ಗಲ್ಫ್

ದುಬೈಯಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾವಿರಕ್ಕೂ ಹೆಚ್ಚು ಕಿ. ಮೀ. ಕಾಲ್ನಡಿಗೆಯಲ್ಲಿ ಅಲೆದಾಡಿದ ಭಾರತೀಯ ವ್ಯಕ್ತಿ

Pinterest LinkedIn Tumblr

jagannatan-selvaraj

ದುಬೈ : ದುಬೈನಲ್ಲಿ ವಾಸವಾಗಿರುವ ತಿರುಚರಾಪಳ್ಳಿ ಮೂಲದ ಜಗನ್ನಾಥನ್ ಸೆಲ್ವರಾಜ್ ಎಂಬುವರು ಎರಡು ವರ್ಷಗಳ ಅವಧಿಯಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾವಿರಕ್ಕೂ ಹೆಚ್ಚು ಕಿ. ಮೀ. ಕಾಲ್ನಡಿಗೆ ಮಾಡಿದ್ದಾರೆ.

ವಾಹನದಟ್ಟಣೆ, ಬಿಸಿಲು ಹಾಗೂ ಮರಳುಗಾಳಿ ಬೀಸುತ್ತಿದ್ದರೂ 22 ಕಿ.ಮೀ ದೂರದ ಸೊನಾಪುರ್ ಹಾಗೂ ಕರಾಮ ಮಧ್ಯೆ ನಡೆದುಕೊಂಡೇ ಸಂಚರಿ ಸುತ್ತಿದ್ದರು. ಬಸ್ ಟಿಕೆಟ್ ಕೊಳ್ಳುವಷ್ಟೂ ಹಣ ಇಲ್ಲದ ಕಾರಣ ಅವರು ಕಾರ್ಮಿಕ ಕೋರ್ಟ್‌ಗೆ ಹಾಜರಾಗಲು ನಡಿಗೆಯನ್ನೇ ಅವಲಂಬಿಸಿದ್ದರು.

ಬೆಳಗ್ಗೆ 4 ಗಂಟೆಗೆ ನಡೆಯಲು ಶುರು ಮಾಡುತ್ತಿದ್ದ ಅವರು ಸಂಜೆ ಕೋರ್ಟ್ ಕಲಾಪ ಮುಗಿಸಿಕೊಂಡು ಮನೆಗೆ ವಾಪಸಾಗಲು ಮತ್ತೆ ಎರಡು ಗಂಟೆ ನಡೆಯಬೇಕಿತ್ತು. ಹೋಗಿ ಬರುವ ಮಾರ್ಗದಲ್ಲಿ ನಾಲ್ಕು ಗಂಟೆಗಳು ಕಳೆಯು ತ್ತಿದ್ದವು. ಪ್ರತೀ ಎರಡು ವಾರಕ್ಕೊಮ್ಮೆ ಕಾಲ್ನಡಿಗೆ ಅನಿವಾರ್ಯವಾಗಿತ್ತು ಎಂದು ಜಗನ್ನಾಥನ್ ಹೇಳಿದ್ದಾರೆ.

ಸೋನಾಪುರ್‌ನ ಸಾರ್ವಜನಿಕ ಉದ್ಯಾನದಲ್ಲಿ ಹಲವು ತಿಂಗಳಿನಿಂದ ವಾಸವಾಗಿರುವ ಅವರು ಈ ಓಡಾಟದಿಂದ ಆನಾರೋಗ್ಯಕ್ಕೀಡಾಗಿದ್ದಾರೆ. ಭಾರತಕ್ಕೆ ವಾಪಸಾಗಲು ವಿಮಾನದ ಟಿಕೆಟ್‌ ಕೊಳ್ಳಲೂ ಪರದಾಡುತ್ತಿದ್ದಾರೆ ಎಂದು ಇವರಿಗೆ ನೆರವು ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

Comments are closed.