ಮನೋರಂಜನೆ

ದ್ರಾವಿಡ ಮೂಲದ ದಕ್ಷಿಣ ಭಾರತ ರಾಜ್ಯಗಳು ಒಂದಾದರೆ ಕೇಂದ್ರದ ವಿರುದ್ಧ ದನಿ ಹೆಚ್ಚಾಗುತ್ತದೆ: ಕಮಲ್‌ಹಾಸನ್‌

Pinterest LinkedIn Tumblr


ಚೆನ್ನೈ: ಭಾರತೀಯ ಚಿತ್ರರಂಗದ ಧ್ರುವತಾರೆ ಕಮಲ್‌ ಹಾಸನ್‌ ಬೆಳ್ಳಿ ತೆರೆಯ ನಂತರ ರಾಜಕೀಯ ತೆರೆಯ ಮೇಲೆ ಕಾಣಿಸಿಕೊಳ್ಳಲು ಹೊರಟಿರುವುದು ಎಲ್ಲರಿಗೂ ಗೊತ್ತಿದೆ.

ಇದಕ್ಕೆ ಪೂರಕ ಎಂಬಂತೆ ಈಗ ಕಮಲ್‌ಹಾಸನ್‌ ಹಲವಾರು ಯೋಜನೆಗಳನ್ನು, ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಕೇಳಿಬಂದಿರುವುದು ದಕ್ಷಿಣ ಭಾರತದ ದನಿಯ ಬಗ್ಗೆ.

ಕೇಂದ್ರ ಸರಕಾರ ಸದಾ ದಕ್ಷಿಣ ಭಾರತದ ಬಗ್ಗೆ ಉದಾಸೀನ ಧೋರಣೆ ತಾಳುತ್ತಿದೆ ಎಂಬುದು ಕಮಲ್‌ ಹಾಸನ್‌ ಅಭಿಪ್ರಾಯ.

ತಮಿಳು ನಿಯತಕಾಲಿಕವೊಂದಕ್ಕೆ ಅಂಕಣ ಬರೆದಿರುವ ಕಮಲ್‌ಹಾಸನ್‌ ಇದಕ್ಕೆ ಕೆಲವು ಪರಿಹಾರ ರೂಪದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಅಭಿಮಾನಿಗಳಿಂದ ಉಲಗನಾಯಗಂ (ವಿಶ್ವದ ನಾಯಕ) ಎಂದೇ ಕರೆಸಿಕೊಳ್ಳುವ ಕಮಲ್‌, ದಕ್ಷಿಣ ಭಾರತದ ರಾಜ್ಯಗಳೆಲ್ಲವೂ ಒಂದಾಗಬೇಕು ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಮೂಲವಾದ ದ್ರಾವಿಡರೆಲ್ಲರೂ ಒಂದಾಗಬೇಕು. ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಒಂದಾದರೆ ಕೇಂದ್ರವನ್ನು ಎದುರಿಸಬಹುದು.

ದ್ರಾವಿಡ ಮೂಲವನ್ನು ಹೊಂದಿರುವ ನಾವುಗಳು ನಮ್ಮ ನಮ್ಮ ಭಾಷೆ, ಸಂಸ್ಕೃತಿಯನ್ನು ಆಚರಿಸೋಣ. ಇದರಲ್ಲಿ ಯಾವುದೇ ರಾಜೀ ಇಲ್ಲ. ಆದರೆ ರಾಜಕೀಯವಾಗಿ ಕೇಂದ್ರ ಸರಕಾರವನ್ನು ಪ್ರಶ್ನಿಸಬೇಕಾದರೆ, ನಮಗೆ ಬೇಕಾದನ್ನು ಕೇಳಬೇಕಾದರೆ ಎಲ್ಲರೂ ಒಗ್ಗೂಡಿದರೆ ಕಾರ್ಯ ಸಾಧುವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಕಮಲ್‌ ಹಾಸನ್‌ ತಿಳಿಸಿದ್ದಾರೆ.

Comments are closed.