ದುಬೈ: ಯು.ಎ.ಇ ಬಂಟ್ಸ್ ಯುವ ಘಟಕವು ಬಂಟ್ಸ್ ಸಮುದಾಯಕ್ಕೆ ಸೀಮಿತವಾದ ಯು.ಎ.ಇ ಮಟ್ಟದ ನಾಲ್ಕನೇ ವರ್ಷದ ಕ್ರೀಡಾ ಕೂಟವನ್ನು 2018ರ ಫೆಬ್ರವರಿ 2 ರಂದು ದುಬೈಯ ಅಲ್ ಕೂಸ್’ನ ದಿ ಸ್ಪ್ರಿಂಗ್ಡ್ಯಾಲ್ಸ್ ಸ್ಕೂಲಿನ ಕ್ರೀಡಾಂಗಣದಲ್ಲಿ ಆಯೋಜಿಸಿದೆ.
ಅಂದು ಬೆಳಗ್ಗಿನಿಂದ ಸಂಜೆ ವರೆಗೆ ನಡೆಯುವ ಕ್ರೀಡಾಕೂಟದಲ್ಲಿ ಕಿರಿಯರಿಂದ ಹಿಡಿದು ಹಿರಿಯರ ವರೆಗೂ ವಿವಿಧ ಬಗೆಯ ಆಕರ್ಷಕ ಕ್ರೀಡಾ ಚಟುವಟಿಕೆಗಳು ಜರಗಲಿದೆ. ಜೊತೆಗೆ ಕಪ್ಪೆ ಓಟ, ಲಿಂಬೆ ಚಮಚ, ಹಗ್ಗ ಜಗ್ಗಾಟ, ಕಬಡ್ಡಿ, ಕೋಕೋ, 100, 200, 400 ಮೀ. ಓಟ, ರಿಲೆ, ಲಾಂಗ್ ಜಂಪ್, ಶಾಟ್ ಪುಟ್ ಮುಂತಾದ ಸ್ಪರ್ಧೆಗಳು ನಡೆಯಲಿದೆ. ಅಲ್ಲದೆ ಕೂಟದಲ್ಲಿ ಯುಎಇ ಬಂಟ್ಸ್ ಪದಾಧಿಕಾರಿಗಳು ಸಹಿತ ಹಲವು ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಯು.ಎ.ಇ ಬಂಟ್ಸ್ ಯುವ ಘಟಕ ತಿಳಿಸಿದೆ.
ಕ್ರೀಡಾ ಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಕಿರಣ್ ಶೆಟ್ಟಿ-050 3847266
ಪ್ರಸಾದ್ ಶೆಟ್ಟಿ-050 5184423