
Photo: Uday H.K.Dubai-Ashok Belman
ದುಬೈ: ಶಾರ್ಜಾ ಕರ್ನಾಟಕ ಸಂಘದ ಆಶ್ರಯದಲ್ಲಿ ನವೆಂಬರ್ 18 ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿರುವ ಹಾಗೂ ಯು.ಎ.ಇ. ಮಟ್ಟದ ಕನ್ನಡ ಚಲನಚಿತ್ರ ಗೀತಾಗಾಯನದ ಪ್ರಥಮ ಸುತ್ತಿನ ಸ್ಪರ್ಧೆಯು ಶುಕ್ರವಾರದಂದು ನಡೆಯಿತು.




ಕಾರ್ಯಕ್ರಮವನ್ನು ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹಾಗು ಖ್ಯಾತ ಗಾಯಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಶೆಟ್ಟಿ, ಡಯಾನ್ ಡಿಸೋಜ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸುಗಂಧರಾಜ್ ಬೇಕಲ್, ಪೋಷಕ ಮಾರ್ಕ್ ಡೆನ್ನಿಸ್ ಡಿಸೋಜ, ಸಾಂಸ್ಕೃತಿಕ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ ಉದ್ಘಾಟಿಸಿದರು.















ಕನ್ನಡಿಗವರ್ಲ್ಡ್.ಕಾಮ್ ಪ್ರಾಯೋಜಕತ್ವದಲ್ಲಿ
ನಡೆಯುತ್ತಿರುವ ಸ್ಪರ್ಧೆ
ಕನ್ನಡಿಗವರ್ಲ್ಡ್.ಕಾಮ್(kannadigaworld.com) ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರ ಗೀತಾಗಾಯನದ “ಮಯೂರ ರಾಜ”(16 ವಯಸ್ಸು ಮೆಲ್ಪಟ್ಟಿರುವ ಗಾಯಕರಿಗಾಗಿ) ಸ್ಪರ್ಧೆಯಲ್ಲಿ 25 ಮಂದಿ ಗಾಯಕರು ಸ್ಪರ್ಧಿಸಿದ್ದು, ಅದರಲ್ಲಿ ಮೂವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.
ಅಂತಿಮ ಸುತ್ತಿಗೆ ಆಯ್ಕೆಯಾದವರು:
1.ಕೃಷ್ಣ ಪ್ರಸಾದ್
2.ರಾಘವೇಂದ್ರ ಪ್ರಭಾಕರ್
3.ಶಾಹಿದ್ ಶಹಬಾಜ್






“ಮಯೂರ ರಾಣಿ” ಪ್ರಶಸ್ತಿಯ ಸ್ಪರ್ಧೆಯಲ್ಲಿ (16 ವಯಸ್ಸು ಮೆಲ್ಪಟ್ಟಿರುವ ಗಾಯಕಿಯರಿಗಾಗಿ) 20 ಮಂದಿ ಗಾಯಕಿಯರು ಸ್ಪರ್ಧಿಸಿದ್ದು, ಅವರಲ್ಲಿ ಮೂವರು ಅಂತಿಮ ಸುತ್ತಿಗೆ ಆಯ್ಕೆಯಾದರು.
ಅಂತಿಮ ಸುತ್ತಿಗೆ ಆಯ್ಕೆಯಾದವರು:
1.ವೈಷ್ಣವಿ ಶೆಟ್ಟಿ
2.ಅಕ್ಷತಾ ರಾವ್
3.ಮಧುರ



“ಮಯೂರ ಕುಮಾರ” ಮತ್ತು “ಮಯೂರ ಕುಮಾರಿ” ಪ್ರಶಸ್ತಿ(8 ವಯಸ್ಸಿನಿಂದ 15 ವಯಸ್ಸಿನೊಳಗಿನ ಮಕ್ಕಳಿಗಾಗಿ) ಸ್ಪರ್ಧೆಯಲ್ಲಿ 15 ಮಂದಿ ಸ್ಪರ್ಧಿಸಿದ್ದು, ಅವರಲ್ಲಿ ಮೂವರನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.
ಅಂತಿಮ ಸುತ್ತಿಗೆ ಆಯ್ಕೆಯಾದವರು:
1.ಸಿಂಧು ಕಾಮತ್
2.ಸನ್ನಿಧಿ ಶೆಟ್ಟಿ
3.ಅಮೋಘ್ ವರ್ಷ















ಸ್ಪರ್ಧೆಯ ನಿರ್ಣಯಕರಾಗಿ ವಿಧುಷಿ ಸುಮಾ ನಾರಾಯಣ್, ಖ್ಯಾತ ಗಾಯಕ ಹರೀಶ್ ಶೇರಿಗಾರ್, ಅನಿತಾ ಡಿಸೋಜ ಹಾಗು ಅರುಣ್ ಕಾರ್ಲೊ ಭಾಗವಹಿಸಿದ್ದರು. ರೋಹಿಣಿ ಅನಂತ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಸಂಘದ ಸದಸ್ಯರೆಲ್ಲ ಹಾಜರಿದ್ದರು.
ಶಾರ್ಜ ಇಂಡಿಯನ್ ಅಸೋಸಿಯೇಶನ್ ಸಭಾಂಗಣದಲ್ಲಿ ನವೆಂಬರ್ 18 ರಂದು ಮಧ್ಯಾಹ್ನ 2.00 ಗಂಟೆಗೆ ಗೀತಾಗಾಯನ ಅಂತಿಮ ಸ್ಪರ್ಧೆ ನಡೆಯಲಿದೆ. ಗೀತಾಗಾಯನ ಅಂತಿಮ ಸ್ಪರ್ಧೆಗೆ ಖ್ಯಾತ ಸಂಗೀತ ನಿರ್ದೇಶಕ ಮಂಗಳೂರಿನ ರಾಜಗೋಪಾಲ್ ತಂಡದವರು ಸಂಗೀತ ನೀಡಲಿದ್ದಾರೆ.
























































Comments are closed.