ಗಲ್ಫ್

ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ಇಂದು ದುಬೈಯಲ್ಲಿ “ಸ್ವಪ್ನ ವಾಸವದತ್ತೆ” ಕನ್ನಡ ನಾಟಕ ಪ್ರದರ್ಶನ

Pinterest LinkedIn Tumblr

ದುಬೈ: ಯುಎಇಯ ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ಜನವರಿ 19 ರ ಶುಕ್ರವಾರ ಸಂಜೆ 5 ಗಂಟೆಗೆ ಜುಮೈರಾದಲ್ಲಿರುವ ಎಮಿರೇಟ್ಸ್ ಇಂಟೆರ್ ನ್ಯಾಷನಲ್ ಸ್ಕೂಲಿನ ಥಿಯೇಟರಿನಲ್ಲಿ ” ಸ್ವಪ್ನ ವಾಸವದತ್ತೆ” ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕವನ್ನು ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶಿಸಿದ್ದು, ಮಾಹಾಕವಿ ಭಾಸ ವಿರಚಿತ ಸಂಸ್ಕೃತ ಮೂಲ ನಾಟಕವನ್ನು ಕನ್ನಡಕ್ಕೆ ಡಾ.ಕೀರ್ತಿನಾಥ ಕುರ್ತಕೋಟಿ ಭಾಷಾಂತರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ಸಿನೆಮಾದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಕಾರ್ಯ ಸಾಧನೆಗಾಗಿ “ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಇದೇ ವೇಳೆ ಯುಎಇಯಲ್ಲಿ ಚಿರಪರಿಚಿತರಾಗಿರುವ ಜೊತೆಗೆ ಕಲೆ-ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಲೇಖಕ ಗಣೇಶ್ ರೈ ಅವರ ಕಾರ್ಯ ಸಾಧನೆಯನ್ನು ಗುರುತಿಸಿ “ಧ್ವನಿ ಪುರಸ್ಕಾರ” ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನಾಟಕದ ಪಾತ್ರವರ್ಗದಲ್ಲಿ: ವಿಧುಷಿ ಸಪ್ನಾ ಕಿರಣ್, ಪ್ರಭಾಕರ್ ಕಾಮತ್, ಆರತಿ ಅಡಿಗ, ವಾಸು ಬಾಯಾರ್, ಗುರುರ್ರಾಜ್ ಪುತ್ತೂರು, ಅಶೋಕ್ ಅಂಚನ್, ಜಾನೆಟ್ ಸಿಕ್ವೇರಾ, ಸಂತೋಷ್ ಪೂಜಾರಿ, ಶ್ವೇತ ನಾಡಿಗ್ ಶರ್ಮ, ಶೋಭಿತ ಪ್ರೇಂಜಿತ್, ಸತೀಶ್ ಹೆಗ್ಡೆ, ರಶ್ಮಿ ವೆಂಕಟೇಶ್, ಸಂಧ್ಯಾ ರವಿ, ನಾಗಾ ಭೂಷಣ್ ಕಶ್ಯಪ್, ಜಗನ್ನಾಥ್ ಬೆಳ್ಳಾರೆ, ಸಂದೀಪ್ ದೇವಾಡಿಗ, ಜೇಶ್ ಬಾಯಾರ್, ಜಯಂತ್ ಶೆಟ್ಟಿ, ಪದ್ಮರಾಜ್ ಏಕಾರ್, ಹಾಗು ಇತರರು.

ನೃತ್ಯ ತಂಡದಲ್ಲಿ: ವಿಧುಷಿ ಅಂಜಲಿ ನಾಗ ಭೂಷಣ್, ವಿನಾಯಕ್ ಹೆಗ್ಡೆ, ಸರಿತಾ ದಯಾಕಿರೋಡಿಯನ್, ದೀಪ ಮಾರಿಯ, ಅನುಷಾ ಊರ್ವಾ.

Comments are closed.