ಗಲ್ಫ್

ಇಂದು ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ; 62ನೇ ಕರ್ನಾಟಕ ರಾಜ್ಯೋತ್ಸವ – ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ

Pinterest LinkedIn Tumblr

ಕರ್ನಾಟಕ ಸಂಘ ಶಾರ್ಜಾ ತನ್ನ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ 2017 ನವೆಂಬರ್ 17ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅಯೋಜಿಸಲಾಗಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು ಮತ್ತು ಗೌರವ ಅತಿಥಿಗಳಾಗಿ ಇಂಡಿಯನ್ ಅಸೋಸಿಯೇಶನ್ ಶಾರ್ಜಾ ಅಧ್ಯಕ್ಷರಾದ ಅಡ್ವಕೇಟ್ ವೈ. ಎ. ರಹಿಂ, ತುಂಬೆ ಗ್ರೂಪ್ ನ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಶ್ರೀ ತುಂಬೆ ಮೊಯಿದ್ದೀನ್ ಹಾಗೂ ಶಾರ್ಜಾ ಸಂತ ಮೈಕೆಲರ ಇಗರ್ಜಿಯ ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಂ ಪಿಂಟೊ ರವರು ಪಾಲ್ಗೊಳ್ಳಲಿದ್ದಾರೆ.

2017ನೇ ಸಾಲಿನ ಪ್ರತಿಷ್ಠಿತ “ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ” ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರಧಾನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷೆ, ಕಲೆ ಸಂಸ್ಕೃತಿ, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಎಲ್ಲಾ ಕರ್ನಾಟಕ ಪರ ಸಂಘಟನೆಗಳಿಗೆ ನಿರಂತರವಾಗಿ ಬೆಂಬಲ, ಪ್ರೋತ್ಸಾಹ ನೀಡುತ್ತಾ ಗಲ್ಫ್ ನಾಡಿನ ಈ ಮಣ್ಣಿನಲ್ಲಿ ಕನ್ನಡ ಭಾಷೆಯನ್ನು ಸದಾ ಹಸಿರಾಗಿರಿಸಿ, ಕನ್ನಡ ಧ್ವಜವನ್ನು ಎತ್ತಿ ಹಿಡಿದಿರುವ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ 2017ನೇ ಸಾಲಿನ ಪ್ರತಿಷ್ಠಿತ “ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಗುವುದು.

ಕರ್ನಾಟಕ ಸಂಘ ಶಾಜಾ ಪ್ರತಿವರ್ಷ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ ಪ್ರಶಸ್ತಿಯನ್ನು ಇಲ್ಲಿಯವರೆಗೆ ಹದಿನೆಂಟು ಮಂದಿಗೆ ನೀಡಿ ಗೌರವಿಸಲಾಗಿದೆ.

“ಮಯೂರ ನಾಟ್ಯ ಮಂಜರಿ” ಯು.ಎ.ಇ. ಮಟ್ಟದ ಕನ್ನಡ ಸಮೂಹ ನೃತ್ಯ ಸ್ಪರ್ಧೆ
ಯು.ಎ.ಇ.ಯಲ್ಲಿ ಕಾರ್ಯಪ್ರವೃತ್ತವಾಗಿರುವ ಕರ್ನಾಟಕ ಪರ ಸಂಘಟನೆಗಳ ನೃತ್ಯ ತಂಡಗಳಿಗೆ ಯು.ಎ.ಇ. ಮಟ್ಟದಲ್ಲಿ ಕನ್ನಡ ಸಮೂಹ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜಯಿ ತಂಡ “ಮಯೂರ ನಾಟ್ಯ ಮಂಜರಿ” ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲಿದೆ. ಸ್ಪರ್ಧೆಯಲ್ಲಿ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷಿಗರು ಭಾಗವಹಿಸಲಿದ್ದಾರೆ. ಸ್ಪರ್ಧಾ ತಂಡಗಳು, ಶಾಸ್ತ್ರೀಯ, ಅರೆಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ, ಸಿನಿಮ್ಯಾಟಿಕ್ ಸಮೂಹ ನೃತ್ಯದ ಮೂಲಕ ಸ್ಪರ್ಧೆಯಲ್ಲಿ ಸರ್ವರ ಗಮನ ಸೆಳೆಯಲಿದ್ದಾರೆ.

ಕಿರು ಯಕ್ಷಗಾನ ಪ್ರದರ್ಶನ ಮತ್ತು ಹಾಸ್ಯ, ಪ್ರಹಸನಗಳೊಂದಿಗೆ ನಡೆಯಲಿರುವ ಕನ್ನಡ ಹಬ್ಬಕ್ಕೆ ಪ್ರವೇಶ ಉಚಿತವಾಗಿದ್ದು, ಸಮಸ್ಥ ಅನಿವಾಸಿ ಕನ್ನಡಿಗರಿಗೆ ಸರ್ವ ಸದಸ್ಯರ ಪರವಾಗಿ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸುಗಂಧರಾಜ್ ಬೇಕಲ್ ಮಾಧ್ಯಮದ ಮೂಲಕ ಆಹ್ವಾನಿಸಿದ್ದಾರೆ.

Comments are closed.