ಗಲ್ಫ್

ಕೆ ಐ ಸಿ ಅಲ್ ಮುತ್ತೀನ ಘಟಕ ನವೀಕರಣ, ನೂತನ ಸಮಿತಿ ಅಸ್ತಿತ್ವಕ್ಕೆ

Pinterest LinkedIn Tumblr

img-20161219-wa0061

ಕೆ ಐ ಸಿ ದುಬೈ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಮುತ್ತೀನ ಘಟಕ ವತಿಯಿಂದ ಮೌಲೂದ್ ಪಾರಾಯಣ ಹಾಗೂ ಘಟಕ ನವೀಕರಣ ಕಾರ್ಯಕ್ರಮ ವು ಸಮಿತಿಯ ಅಧ್ಯಕ್ಷರಾದ ಬಹು! ಇಕ್ಬಾಲ್ ಅರ್ಶದಿ ಯವರ ಅದ್ಯಕ್ಷತೆಯಲ್ಲಿ ಜ! ಇಸ್ಮಾಯಿಲ್ ಅರಿಯಡ್ಕ ರವರ ನಿವಾಸದಲ್ಲಿ ನಡೆಯಿತು. ಬಹು! ಇಕ್ಬಾಲ್ ಅರ್ಶದಿ ಯವರ ದುಆ ದೊಂದಿಗೆ ಆರಂಭವಾದ ಸಭೆಯಲ್ಲಿ ಕೆ ಐ ಸಿ ಕೇಂದ್ರ ಸಮಿತಿಯ ಪ್ರ. ಕಾರ್ಯದರ್ಶಿ ಜ! ನೂರ್ ಮಹಮ್ಮದ್ ನೀರ್ಕಜೆ ಯವರು ಕೆ ಐ ಸಿ ಯ ಕಿರು ಪರಿಚಯವನ್ನು ನೀಡಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಸರ್ವರನ್ನೂ ಸ್ವಾಗತಿಸಿದರು .

ಬಹು! ಇಕ್ಬಾಲ್ ಅರ್ಶದಿಯವರು ಮಾತನಾಡಿ * ಹಸಿವನ್ನು ನಿವಾರಿಸುವ ಬಗ್ಗೆ ಚರಿತ್ರೆಯ ಪುಟಗಳನ್ನು ಎಳೆ ಎಳೆ ಯಾಗಿ ವಿವರಿಸಿ ಇವತ್ತು ಕೆ ಐ ಸಿ ಎಂಬ ಸ್ಥಾಪನೆಯಲ್ಲಿ ಬಡ ಹಾಗೂ ಅನಾಥ ಮಕ್ಕಳು ವಿದ್ಯೆ ಎಂಬ ಹಸಿವಿನಿಂದ ಬಳಲುತ್ತಿದ್ದು ಅವರಿಗೆ ಯೋಗ್ಯವಾದ ವಿದ್ಯೆಯನ್ನು ನೀಡಿ ಅವರ ಹಸಿವನ್ನು ನಿವಾರಿಸುವ ಜವಾಬ್ಧಾರಿ ನಮ್ಮ ಮೇಲಿದ್ದು ಪ್ರತಿಯೊಬ್ಬರೂ ಕೆ ಐ ಸಿ ಯ ಸದಸ್ಯರಾಗಿ ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಹಕಾರ ನೀಡಬೇಕೆಂದು ಕರೆಯಿತ್ತು ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು.

ದುಬೈ ಸಮಿತಿಯ ಪ್ರ.ಕಾರ್ಯದರ್ಶಿ ಜ! ಮುಸ್ತಫಾ ಗೂನಡ್ಕ ರವರು ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.
ಕೆ ಐ ಸಿ ದುಬೈ ಸಮಿತಿಯ ಅಧ್ಯಕ್ಷರಾದ ಜ! ಅಶ್ರಫ್ ಖಾನ್ ಮಾಂತೂರ್ ರವರು ಮಾತನಾಡಿ ಅಕಾಡೆಮಿಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ದಿನದಿಂದ ದಿನಕ್ಕೆ ಖರ್ಚು ವೆಚ್ಚಗಳು ಹೆಚ್ಚುತ್ತಿದ್ದು ಸಹ್ರದಯಿ ದಾನಿಗಳ ಸಹಕಾರದಿಂದ ಮುಂದೆ ಸಾಗುತ್ತಿದ್ದು ತಾವೆಲ್ಲರೂ ಹೆಚ್ಚಿನ ಸಹಕಾರವನ್ನು ನೀಡಿ ಕೆ ಐ ಸಿ ಯನ್ನು ಉತ್ತುಂಗಕ್ಕೆ ಏರಿಸಬೇಕೆಂದು ಕರೆಯಿತ್ತು 2106 -17 ನೇ ಸಾಲಿನ ನೂತನ ಸಮಿತಿ ರಚನೆಗೆ ಚಾಲನೆ ನೀಡಿದರು .

ಗೌರವಾಧ್ಯಕ್ಷರು: ಜ ! ಇಸ್ಮಾಯಿಲ್ ಅರಿಯಡ್ಕ

ಅಧ್ಯಕ್ಷರು. ಬಹು! ಇಕ್ಬಾಲ್ ಅರ್ಶದಿ

ಉಪಾಧ್ಯಕ್ಷರು. : ಜ ! ಇರ್ಷಾದ್ ಸಂಪ್ಯ

ಪ್ರ. ಕಾರ್ಯದರ್ಶಿ : ಜ ! ಅಬ್ದುಲ್ ಅಝೀಜ್ ಮಾಡಾವು

ಕಾರ್ಯದರ್ಶಿ. : ಜ ! ಸಲೀಂ ಬೆಳ್ಳಾರೆ

ಕೋಶಾಧಿಕಾರಿ. : ಜ! ಹನೀಫ್ ಅರಿಯಡ್ಕ

ಸಂಘಟನಾ ಕಾರ್ಯದರ್ಶಿ : ಜ! ಶಾಫಿ ಬೆಳ್ಳಾರೆ

ಸದಸ್ಯರುಗಳು ; ಜ! ಅಬ್ದುಲ್ ಸಲಾಂ ಸಂಪ್ಯ
ಜ! ಇಬ್ರಾಹಿಂ ಹೊಸಂಗಡಿ
ಜ! ಹಸೈನಾರ್ ಮುಕ್ರಂಪಾಡಿ
ಜ! ಮುಸ್ತಫಾ ಸಂಪ್ಯ
ಜ! ಹಾರಿಸ್ ಸಂಪ್ಯ
ಜ! ಬಷೀರ್ ಅರಿಯಡ್ಕ
ಜ! ಅಬ್ದುಲ್ ರಝಕ್ ಕುಂಬ್ರ
ಜ! ಅಬ್ದುಲ್ ಅಝೀಜ್ ಮುಕ್ರಂಪಾಡಿ
ಜ! ಅಬ್ದುಲ್ ರಹಿಮಾನ್ ಪರ್ಲಡ್ಕ
ಇವರುಗಳನ್ನು ಆರಿಸಲಾಯಿತು .
ಈ ಸಂದರ್ಭದದಲ್ಲಿ ಜ! ಇಸ್ಮಾಯಿಲ್ ಅರಿಯಡ್ಕ, ಜ! ಬಶೀರ್ ಅರಿಯಡ್ಕ, ಜ! ಜಾಬಿರ್ ಬೆಟ್ಟಂಪಾಡಿ ಮೊದಲಾದವರು ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ಜ! ಬಶೀರ್ ಅರಿಯಡ್ಕ ವಂದನಾರ್ಪಣೆಗೈದರು.

Comments are closed.