ಗಲ್ಫ್

ಬಹರೈನ್: ಭಾರತೀಯನ ಆತ್ಮಹತ್ಯೆ

Pinterest LinkedIn Tumblr

suicaid

ದುಬೈ: ಅಪಾರ ಸಾಲದ ಹೊರೆಯಿಂದ ಬಳಲಿದ್ದ ಭಾರತೀಯ ಮೆಕ್ಯಾನಿಕ್ ಓರ್ವರು ಬಹರೈನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ.

ಪ್ರಮೂ ಸುಧೀರ್ (41) ಎಂಬವರ ಮೃತದೇಹವು ಅವರು ನೆಲೆಸಿದ್ದ ಮುಹಾರಕ್ ಪಟ್ಟಣದ ಕಾರ್ಮಿಕ ಶಿಬಿರದಲ್ಲಿ ಸೀಲಿಂಗ್ ಫ್ಯಾನಿಗೆ ನೇತು ಹಾಕಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದು, ಸಮೀಪದಲ್ಲಿ ಅವರು ಬರೆದಿದ್ದ ಡೆತ್‌ನೋಟ್ ಕೂಡಾ ದೊರೆತಿರುವುದಾಗಿ ವರದಿ ತಿಳಿಸಿದೆ.

ತನ್ನ ಮೇಲೆ ಭಾರೀ ಸಾಲದ ಹೊರೆಯಿದ್ದು, ಅದನ್ನು ತೀರಿಸಲು ತನ್ನಿಂದ ಸಾಧ್ಯವಾಗದೆಂದು ಡೆತ್‌ನೋಟ್‌ನಲ್ಲಿ ಅವರು ಬರೆದಿದ್ದರು ಎಂದು ಮೃತರ ಸಂಬಂ ಪ್ರಸನ್ನ ಕುಮಾರ್ ಹೇಳಿದ್ದಾರೆ. ಸುಧೀರ್ ಕುಮಾರ್ ಕಳೆದ ಏಳುವರ್ಷಗಳಿಂದ ಬಹರೈನ್‌ನಲ್ಲಿ ಇದ್ದರಾದರೂ ಈ ಅವಯಲ್ಲಿ ಅವರು ಒಂದು ಬಾರಿಯೂ ತಾಯ್ನಡಿಗೆ ಮರಳಿ ಕುಟುಂಬವನ್ನು ಭೇಟಿಯಾಗಿರಲಿಲ್ಲವೆಂದು ಅವರು ತಿಳಿಸಿದ್ದಾರೆ.

‘‘ತಾನು ಅಪಾರ ಸಾಲದಲ್ಲಿರುವುದಾಗಿ ಹಾಗೂ ದುಡಿದ ಹಣವು ತನ್ನ ಖರ್ಚಿಗೇ ಸಾಕಾಗುತ್ತಿರಲಿಲ್ಲ ಎಂದು ಅವರು ಯಾವಾಗಲೂ ಹೇಳಿಕೊಳ್ಳುತ್ತಿದ್ದರು. ಹಲವು ಜನರಿಗೆ ಅವರು ಸಾವಿರಾರು ದಿನಾರ್‌ಗಳಷ್ಟು ಸಾಲ ಬಾಕಿಯಿದೆ ಎಂಬುದು ನನಗೀಗ ತಿಳಿದು ಬಂದಿದೆ’’ ಎಂದು ಪ್ರಸನ್ನಕುಮಾರ್ ವಿವರಿಸುತ್ತಾರೆ. ಮೃತ ಸುಧೀರ್ ಕೇರಳದವರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Write A Comment