ಗಲ್ಫ್

ಭಾರತೀಯನಿಗೆ ಅಬುಧಾಬಿ ಲಾಟರಿಯಲ್ಲಿ ಸಿಕ್ಕಿತು ಬರೋಬರಿ 12.4 ಕೋಟಿ ರೂ. ! ಇತರ 7 ಭಾರತೀಯರಿಗೆ ತಲಾ 18 ಲಕ್ಷ ರೂ.

Pinterest LinkedIn Tumblr

ಅಬುಧಾಬಿ: ಅಬುಧಾಬಿಯ ಲಾಟರಿಯೊಂದರಲ್ಲಿ ಭಾರತೀಯ ವಲಸಿಗ ತನ್ಸಿಲಸ್ ಬಾಬು ಮ್ಯಾಥ್ಯೂ 7 ಮಿಲಿಯ ದಿರ್‌ಹಮ್ (ಸುಮಾರು 12.4 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ.

‘ಬಿಗ್ ಟಿಕೆಟ್ ಅಬುಧಾಬಿ’ಯ ಟಿಕೆಟನ್ನು ತನ್ಸಿಲಸ್ ಖರೀದಿಸಿದ್ದರು. ಅವರು ಬಂಪರ್ ಬಹುಮಾನ ಗೆದ್ದಿದ್ದಾರೆ ಎಂಬುದಾಗಿ ಸೋಮವಾರ ಘೋಷಿಸಲಾಯಿತು.

ಆದರೆ, ಸೋಮವಾರದ ಡ್ರಾದಲ್ಲಿ ಅವರೊಬ್ಬರೇ ಅದೃಷ್ಟಶಾಲಿ ವಿಜೇತರಲ್ಲ. ಲಾಟರಿಯ 8 ವಿಜೇತರಲ್ಲಿ 7 ಮಂದಿ ಭಾರತೀಯರು ಹಾಗೂ ಓರ್ವ ಬಹರೈನ್ ಪ್ರಜೆ. ಅವರೆಲ್ಲರಿಗೂ ತಲಾ 1 ಲಕ್ಷ ದಿರ್‌ಹಮ್ (17.73 ಲಕ್ಷ ರೂಪಾಯಿ) ಬಹುಮಾನ ದೊರೆತಿದೆ.

Comments are closed.