ಪ್ರಮುಖ ವರದಿಗಳು

1 ರುಪಾಯಿಗಾಗಿ ನಡೆದ ಕೊಲೆಗೆ ಸಿಕ್ಕಿದ್ದು 7 ವರ್ಷ ಕಠಿಣ ಸೆರೆವಾಸ !

Pinterest LinkedIn Tumblr

jail

ಮಧುರೈ: 2009 ರಲ್ಲಿ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಆರೋಪಿಯ ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಶಿಕ್ಷೆಗೆ ಇಳಿಸಿದೆ.

ದಿಂಡಿಗಲ್ ನ ಕೆ ಸಿ ಪಟ್ಟಿಯಲ್ಲಿ 2009 ರ ಮಾರ್ಚ್ ನಲ್ಲಿ ಬಾಲು ಅಲಿಯಾಸ್ ಬಾಲಕೃಷ್ಣ ಮತ್ತು ಆತನ ಪುತ್ರ ಜೊತೆ ಸೇರಿ ನಡೆಸುತ್ತಿದ್ದ ರೆಸ್ಟೋರೆಂಟ್ ಗೆ ಕುಪ್ಪುಸ್ವಾಮಿ ಮತ್ತು ಆತನ ಸ್ನೇಹಿತ ಊಟಕ್ಕಾಗಿ ಬಂದಿದ್ದರು.

ಕುಪ್ಪಸ್ವಾಮಿ ಬಳಿ ಹಣವಿರಲಿಲ್ಲ, ಆತನ ಸ್ನೇಹಿತ ಮೂರು ಪರೋಟ ಖರೀದಿಸಿ 10 ರೂ ನೋಡಿದ್ದರು. ಮೂರು ಪರೋಟಕ್ಕೆ 9 ರು ಬಿಲ್ ಆಗಿತ್ತು. ರೆಸ್ಟೋರೆಂಟ್ ಮಾಲೀಕ ಉಳಿದ 1 ರು. ನೀಡಲು ನಿರಾಕರಿಸಿದ್ದನು.ಕುಪ್ಪುಸ್ವಾಮಿ ಮತ್ತು ಬಾಲಕೃಷ್ಣ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಕ್ಷಣಗಳ ನಂತರ ಕುಪ್ಪುಸ್ವಾಮಿ ಕುಡುಗೋಲಿನಿಂದ ಬಾಲಕೃಷ್ಣನ ಕುತ್ತಿಗೆ ಸೀಳಿ ಅಲ್ಲಿಂದ ಪರಿರಿಯಾಗಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆತಂದರು ಆತ ಬದುಕುಳಿದರಲಿಲ್ಲ. ಮರುದಿನ ಕುಪ್ಪು ಸ್ವಾಮಿಯನ್ನು ಬಂಧಿಸಿ ಸೆಷನ್ಸ್ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

ಈ ತೀರ್ಪನ್ನು ಪ್ರಶ್ನಿಸಿ ಕುಪ್ಪುಸ್ವಾಮಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ, ಬಾಲಕೃಷ್ಣ ಆರೋಪಿಗೆ ಉಳಿದ 1 ರುಪಾಯಿ ಹಣ ನೀಡಬೇಕಿತ್ತು. ಆದರೆ ಆತ ಹಣ ನೀಡಲಿಲ್ಲ, ಬಾಲಕೃಷ್ಣ ಪುತ್ರ ಸೇರಿದಂತೆ ಮೂವರು ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿದ್ದು, ಅವರ ಸಾಕ್ಷಿ ಪ್ರಕಾರ, ಆರೋಪಿ ಹತ್ಯೆ ಮಾಡಲು ಹಣ ನೀಡದಿದ್ದದ್ದೇ ಕಾರಣ, ಇದರಲ್ಲಿ ಯಾವುದೇ ಸೇಡು ಇರಲಿಲ್ಲ ಎಂದು ಮಧುರೈ ಪೀಠ ತಿಳಿಸಿದೆ. ಆಕಸ್ಮಿಕವಾಗಿ ನಡೆದ ಜಗಳ ಕೊಲೆಗೆ ಕಾರಣ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಆರೋಪಿ ಬಾಲಕೃಷ್ಣನ್ ಕುತ್ತಿಗೆ ಮೇಲೆ ಒಂದು ಸಲ ಮಾತ್ರ ಸೀಳಿದ್ದಾನೆ. ಇದು ಆತ ಸಾಯಲು ಕಾರಣವಾಯಿತು. ಹೀಗಾಗಿ ಅಧೀನ ನ್ಯಾಯಾಲ ನೀಡಿದ್ದ ಜೀವಾವಧಿ ಶಿಕ್ಷೆಯನ್ನು 7 ವರ್ಷಗಳ ಕಠಿಣ ಶಿಕ್ಷೆಗಿಳಿಸಿ ಮಧುರೈ ಕೋರ್ಟ್ ತೀರ್ಪು ನೀಡಿದೆ.

Comments are closed.