ಗಲ್ಫ್

ಜೂ.26ರಂದು ದುಬೈಯಲ್ಲಿ ‘ಬಿಸಿಎಫ್‌ನ ಇಫ್ತಾರ್‌ಕೂಟ-2015’

Pinterest LinkedIn Tumblr

Bearys Iftar party Dubai_July 11_2014_005

ದುಬೈ, ಜೂ.21: ಯುಎಇಯ ಬ್ಯಾರೀಸ್ ಕಲ್ಚರಲ್ ಫೋರಂ ಆಶ್ರಯದಲ್ಲಿ ಜೂ.26ರಂದು ಶುಕ್ರವಾರ ಸಂಜೆ ದುಬೈ ಕರಾಮದ ಇರಾನಿಯನ್ ಕ್ಲಬ್ ಹಾಲ್‌ನಲ್ಲಿ ‘ಬಿಸಿಎಫ್‌ನ ಇಫ್ತಾರ್‌ಕೂಟ-2015’ನ್ನು ಆಯೋಜಿಸಲಾಗಿದೆ.

IMG-20150621-WA0081

IMG-20150621-WA0082

ಸಂಜೆ 4 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು, ಇಸ್ಲಾಮಿಕ್ ವಿಧ್ವಾಂಸರಿಂದ ಉಪನ್ಯಾಸ, ತಾಯಿನಾಡಿನಲ್ಲಿನ ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ವಿದ್ಯಾರ್ಥಿ ವೇತನದ ಘೋಷಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಇಫ್ತಾರ್‌ಕೂಟದಲ್ಲಿ ಯುಎಇಯಲ್ಲಿರುವ ವಿವಿಧ ಗಣ್ಯಾಥಿಗಣ್ಯರು ಭಾಗವಹಿಸಲಿದ್ದಾರೆ ಎಂದರು ಇಫ್ತಾರ್‌ಕೂಟದ ಸಂಚಾಲಕ ಅಬ್ದುಲ್ ಲತೀಫ್ ಮೂಲ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Write A Comment