ಗಲ್ಫ್

ಮಕ್ಕಾ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ ಐ.ಎಸ್.ಎಫ್. ಪಶ್ಚಿಮ ವಲಯ ಸಮಿತಿ

Pinterest LinkedIn Tumblr

Untitled-1

ಜಿದ್ದಾ: ಶುಕ್ರವಾರ ಸಂಜೆ ಸರಿಸುಮಾರು 7 ಘಂಟೆ ಹೊತ್ತಿಗೆ ಸುರಿದ ಗಾಳಿ ಗುಡುಗುನಿಂದ ಕೂಡಿದ ತೀವ್ರ ರೀತಿಯ ಮಳೆಗೆ ಮುಸ್ಲಿಮರ ಪವಿತ್ರ ಶ್ರದ್ದಾ ಕೇಂದ್ರವಾದ ಮಕ್ಕಾ ಮಸ್ಜಿದ್ ನ ಒಳಗಡೆ ಕಾಮಗಾರಿಯಲ್ಲಿ ನಿರತವಾಗಿದ್ದ ಕ್ರೇನ್ ಒಂದು ನೆರಕ್ಕುರುಳಿ ಭಾರತೀಯರು ಸೇರಿದಂತೆ 85 ಕ್ಕೂ ಮಿಕ್ಕಿದ್ದ ಜನರು ಅಸುನೀಗುವುದರೊಂದಿಗೆ ಸರಿಸುಮಾರು 190 ಮಂದಿ ತೀವ್ರ ರೀತಿಯ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ. ಮ್ರತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆಯೆಂದು ಆಸ್ಪತ್ರೆ ಮೂಲಗಳು ವರದಿ ಮಾಡಿದೆ.

ಪವಿತ್ರ ಹಜ್ಜ್ ಕರ್ಮ ನಿರ್ವಹಿಸುವ ಸಲುವಾಗಿ ಮಕ್ಕಾ ತಲುಪಿದ ಹೆಚ್ಹಿನ ಯಾತ್ರಿಕರು ತಮ್ಮ ಆರಾಧನೆಯಲ್ಲಿ ತೊಡಗಿದ್ದ ವೇಳೆಗೆ ಈ ಕ್ರೇನ್ ದುರಂತಕ್ಕೊಳಗಾಗಿ ಈ ದುರಂತಕ್ಕೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ವಿಶ್ವದಾಧ್ಯಾಂತ ತಲ್ಲಣಗೊಳಿಸಿದ ಈ ಮಹಾ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ವಲಯ ಸಮಿತಿ ಕರ್ನಾಟಕ ಘಟಕವು ಕಂಬನಿ ಮಿಡಿದಿದ್ದು ಮ್ರತರ ಕುಟುಂಬಕ್ಕೆ ಅಲ್ಲಾಹನು ಈ ದುಃಖವನ್ನು ತಡೆಯುವ ಶಕ್ತಿಯನ್ನು ನೀಡುವುದರ ಜೊತೆಗೆ, ಮ್ರತರ ಮಗ್ಫಿರತಿಗಾಗಿ ಪ್ರಾರ್ಥಿಸುವಂತೆ ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ವಲಯ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಜನಾಬ್ ಇಸ್ಮಾಯಿಲ್ ಕಲ್ಲಡ್ಕ ರವರು ತನ್ನ ಪತ್ರಿಕಾ ಹೇಳಿಕೆಯಲ್ಲಿ ಸಾರ್ವಜನಿಕರನ್ನು ವಿನಂತಿಸಿದೆ.

Write A Comment