ಅಂತರಾಷ್ಟ್ರೀಯ

ಸೌದಿ ಮಹಿಳೆಯರಿಂದ ಪ್ರಥಮ ಬಾರಿ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ವೀಕ್ಷಣೆ

Pinterest LinkedIn Tumblr


ಜೆಡ್ಡಾ: ಸೌದಿಯಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಫುಟ್ಬಾಲ್‌ ವೀಕ್ಷಿಸಿದ್ದಾರೆ. ಪುರುಷರು ಆಡುವ ಪುಟ್ಬಾಲ್‌ ಪಂದ್ಯವನ್ನು ಮಹಿಳೆಯರು ನೇರವಾಗಿ ವೀಕ್ಷಿಸಿ ಸಂತೋಷಪಡುವುದಕ್ಕೆ ಶುಕ್ರವಾರ ಕಿಂಗ್‌ ಅಬ್ದುಲ್ಲಾ ಸ್ಟೇಡಿಯಂ ಸಾಕ್ಷಿಯಾಯಿತು.

ಜೆಡ್ಡಾದಲ್ಲಿ ಅಲ್‌ ಅಹ್ಲಿ ಮತ್ತು ಅಲ್‌ ಬತಿನ್‌ ಎಂಬ ಎತಡು ತಂಡಗಳ ಮಧ್ಯೆ ಫುಟ್ಬಾಲ್‌ ಪಂದ್ಯ ನಡೆದಿತ್ತು. ಮೊದಲ ಬಾರಿಗೆ ಪತ್ನಿ, ಮಕ್ಕಳು ಜತೆಯಾಗಿ ಕುಟುಂಬವು ಇಂಥ ಪಂದ್ಯವನ್ನು ಕಣ್ತುಂಬಿಸಿಕೊಂಡಿದೆ.

ಜೆಡ್ಡಾ, ದಮಾಮ್‌, ರಿಯಾದ್‌ಗಳಲ್ಲಿ ಪಂದ್ಯಗಳನ್ನು ಕುಟುಂಬ ಸಮೇತ ವೀಕ್ಷಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಜನರಲ್‌ ಸ್ಪೋರ್ಟ್ಸ್‌ ಅಥಾರಿಟಿ ಹೇಳಿದೆ.
ಇಂಥದ್ದೊಂದು ಬೆಳವಣಿಗೆ ಈ ಹಿಂದೆಯೇ ನಡೆಯಬೇಕಿತ್ತು, ಈಗ ಸರಿಯಾದ ಸಮಯಕ್ಕೆ ಜಾರಿಗೊಂಡಿರುವುದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುವೆ. ಬರಲಿರುವ ಇನ್ನಷ್ಟು ಅವಕಾಶಗಳು ಮಹಿಳೆಯರ ಪಾಲಿಗೆ ಸಂತೋಷಕರವಾಗಿರಲಿ ಎಂದು ಎಂದು ಪಂದ್ಯ ವೀಕ್ಷಿಸಿದ ಮುನೀರಾ ಅಲ್‌ ಗಮ್ದಿ ಹೇಳಿದ್ದಾರೆ.

ಕಟ್ಟಾ ಸಾಂಪ್ರದಾಯಿಕ ಸೌದಿಯಲ್ಲಿ ಮಹಿಳೆಗೆ ಕಾರು ಚಾಲನೆ ಪರವಾನಗಿ ನೀಡಿದ ಕೆಲವೇ ತಿಂಗಳ ಬಳಿಕ ಗುರುವಾರ ಮಹಿಳೆಯರಿಗಾಗಿ ಮೊದಲ ಬಾರಿಗೆ ಕಾರು ಪ್ರದರ್ಶನ ಆಯೋಜಿಸಲಾಗಿತ್ತು. ಶನಿವಾರವೂ ಈ ಸ್ಟೇಡಿಯಂನಲ್ಲಿ ಫುಟ್ಬಾಲ್‌ ಪಂದ್ಯ ನಡೆಯಲಿದೆ.

ಸೌದಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಸೌದಿಯಲ್ಲಿ ಮಹಿಳಾ ಸಮಾನತೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂರುವ ಮೂಲಕ ಯುವಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Comments are closed.