ಕರ್ನಾಟಕ

ಪ್ರತಿಯೊಬ್ಬ ಆಘಾತಕ್ಕೊಳಗಾದ ವ್ಯಕ್ತಿಗೆ ಮೊದಲು ಮಾಡಲೇಬೇಕಾದ ಪ್ರಥಮ ಚಿಕ್ಸಿತೆಯ ಬಗ್ಗೆ ವಿವರಗಳು.

Pinterest LinkedIn Tumblr

first_aid_tretment

ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆಘಾತಕೊಳ್ಳಕ್ಕಾದ ವ್ಯಕ್ತಿಯನ್ನು ನಾವು ಕಂಡು ಕಾಣಾದ ರೀತಿಯಲ್ಲಿರುವುದು ಸಾಮಾನ್ಯವಾಗಿ ನೋಡಿತ್ತೇವೆ ಇದಕ್ಕೆ ಕಾರಣ ಅವರಿಗೆ ಸಹಾಯ ಮಾಡಲು ಹಿಂಜರಿಕ್ಕೆಯಲ್ಲ ಬದಲಿಗೆ ಅವರಿಗೆ ಯಾವ ರೀತಿಯ ಸಹಾಯ ಮಾಡಬೇಕು, ಯಾವ ರೀತಿಯ ಚಿಕಿತ್ಸೆ ನೀಡಿ ಅವರನ್ನು ರಕ್ಷಿಸಬೇಕು ಎಂಬುದರ ಅರಿವು ನಮಗೆ ಇರುವುದಿಲ್ಲ.ಅದಕ್ಕಾಗಿ ಈ ಲೇಖನ . ಇದನ್ನು ಓದಿ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡು, ಜೀವದಾನ ಮಾಡಿ.

ವಿದ್ಯುತ್ ಆಘಾತ : ಇದನ್ನು ತಿಳಿಯುವುದು ಬಹು ಸುಲಭ. ಬಾಧಿತನು ವಿದ್ಯುತ್ ಉಪಕರಣ ಅಥವಾ ಕೇಬಲ್ ಬಳಿ ಎಚ್ಚರ ತಪ್ಪಿ ಬಿದ್ದಿರುತ್ತಾನೆ..

ಚಿಕಿತ್ಸೆ:
*ಬಾಧಿತನನ್ನು ಮುಟ್ಟುವ ಮೊದಲು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ
*ಅವನು ಉಸಿರಾಡುತ್ತಿದ್ದರೆ ಉಸಿರಾಟ ಸರಾಗವಾಗುವ ಭಂಗಿಯಲ್ಲಿ ಮಲಗಿಸಿ
*ಅವನು ಉಸಿರಾಟ ನಿಲ್ಲಿಸಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ.
*ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.
*ಮುಳುಗಿದವರಿಗೆ ಚಿಕಿತ್ಸೆ
*ಉಸಿರಾಟದ ಮಾರ್ಗವನ್ನು ಸುಗಮ ಗೊಳಿಸಿ ಅವನು ಉಸಿರಾಡುತ್ತಿರುವನೆ, ಹೃದಯ ಬಡಿತವಿದೆಯ ಎಂದು ಗಮನಿಸಿ
*ಹೃದಯ ಬಡಿತ ನಿಂತಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ ನೀವಿ.
*ಬಾಧಿತನು ಬರಿ ಎಚ್ಚರ ತಪ್ಪಿದ್ದರೆ, ನೀರಿನಿಂದ ತೆಗೆದ ತಕ್ಷಣ, ಸುಧಾರಿಸುವ ಭಂಗಿಯಲ್ಲಿ ಮಲಗಿಸಿ.
*ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.

ಬಿಸಿಲ ಆಘಾತ:
*ರೋಗಿಯ ದೇಹವನ್ನು ತಕ್ಷಣ ತಂಪಾಗಿಡಿ.
*ಸಾಧ್ಯವಾದರೆ ಅವನನ್ನು ತಣ್ಣನೆಯ ನೀರಲ್ಲಿ ಇಡಿ. ಅವನನ್ನು ಒದ್ದೆಬಟ್ಟೆಯಲ್ಲಿ ಸುತ್ತಿ. ಅವನ ಚರ್ಮಕ್ಕೆ ಮಂಜುಗಡ್ಡೆಯಿಂದ ಉಜ್ಜಿ. ಕೋಲ್ಡ್‌ ಪ್ಯಾಕ್ ಹಾಕಿ
*ಅವನ ದೇಹದ ಉಷ್ಣತೆ 101 F ಗೆ ಇಳಿದಾಗ ಅವನು ತಂಪಾದ ಕೋಣೆಯೊಳಗೆ ವಿರಮಿಸಲಿ
*ಉಷ್ಣತೆ ಪುನಃ ಏರ ತೊಡಗಿದರೆ ಮತ್ತೆ ತಂಪು ಮಾಡುವ ಕೆಲಸ ಪ್ರಾರಂಭಿಸಿ.
*ಆ ವ್ಯಕ್ತಿ ಕುಡಿಯಲು ಸಾಧ್ಯವಾದರೆ ತಣ್ಣನೆಯ ನೀರು ಕೊಡಿ .
*ಯಾವುದೇ ರೀತಿಯ ಔಷಧಿ ಕೊಡಬೇಡಿ
*ವೈದ್ಯಕೀಯ ಸಹಾಯ ಪಡೆಯಿರಿ

 ಆದೇ ರೀತಿ ಹಾವು ಕಡಿತದಿಂದ ಜೀವರಕ್ಷಿಸಬೇಕಾದರೇ ಏನು ಮಾಡಬೇಕು ಎಂಬುದು ಈ ವೀಡಿಯೋದಲ್ಲಿ ಕಾಣಬಹುದು.

ಉಸಿರು ಗಟ್ಟುವುದು:
*ಯಾವುದೆ ಒಬ್ಬವ್ಯಕ್ತಿಗೆ ಉಸಿರು ಗಟ್ಟಿದರೆ , ಅವನು ಕೆಮ್ಮುತ್ತಿರುವ ತನಕ ನೀವು ಮಧ್ಯ ಪ್ರವೇಶಿಸಬಾರದು ಕೆಮ್ಮಿದಾಗಲೂ ಗಂಟಲಲ್ಲಿ ಸಿಕ್ಕಿರುವ ವಸ್ತು ಹೊರಬರದಿದ್ದರೆ ಮತ್ತು ಅವನಿಗೆ ಉಸಿರಾಡಲು ಬಹಳ *ತೊಂದರೆಯಾದರೆ ಅಥವ ಅವನ ಮೈ ಬಣ್ಣ ನೀಲಿಯಾದರೆ, ಮತ್ತು ಉಸಿರು ಗಟ್ಟಿರುವುದರಿಂದ ಕೆಮ್ಮಲು ಅಥವ ತಕ್ಷಣವೆ ಮಾತನಾಡಲು ಸಾಧ್ಯವಾಗದಿದ್ದರೆ, “ನಿನಗೆ ಉಸಿರು ಗಟ್ಟಿದೆಯಾ?” ಎಂದು *ಪ್ರಶ್ನಿಸಿ.ಉಸಿರು ಗಟ್ಟಿದ ವ್ಯಕ್ತಿಯು “ ಹೌದು” ಎಂದು ತಲೆಯಾಡಿಸುವನು ಆದರೆ ಮಾತನಾಡಲು ಸಾಧ್ಯವಾಗುವುದಿಲ್ಲ ಪ್ರಶ್ನೆ ಕೇಳುವುದು ಅತಿ ಮುಖ್ಯವಾಗಿದೆ . ಏಕೆಂದರೆ ಹೃದಯಾಘಾತ ವಾದವರಿಗೂ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಅವರು ಮಾತನಾಡಬಲ್ಲರು.
*ಹೊಟ್ಟೆಯ ಮೇಲೆ ಒತ್ತಡವನ್ನು ತುರ್ತು ಪರಿಸ್ಥೀತಿಯಲ್ಲಿ ಮಾತ್ರ ಹಾಕಿರಿ
*ಆ ವ್ಯಕ್ತಿಯ ಹಿಂದೆ ನಿಂತು ಅವನ ಸೊಂಟವನ್ನು ತೋಳಿನಿಂದ ಬಳಸಿ.
*ನೀವು ಮುಷ್ಠಿ ಕಟ್ಟಿ ಹೆಬ್ಬೆರಳಿನ ಬುಡವುಅವನ ಹೊಟ್ಟೆಯ ಮಧ್ಯ ಭಾಗದಲ್ಲಿರಲಿ. ಹೊಕ್ಕಳಿನ ಮೇಲೆ ಆದರೆ ಎದೆಗೂಡಿನ ಮೂಳೆಯ ಕೆಳಗೆ ಇರಲಿ.
*ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದು ಅದನ್ನು ಇನ್ನೊಂದುಕೈನಿಂದ ಒತ್ತಿರಿ ಮತ್ತು ಎರಡೂ ಕೈಗಳನ್ನು ನಿಮ್ಮಕಡೆ ಬಲವಾಗಿ ಎಳೆಯಿರಿ. ಹಿಡಿತವನ್ನು ತುಸು ಮೇಲೆ ಕೆಳಗೆ ಜರುಗಿಸಿ.
*ಈ ಪ್ರಕ್ರಿಯೆಯನ್ನು ಸತತವಾಗಿ ಆ ವಸ್ತುವು ಹೊರಬರುವ ವರೆಗೆ ಇಲ್ಲವೆ ವ್ಯಕ್ತಿಯು ಎಚ್ಚರತಪ್ಪುವವರೆಗೆ ಮುಂದುವರಿಸಿ.
*ತುರ್ತು ಪರಿಸ್ಥೀತಿಯನ್ನು ನಿರ್ವಹಿಸಲು ನಿಮಗೆ ಆಗದಿದ್ದರೆ ತಕ್ಷಣ ರೋಗಿಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ

Comments are closed.