ಗಲ್ಫ್

ದುಬೈ ಜಗತ್ತಿನ ಅತ್ಯಂತ ಸುರಕ್ಷಿತ ನಗರ ! 5 ವರ್ಷಗಳಲ್ಲಿ ಅಪರಾಧ ಪ್ರಮಾಣ 38 ಶೇ. ಇಳಿಕೆ

Pinterest LinkedIn Tumblr

ದುಬೈ: ದುಬೈಯ ಗಂಭೀರ ಅಪರಾಧಗಳ ಪ್ರಮಾಣ ಕಳೆದ 5 ವರ್ಷಗಳ ಅವಧಿಯಲ್ಲಿ 38 ಶೇಕಡದಷ್ಟು ಇಳಿದಿದ್ದು, ಅದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ನಗರವಾಗಿದೆ.

ಅಪರಾಧಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಅಂಕಿ-ಅಂಶಗಳು ತೋರಿಸುತ್ತವೆ ಎಂದು ದುಬೈ ಪೊಲೀಸ್‌ನ ಕ್ರಿಮಿನಲ್ ತನಿಖೆಯ ಸಹಾಯಕ ಕಮಾಂಡರ್-ಇನ್-ಚೀಫ್ ಮೇಜರ್ ಜನರಲ್ ಖಲೀಲ್ ಇಬ್ರಾಹೀಂ ಅಲ್ ಮನ್ಸೂರಿ ಹೇಳಿದ್ದಾರೆ.

ಅಪರಾಧಗಳ ಸಂಖ್ಯೆಯು 1 ಲಕ್ಷ ಜನಸಂಖ್ಯೆಗೆ 22 ಇದ್ದು, 2017ರಲ್ಲಿ 1 ಲಕ್ಷ ಜನಸಂಖ್ಯೆಗೆ 12.6ಕ್ಕೆ ಇಳಿದಿದೆ ಎಂದು ಅವರು ಹೇಳಿದರು.

 2018ರ ಬಳಿಕ, ಅದರಲ್ಲೂ ವಿಶೇಷವಾಗಿ ಅಪರಾಧ ಕೃತ್ಯಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ವಿಧಾನಗಳನ್ನು ಜಾರಿಗೊಳಿಸಿದ ಬಳಿಕ, ಅಪರಾಧಗಳ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಕೊಲೆ ಅಪರಾಧ ಪ್ರಮಾಣವು 1 ಲಕ್ಷ ಜನಸಂಖ್ಯೆಗೆ 2016ರಲ್ಲಿ ಇದ್ದ 0.5 ಶೇಕಡದಿಂದ 2017ರಲ್ಲಿ 0.3 ಶೇಕಡಕ್ಕೆ ಇಳಿದಿದೆ ಎನ್ನುವುದನ್ನೂ ಅಂಕಿಸಂಖ್ಯೆಗಳು ತೋರಿಸಿವೆ.

Comments are closed.