ಗಲ್ಫ್

ನಟಿ ಶ್ರೀದೇವಿ ಮೃತದೇಹ ಕೊಂಡೊಯ್ಯಲು ಅನುಮತಿ ನೀಡಿದ ದುಬೈ ಪೊಲೀಸರು; ಮೃತದೇಹ ಇಂದು ಮುಂಬೈಗೆ

Pinterest LinkedIn Tumblr

ದುಬೈ: ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಶ್ರೀದೇವಿ (59 ವರ್ಷ)ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ದುಬೈ ಪೊಲೀಸರು ಕೊನೆಗೂ ಅನುಮತಿ ನೀಡಿದ್ದಾರೆ.

ಶ್ರೀದೇವಿ ಕುಟುಂಬ ಸದಸ್ಯರಿಗೆ ದುಬೈ ಪೊಲೀಸರು ನಿರಪೇಕ್ಷಣಾ ಪತ್ರ(ಎನ್‌ಒಸಿ)ನೀಡಿದೆ. ಈ ಹಿನ್ನೆಲೆಯಲ್ಲಿ ನಟಿಯ ಪಾರ್ಥಿವ ಶರೀರ ಇಂದು ಸಂಜೆ ಮುಂಬೈಗೆ ತಲುಪಲಿದೆ. ಸುದೀರ್ಘ ವಿಚಾರಣೆಯ ಬಳಿಕ ದುಬೈ ಪೊಲೀಸರು ಶ್ರೀದೇವಿಯ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಜುಮೇರಾ ಎಮಿರೇಟ್ಸ್ ಟವರ್ಸ್‌ ಹೊಟೇಲ್‌ನ ಕೊಠಡಿ ಸಂಖ್ಯೆ 2201ರಲ್ಲಿ ಶನಿವಾರ ಬೆಳಗ್ಗೆ ಬಾತ್‌ರೂಮ್ ಟಬ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶ್ರೀದೇವಿ ಪತ್ತೆಯಾಗಿದ್ದರು. ಮೊದಲಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಆಕಸ್ಮಿಕವಾಗಿ ಬಾತ್‌ರೂಮ್ ಟಬ್ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿಸಲಾಗಿತ್ತು. ಅವರ ರಕ್ತದಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾಗಿದ್ದು, ತಲೆ ಭಾಗಕ್ಕೆ ಗಾಯವಾಗಿದೆ ಎಂದು ಗೊತ್ತಾಗಿತ್ತು.

Comments are closed.