗಳಿಗೆ ಹೆಮ್ಮೆ ವ್ಯಕ್ತಪಡಿಸಿ ಅತಿಥಿಗಳಿಗೆ ,ಗುರುಗಳಿಗೆ ,ಹೆತ್ತವರಿಗೆ ,ಶಿಷ್ಯವೃಂದಕ್ಕೆ ,ಕುಟುಂಬ ವರ್ಗದವರಿಗೆ ಹಾಗು ನೆರೆದವರಿಗೆಲ್ಲಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

‘ಸಂಕೀರ್ಣ’ನೃತ್ಯ ಶಾಲೆ, ದುಬೈ

2011ನೇ ಇಸವಿಯಲ್ಲಿ ಸಾಕಾರಗೊಂಡ ಗುರು , ವಿದುಷಿ ಶ್ರೀಮತಿ ಸಪ್ನಾ ಕಿರಣ್ ಅವರ ಸ್ವಪ್ನ ಇದು. ಇಲ್ಲಿ ಭಾರತದಾದ್ಯಂತದ ವಿದ್ಯಾರ್ಥಿನಿಯರು ಭರತನಾಟ್ಯಮ್ ಅನ್ನು ಶಾಸ್ತ್ರೀಯವಾಗಿ ಗುರು ಪರಂಪರೆಯ ಮಾದರಿಯಲ್ಲಿ ಅಭ್ಯಾಸ ಮಾಡುತ್ತಾರೆ .ಗುಣಮಟ್ಟ ಹಾಗು ಸಾಂಪ್ರದಾಯಿಕ ಶೈಲಿಗೆ ಹೆಸರಾದ ‘ಸಂಕೀರ್ಣ’ ಯು .ಎ .ಇ ಯಲ್ಲಿ ಹಾಗು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು ಬಹುತೇಕ ಪ್ರತಿವರ್ಷವೂ ಇಲ್ಲಿನ ಒಂದು ಅಥವಾ ಎರಡು ವಿದ್ಯಾರ್ಥಿನಿಯರು ರಂಗ ಪ್ರವೇಶ ಮಾಡುತ್ತಾರೆ.

ಕಿರುವಯಸ್ಸಿನಲ್ಲೇ ನೃತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಗುರು ವಿದುಷಿ ಸಪ್ನಾಕಿರಣ್ ಸ್ವತಃ ಒಬ್ಬ ಅದ್ಭುತ ನೃತ್ಯಗಾರ್ತಿ , ರಂಗ ನಟಿ ಹಾಗೂ ಭರತನಾಟ್ಯ ಕಲಾವಿದರ ಕುಟುಂಬದಿಂದ ಬಂದವರು .

ವರದಿ : ಆರತಿ ಅಡಿಗ , ಶಾರ್ಜಾ

Comments are closed.