ದುಬೈ : ಕುಂಬ್ರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಸಮನ್ವಯ ವಿಧ್ಯಾ ಕೇಂದ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಗೆ ಬೆನ್ನೆಲುಬಾಗಿ ಸಹಕರಿಸುತ್ತಾ ಬಂದಿರುವ ಕಳೆದ ಹದಿನೈದು ವರ್ಷಗಳಿಂದ ಅರಬ್ ರಾಷ್ಟ್ರ ಯು ಎ ಇ ಯಲ್ಲಿ ಯಶಸ್ವೀ ಹೆಜ್ಜೆ ಗಳೊಂದಿಗೆ ಕಾರ್ಯಚರಿಸುತ್ತಾ ಬಂದಿರುವ ಕೆ ಐ ಸಿ ಕೇಂದ್ರ ಸಮಿತಿಯು ತನ್ನ ಕಾರ್ಯಚಟುವಟಿಕೆಗಳ ಸವಿ ನೆನಪಿಗಾಗಿ ಡಿಸೆಂಬರ್ 11 ರಂದು ದುಬೈ ಪ್ರತಿಷ್ಟಿತ ಇರಾನಿಯನ್ ಸಭಾಂಗಣದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಆ ಪ್ರಯುಕ್ತ ಕಾರ್ಯಕ್ರಮದ ಪ್ರಚಾರಾರ್ಥ ಯೂತ್ ವಿಂಗ್ ಸಮಿತಿ ಅಧೀನದಲ್ಲಿ ಇತ್ತೀಚಿಗೆ ಝಬೀಲ್ ಪಾರ್ಕ್ ನಲ್ಲಿ ಕೆ ಐ ಸಿ ಹಿತೈಷಿಗಳಿಗೆ ಹಾಗೂ ಯುವ ಸಮೂಹ ವನ್ನು ಒಟ್ಟು ಗೂಡಿಸುವ ಸಲುವಾಗಿ ಕೆ ಐ ಸಿ ಯೂತ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜುಮಾ ನಮಾಝಿನ ಬಳಿಕ ಹಲವಾರು ಸಂಘ ಸಂಸ್ಥೆಗಳ ನೇತಾರರು , ಹಿತತಿಷಿಗಳು ಪ್ರೋತ್ಸಾಹಕರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಬೈತಡ್ಕ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜ್ ಮೊಹಿಯುದ್ದೀನ್ ಕುಟ್ಟಿ ದಿಬ್ಬರವರು ಪ್ರಾರ್ಥಿಸಿ, ಯುವ ಸಂಘಟನೆಯ ಸೇವಾ ಮನೋಭಾವವನ್ನು ಪ್ರಶಂಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂತರ ಸಭಾಧ್ಯಕ್ಷರು ಸ್ಪರ್ಧಾ ಕಾರ್ಯಕ್ರಮದ ಸಂಪೂರ್ಣ ವಿವರಣೆಯನ್ನು ನೀಡಿ ಪ್ರಥವಾಗಿ ಹಿರಿಯರಿಗೆ – ಕಿರಿಯರಿಗೆ ನೂರು ಮೀಟರ್ ಓಟ ಕ್ಕೆ ಚಾಲನೆ ನೀಡಲಾಯಿತು. ತನ್ನೆಲ್ಲ ಅಂತಸ್ತು ವಯಸ್ಸಿನ ಅಂತರವನ್ನು ಬದಿಗಿಟ್ಟು ಬಹುತೇಕ ನೇತಾರರು ಹಿತೈಷಿಗಳು ಸ್ಪರ್ಧೆ ಯಲ್ಲಿ ಭಾಗವಹಿಸಿ ತಮ್ಮ ಆಸಕ್ತಿಯನ್ನು ತೋರ್ಪಡಿಸಿದರು. ನಂತರ ಗೋಣಿ ಚೀಲ ಓಟ ಮೂರುಕಾಲಿನ ಓಟ ವನ್ನು ನಡೆಸಲಾಯಿತು. ಅವಿಸ್ಮರಣೀಯ ವಾಗಿ ಮೂಡಿಬಂದ ಈ ಸ್ಪರ್ದೆಯು ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದ ಸಭಿಕರಿಗೆ ಮನರಂಜನೆಯೊಂದಿಗೆ ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿತು. ಅಲ್ಲದೆ ಸಂಗೀತ ದೊಂದಿಗೆ ಬಾಲ್ ರವಾನೆ, ನಡೆದಾಡಿಕೊಂಡು ಗುರಿ ತಲುಪುವುದು, ಇವೆಲ್ಲವೂ ಒಂದನ್ನೊಂದು ನಾಚಿಸುವಂತಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ನಂತರ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಭಲಿಷ್ಠ ತಂಡಗಳಿಂದ ರೋಮಾಂಚನಕಾರಿ ಹಗ್ಗ ಜಗ್ಗಾಟವು ಎಲ್ಲರನ್ನು ಹುರಿದುಂಬಿಸಿತು. ಯಾವುದೇ ಕಾರಣಕ್ಕೂ ತಮ್ಮ ಶಕ್ತಿಯನ್ನು ಬಿಟ್ಟು ಕೊಡದ ಈ ಸ್ಪರ್ದೆಯಲ್ಲಿ ಹಿರಿಯರು ಕಿರಿಯರು ಸ್ಪರ್ಧಾಳುಗಳಿಗೆ ಚಪ್ಪಾಲೆಯೊಂದಿಗೆ ಪ್ರೋತ್ಸಾಹವನ್ನು ನೀಡಲಾಯಿತು. ನಂತರ ಮಗ್ರಿಬ್ ನಮಾಝಿ ಬಳಿಕ ಸಮಾರೋಪ ಸಭಾ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಇಸ್ಲಾಮಿಕ್ ರಸಪ್ರಶ್ನೆಯನ್ನು ಕೇಳಿ ಉತ್ತರಿಸಿದ ಪ್ರತಿಯೋರ್ವರಿಗೂ ಬಹುಮಾನ ವನ್ನು ನೀಡಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ವಿವಿದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಅತಿಥಿಗಳು ಪ್ರಥಮ ಹಾಗೂ ದ್ವಿತೀಯ ಪದಕವನ್ನು ನೀಡಿ ಗೌರವಿಸಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ರವರು ಪ್ರಾರ್ಥಿಸಿ ಯೂತ್ ವಿಂಗ್ ಪಧಾಧಿಕಾರಿಗಳ ಕೆ ಐ ಸಿ ಯೊಂದಿಗಿನ ಅವಿನಾಭಾವ ಸಂಭಂದವನ್ನು ಪ್ರಶಂಸಿದರು. ನಂತರ ಫೈಝಲ್ ರಹ್ಮಾನಿ ಉಸ್ತಾದ್ ಬಯಾರ್ ರವರು ಮಾತನಾಡಿ , ಹದೀಸ್ ವ್ಯಾಖನಗಳನ್ನು ಉಲ್ಲೇಖಿಸುತ್ತಾ ಯುವ ಸಮೂಹಗಳು ಇಸ್ಲಾಮಿನ್ ಅಧಾರಸ್ಥಂಭಗಳಾಗಿದ್ದು , ಇಂದು ನಾನಾ ರೀತಿಯ ಅನಾಚಾರ ಗಳ ಹಿಂದೆ ಮಾರು ಹೋಗಿದ್ದು ಇಸ್ಲಾಂ ನ್ನು ದಿಕ್ಕರಿಸುತ್ತಾ ಬಂದಿದೆ, ಗಲ್ಫ್ ಜೀವನವೆಂಬುದು ಓರ್ವ ವ್ಯಕ್ತಿಯ ತೆರೆದ ಪುಸ್ತಕದಂತಿದ್ದು ಅದರಲ್ಲಿ ಆತನು ಆತನ ಇಷ್ಟದಂತೆ ನಡೆದು ಕೊಳ್ಳಬಹುದು. ಇಂದು ಬಹುತೇಕ ಯುವ ಸಮೂಹವು ಅನಾಚಾರ ಗಳ ಹಿಂದೆ ಮಾರುಹೊಗಿದ್ದು , ನಮ್ಮ ಕೆ ಐ ಸಿ ಯ ಯುವಕರು ಅಂತಹ ಅನಾಚಾರಗಳಿಂದ ಮೈಲು ಗಳೇ ದೂರವಿದ್ದು ದೀನೀ ಸಂಘ ಸಂಸ್ಥೆಗಳನ್ನು ಪೋಷಿಸುತ್ತಾ ಬಂದಿರುವುದು ಸಂತೋಷದಾಯಕ ವಿಷಯವಾಗಿದ್ದು , ನಮ್ಮ ಮುಂದಿನ ಯುವ ಪೀಳಿಗೆಯನ್ನು ನೆನಪಿಸಿಕೊಂಡು ಕೆ ಐ ಸಿ ಎಂಬ ಈ ವಿಧ್ಯಾ ಸಂಸ್ಥೆಯನ್ನು ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು , ಕೆ ಐ ಸಿ ದುಬೈ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ , ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಎಸ್ ಎಮ್ , ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ನ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಪರಂಗಿಪೇಟೆ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಗೌರವಾಧ್ಯಕ್ಷರಾದ ಅಬ್ದುಲ್ ರಫೀಕ್ ಆತೂರ್ , ಹಮೀದ್ ಮಣಿಲ ಪ್ರಧಾನ ಕಾರ್ಯದರ್ಶಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್, ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕೆ ಐ ಸಿ ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗೂನಡ್ಕ , ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ ಮೊದಲಾದವರು ಸಂಧರ್ಬ್ಹೊಚಿತವಾಗಿ ಮಾತನಾಡಿ ಇಂತಹ ದೀನೀ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಭಾಂಧವ್ಯವನ್ನು ಇಟ್ಟು ಕೊಂಡು , ಡಿಸೆಂಬರ್ 11 ರಂದು ಕೆ ಐ ಸಿ ನಡೆಸಲು ಉದ್ದೇಶಿಸಿರುವ ಬೃಹತ್ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ಕೇಳಿಕೊಂಡರು. ನಂತರ ಸಭಾದ್ಯಕ್ಷತೆ ವಹಿಸಿಕೊಂಡ ಯೂತ್ ವಿಂಗ್ ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ ರವರು ಮಾತನಾಡಿ ಇಂದು ಸಮುದಾಯದಲ್ಲಿ , ಸಮಾಜದಲ್ಲಿ ಯುವ ಸಮೂಹವು ದೀನೀ ಚೌಕಟ್ಟನ್ನು ದಿಕ್ಕರಿಸಿ ನಡೆಯುವ ಕಾಲವಾಗಿದೆ. ಆದರೆ ಇಂದು ನಮ್ಮ ಒಂದು ಆಮಂತ್ರಣಕ್ಕೆ ಪ್ರೀತಿ ಇಟ್ಟು ಆಗಮಿಸಿದ ತಮಗೆ ನಾವೆಲ್ಲರೂ ಅಭಾರಿಯಾಗಿದ್ದು , ಹಲವಾರು ಸಂಘಟನೆಗಳು ಇಂದು ಕೇವಲ ಅಂತಸ್ತಿಗೊಸ್ಕರ ಮಾಧ್ಯಮಗಳಲ್ಲಿ ಪ್ರಚಾರಕ್ಕೋಸ್ಕರ ತಮ್ಮ ನೆಲೆಯನ್ನು ಕಂಡು ಕೊಂಡಿದ್ದು , ಅವೆಲ್ಲದಕ್ಕು ತದ್ವಿರುದ್ದ ವಾಗಿ ಕಾರ್ಯಚರಿಸುತ್ತಾ ಬಂದಿರುವ ನಮ್ಮ ಕೆ ಐ ಸಿ ಅಲ್ ಯೂತ್ ವಿಂಗ್ ಸಮಿತಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಆದ್ದರಿಂದ ನಮ್ಮ ಮುಂದೆ ಹಲವಾರು ದ್ಯೆಯೋದ್ದೆಶಗಲಿದ್ದು ಅವುಗಳ ಸಫಳತೆಗಾಗಿ ತಾವೆಲ್ಲರೂ ಒಟ್ಟಾಗಿ ಸಹಕರಿಸುವಂತೆ ಕೇಳಿಕೊಂಡರು.
ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ರವರು ಸ್ವಾಗತಿಸಿ ರಫೀಕ್ ಮುಕ್ವೆರವರು ವಂದಿಸಿದರು. ಕಾರ್ಯಕ್ರಮದಲ್ಲಿ ಅಸೀಫ್ ಪುತ್ತೂರು , ರಝಾಕ್ ನೀರ್ಕಜೆ ,ನವಾಝ್ ಬಿ ಸಿ ರೋಡ್ , ಸಲೀಂ ಕೂರ, ಜಾಬೀರ್ ಬೆಟ್ಟಂಪಾಡಿ , ಅಝೀಝ್ ಸೊರಕೆ, ಮೊದಲಾದವರು ವಿವಿದ ರೀತಿಯಲ್ಲಿ ಸಹಕರಿಸಿದರು .








