ಗಲ್ಫ್

ಶ್ರೀದೇವಿ ಸಾವು: ಪಾರ್ಥಿವ ಶರೀರ ಹಸ್ತಾಂತರಿಸುವ ಪ್ರಕ್ರಿಯೆ ಮತ್ತಷ್ಟು ವಿಳಂಬ

Pinterest LinkedIn Tumblr

ಮುಂಬಯಿ: ದುಬೈನಲ್ಲಿ ಶನಿವಾರ ರಾತ್ರಿ ಮೃತಪಟ್ಟಿರುವ ನಟಿ ಶ್ರೀದೇವಿ ಸಾವಿಗೆ ಕಾರಣ ಈಗ ತಿಳಿದುಬಂದಿದೆ. ಆದರೆ ಪಾರ್ಥಿವ ಶರೀರವನ್ನು ಹಸ್ತಾಂತರಿಸುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.

ಶ್ರೀದೇವಿ ಸಾವು ಹೃದಯ ಸ್ತಂಭನ ಮತ್ತು ನಂತರ ಬಾತ್‌ಟಬ್‌ಗೆ ಬಿದ್ದಿದ್ದರಿಂದ ಉಂಟಾಗಿರುವುದು ಎಂದು ಫೊರೆನ್ಸಿಕ್‌ ವರದಿಗಳು ಸ್ಪಷ್ಟಪಡಿಸಿದ ನಂತರ ದುಬೈ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಶ್ರೀದೇವಿ ಮೊಬೈಲ್‌ ಕರೆಗಳನ್ನು ಪರಿಶೀಲಿಸಿ ವರದಿ ನೀಡಿದ ನಂತರ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಹೀಗಾಗಿ ಶ್ರೀದೇವಿ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವುದು ವಿಳಂಬವಾಗಲಿದೆ ಎಂದು ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

ಇದಕ್ಕೂ ಮುನ್ನ, ಶ್ರೀದೇವಿ ಮರಣೋತ್ತರ ಪರೀಕ್ಷೆ ವಿಧಿ ವಿಧಾನ ಪೂರ್ಣಗೊಂಡಿದೆ. ಎಮಿರೇಟ್ಸ್‌ ಟವರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದೆ. ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ತಿಳಿಸಲಾಗಿದೆ.

ಬಾತ್‌ರೂಮ್‌ಗೆ ತೆರಳಿದ್ದ ಶ್ರೀದೇವಿ ಹೃದಯಾಘಾತಕ್ಕೊಳಗಾಗಿ ಆಕಸ್ಮಿಕವಾಗಿ ಬಾತ್‌ ಟಬ್‌ನಲ್ಲಿ ಬಿದ್ದಿದ್ದಾರೆ. ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದರು ಎಂದು ಖಲೀಜ್‌ ಟೈಮ್ಸ್‌ ಕೂಡ ವರದಿ ಮಾಡಿದೆ. ಮರಣೋತ್ತರ ಪರೀಕ್ಷೆ ವರದಿಯನ್ನು ಕುಟುಂಬದವರಿಗೆ ನೀಡಲಾಗಿದೆ ಎನ್ನಲಾಗಿದೆ.

ಮಧ್ಯಾಹ್ನ 2 ಗಂಟೆಯ ವೇಳೆಗೆ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿದೆ. ನಂತರ ಪಾರ್ಥಿವ ಶರೀರವನ್ನು ಪೊಲೀಸರಿಗೆ ಒಪ್ಪಿಸಿ ಕೆಲವು ದಾಖಲೆಗಳ ತಪಾಸಣೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು. ಆ ನಂತರ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಂತ್ಯಸಂಸ್ಕಾರದಲ್ಲಿ ಗಣ್ಯರು

ಮುಂಬಯಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ನಾಗಾರ್ಜುನ್ ಮತ್ತು ವೆಂಕಟೇಶ್ ಸೇರಿದಂತೆ ಹಲವು ಟಾಲಿವುಡ್‌ ತಾರೆಯರು ಹಾಗೂ ದಕ್ಷಿಣ ಭಾರತ ಚಿತ್ರರಂಗದ ಭಾರತಿರಾಜ, ಕೆ ರಾಘವೇಂದ್ರ ರಾವ್, ಅಂಬರೇಶ್, ಪ್ರಕಾಶ್ ರಾಜ್ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ದುಬೈನಿಂದ ಶ್ರೀದೇವಿ ಪಾರ್ಥಿವ ಶರೀರವನ್ನು ಅನಿಲ್‌ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ಕರೆತರಲಾಗುವುದು ಎಂದು ಹೇಳಲಾಗಿದೆ. ದುಬೈನ ಜನರಲ್‌ ಡಿಪಾರ್ಟ್‌ಮೆಂಟ್‌ ಆಫ್‌ ಫೋರೆನ್ಸಿಕ್‌ನಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆದಿದೆ.

ಶ್ರೀದೇವಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಎಮಿರೇಟ್ಸ್‌ ಟವರ್‌ನಲ್ಲಿ ಬಾತ್‌ರೂಮ್‌ಗೆ ಹೋಗಿದ್ದ ಶ್ರೀದೇವಿ ಅಲ್ಲಿಯೇ ಕುಸಿದು ಬಿದ್ದಿದ್ದರು. ಕೆಲ ಸಮಯದ ನಂತರ ಆಕೆಯನ್ನು ರಶೀದ್‌ ಆಸ್ಪತ್ರೆಯಗೆ ಕೊಂಡೊಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.

Comments are closed.