ಗಲ್ಫ್

ದುಬೈಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಅರ್ಜುನ್ ಜನ್ಯರ ‘ಸಂಗೀತ ಸೌರಭ -2018 ‘

Pinterest LinkedIn Tumblr

Photo: Ashok Belman

ದುಬೈ: ಸ್ಯಾಂಡಲ್‌ವುಡ್‌ನ ಎ.ಆರ್. ರೆಹಮಾನ್ ಎಂದೇ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಲೈವ್ ಕಾರ್ಯಕ್ರಮ ‘ಸಂಗೀತ ಸೌರಭ -2018 ‘ ದುಬೈಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ದುಬೈಯ ಕರಾಮದಲ್ಲಿರುವ ಶೇಕ್ ರಾಶಿದ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಶ್ರೀ ಲಲಿತ್ ಈವೆಂಟ್ಸ್ ( ಎಸ್ ಎಲ್ ಈವೆಂಟ್ಸ್ ) ಇದರ ಸಹಯೋಗದೊಂದಿಗೆ  ಕನ್ನಡಿಗರು ದುಬೈ ಆಯೋಜಿಸಿದ್ದ ಖ್ಯಾತ ಸ್ಯಾಂಡಲ್ ವುಡ್ ಗಾಯಕ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗು ಅವರ ತಂಡದವರ ‘ಸಂಗೀತ ಸೌರಭ -2018 ‘ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಳಿಸಿತು.

ಒಂದಾದ ಮೇಲೊಂದರಂತೆ ಹಿಟ್‌ಸಾಂಗ್‌ ಹಾಡಿದ ಅರ್ಜುನ್ ಜನ್ಯ ಪ್ರೇಕ್ಷಕರನ್ನು ಹೆಜ್ಜೆಹಾಕುವಂತೆ ಮಾಡಿದರು.

ಅರ್ಜುನ್ ಜನ್ಯ ಅವರೊಂದಿಗೆ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರಾದ ಹರೀಶ್ ಶೇರಿಗಾರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಕನ್ನಡ ಚಿತ್ರರಂಗದ ಹಳೆಯ ಹಾಡುಗಳನ್ನು ಮೆಲುಕುಹಾಕಿ ಸಂಗೀತದ ಸುಧೆಯನ್ನು ಹರಿಸಿದರು.

ಅರ್ಜುನ್ ಜನ್ಯರ ತಂಡದೊಂದಿಗೆ ಬಂದ ಇತರ ಗಾಯಕರಾದ ವ್ಯಾಸರಾಜ್ , ಅಜಯ್ ವಾರಿಯರ್ , ಅನುರಾಧ ಭಟ್, ಅನುಪಮಾ ಭಟ್, ಇಂದು ನಾಗರಾಜ್ ಮುಂತಾದ ಗಾಯಕರು ತಮ್ಮ ಕಂಠಸಿರಿಯ ಮೂಲಕ ಎಲ್ಲರ ಮನಮಿಡಿಯುವಂತೆ ಮಾಡಿದರು.

ಗಾಯಕರ ಹಾಡಿಗೆ ಹೆಜ್ಜೆ ಹಾಕಿದ ನೃತ್ಯ ಕಲಾವಿದರು ರ್ಯಕ್ರಮದುದ್ದಕ್ಕೂ ರಂಜಿಸಿದರು.ಪ್ರೇಕ್ಷಕರ ಹರ್ಷೋದ್ಗಾರ, ಶಿಳ್ಳೆ ಹಾಗು ಕರತಾಡಣಗಳ ಮಧ್ಯೆ ಗಾಯಕರು ತಮ್ಮ ಹಿಟ್ ಹಾಡುಗಳನ್ನು ಮುಂದಿಟ್ಟು ಎಲ್ಲರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿದರು.

ಇದಕ್ಕೂ ಮೊದಲು ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. Vibez ಕಾಫಿ ಎಸ್ಟೇಟ್ಸ್ ಆಡಳಿತ ನಿರ್ದೇಶಕ ಅಶ್ವಿನ್, ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹಾಗು ಖ್ಯಾತ ಗಾಯಕ ಹರೀಶ್ ಶೇರಿಗಾರ್, ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ಮಾಲಕ ಪ್ರವೀಣ್ ಶೆಟ್ಟಿ, ಉದ್ಯಮಿ ರವೀಶ್ ಗೌಡ, ಮೊಹಮ್ಮದ್ ಮುಸ್ತಫಾ, ಕನ್ನಡಿಗರು ದುಬೈಯಾ ಸದನ್ ದಾಸ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಾಜರಿದ್ದರು.

Comments are closed.