ಕರ್ನಾಟಕ

ಮೈಸೂರಿನಲ್ಲಿ ಚಿತ್ರೀಕರಣ ವೇಳೆ ಆಯಾ ತಪ್ಪಿ ಕೆಳಗೆ ಬಿದ್ದ ನಟ ಬುಲೆಟ್ ಪ್ರಕಾಶ್

Pinterest LinkedIn Tumblr

pra

ಮೈಸೂರು: ಪ್ರಜ್ವಲ್ ದೇವರಾಜ್ ನಾಯಕ ನಟರಾಗಿರುವ ‘ಭುಜಂಗ’ ಚಿತ್ರದ ಚಿತ್ರೀಕರಣದ ವೇಳೆ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಬಿದ್ದು ಗಾಯಗೊಂಡಿದ್ದಾರೆ.

ಮೈಸೂರು ಜಿಲ್ಲೆಯ ವರುಣಾದಲ್ಲಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬೈಕಿನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಬುಲೆಟ್ ಪ್ರಕಾಶ್ ಅವರಿಗೆ ಕಟ್ಟಿದ್ದ ರೋಪ್‍ ತುಂಡಾಗಿದೆ ಈ ವೇಳೆ ಅವರು ಆಯಾ ತಪ್ಪಿ ಕೇಳಗೆ ಬಿದ್ದ ಪರಿಣಾಮ ಪ್ರಕಾಶ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬೈಕ್ ಗೆ ಕಟ್ಟಿದ್ದ ರೋಪ್ ತುಂಡಾಗುತ್ತಿದ್ದಂತೆ ಬುಲೆಟ್ ಪ್ರಕಾಶ್ ಕೆಳಗೆ ಬೀಳುತ್ತಿದ್ದುದನ್ನು ಗಮನಿಸಿದ ಚಿತ್ರ ತಂಡದ ಸದಸ್ಯರು, ಕೂಡಲೇ ಅವರ ರಕ್ಷಣೆಗೆ ಧಾವಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

Write A Comment