ರಾಷ್ಟ್ರೀಯ

ರೋಗಿಯ ಹೊಟ್ಟೆಯಲ್ಲಿ ವೈದ್ಯರ ಸಲಕರಣೆ; 8 ಲಕ್ಷ ರೂ. ಪರಿಹಾರ ನೀಡಲು ವೈದ್ಯೆಗೆ ಆದೇಶ

Pinterest LinkedIn Tumblr

doctor

ಅಹ್ಮದಾಬಾದ್: ಶಸಚಿಕಿತ್ಸೆಯ ಬಳಿಕ ವೈದ್ಯಕೀಯ ಸಾಧನವೊಂದನ್ನು ರೋಗಿಯ ದೇಹದೊಳಗೇ ಮರೆತುಬಿಟ್ಟ ಪ್ರಸೂತಿ ತಜ್ಞೆ ಮತ್ತು ವಿಮಾ ಕಂಪೆನಿಯೊಂದು 8 ಲಕ್ಷ ರೂ. ಪರಿಹಾರ ನೀಡಬೇಕೆಂದು ಬಳಕೆದಾರರ ವೇದಿಕೆಯೊಂದು ಆದೇಶಿಸಿದೆ.

ಜೊತೆಗೆ 12 ವರ್ಷಗಳ ಅವಗೆ 9 ಶೇ. ದರದಲ್ಲಿ ಬಡ್ಡಿಯನ್ನೂ ನೀಡಬೇಕಾಗಿದೆ. ಸೀರೋಗ ತಜ್ಞೆ ಡಾ. ವಂದನಾ ಅಮೀನ್ ಗುಜರಾತ್‌ನ ಪಟನ್‌ನಲ್ಲಿ ನರ್ಸಿಂಗ್ ಹೋಮ್ ಒಂದನ್ನು ನಡೆಸುತ್ತಿದ್ದಾರೆ.

2002ರಲ್ಲಿ ಮಿತಾಬೇನ್ ಪಟೇಲ್ ಎಂಬ ಮಹಿಳೆಯ ಗರ್ಭಕೋಶದಿಂದ ನಿರಂತರ ರಕ್ತಸ್ರಾವವಾಗುತ್ತಿತ್ತು. ಲೇಸರ್ ಚಿಕಿತ್ಸೆಯಿಂದಲೂ ರಕ್ತಸ್ರಾವ ನಿಲ್ಲದಾಗ ಮಹಿಳೆ ವಂದನಾ ಬಳಿಗೆ ಬಂದರು. 2002ರ ಅಕ್ಟೋಬರ್‌ನಲ್ಲಿ ಶಸಚಿಕಿತ್ಸೆ ನಡೆಸಿದ ವೈದ್ಯೆ ಮಹಿಳೆಯ ಗರ್ಭಕೋಶವನ್ನು ತೆಗೆದುಹಾಕಿದರು. ಶಸಚಿಕಿತ್ಸೆಯ ಬಳಿಕ ಮಹಿಳೆ ಮತ್ತಷ್ಟು ಸಮಸ್ಯೆಗಳಿಗೆ ಒಳಗಾದರು. ತೆಳುವಾದ ಬಾಹ್ಯ ವಸ್ತುವೊಂದು ಕರುಳಿಗೆ ಬೆಸೆದುಕೊಂಡಿದ್ದು ಸ್ಕಾನಿಂಗ್‌ನಲ್ಲಿ ಪತ್ತೆಯಾಯಿತು. ಇದರಿಂದ ಮಹಿಳೆ ತುಂಬಾ ವೇದನೆ ಪಟ್ಟರು. ಅದನ್ನು ತೆಗೆಯಲು ಅವರು ಇನ್ನೊಂದು ಶಸಚಿಕಿತ್ಸೆಗೆ ಒಳಪಡಬೇಕಾಯಿತು. 2003ರಲ್ಲಿ ಸೂರತ್‌ನಲ್ಲಿನ ಬಳಕೆದಾರರ ನ್ಯಾಯಾಲಯಕ್ಕೆ ಮಿತಾಬೇನ್ ದೂರು ನೀಡಿದರು ಹಾಗೂ ವೈದ್ಯರ ನಿರ್ಲಕ್ಷಕ್ಕಾಗಿ 10 ಲಕ್ಷ ಪರಿಹಾರ ಕೋರಿದರು. ವೈದ್ಯಕೀಯ ನಿರ್ಲಕ್ಷದಿಂದ ಮಹಿಳೆಯ ಒಳ ಅಂಗಗಳು ಮತ್ತು ಕರುಳಿಗೆ ಹಾನಿಯಾಗಿದೆ ಎಂಬುದನ್ನು ಮನಗಂಡ ನ್ಯಾಯಾಲಯ 8 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತು. ಈ ತೀರ್ಪನ್ನು ವೈದ್ಯರು ಮತ್ತು ವಿಮಾ ಕಂಪೆನಿ ಗುಜರಾತ್ ರಾಜ್ಯ ಬಳಕೆದಾರರ ವಿವಾದಗಳ ಇತ್ಯರ್ಥ ಆಯೋಗದಲ್ಲಿ ಪ್ರಶ್ನಿಸಿದರು. ಹಿಂದಿನ ಆದೇಶವನ್ನು ಆಯೋಗ ಎತ್ತಿ ಹಿಡಿಯಿತು.

ಬಡ್ಡಿಯೊಂದಿಗೆ 8 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ ಆಯೋಗ, ರೋಗಿಯನ್ನು ಪುನಃ ನ್ಯಾಯಾಲಯಕ್ಕೆ ಎಳೆದುದಕ್ಕಾಗಿ ಆಕೆಗೆ 10,000 ರೂ. ಹೆಚ್ಚುವರಿ ಪರಿಹಾರ ನೀಡುವಂತೆ ವೈದ್ಯೆ ಮತ್ತು ವಿಮಾ ಕಂಪೆನಿಗೆ ಆದೇಶಿಸಿತು.

Write A Comment