ಗಲ್ಫ್

ಜೂ.12ರಂದು ದುಬೈಯಲ್ಲಿ ಪ್ರದರ್ಶನಗೊಳ್ಳಲಿರುವ ‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಯಕ್ಷಗಾನ ಪ್ರದರ್ಶನದ ಟಿಕೆಟ್ ಬಿಡುಗಡೆ

Pinterest LinkedIn Tumblr

Dubai Yaksha mitraru- May 24_2015-002

ದುಬೈ, ಮೇ 24: ಯಕ್ಷಮಿತ್ರರು ದುಬೈ ಇದರ 12ನೆ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೂ.12ರಂದು ಸಂಜೆ 5 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಿರುವ ‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

Dubai Yaksha mitraru- May 24_2015-001

Dubai Yaksha mitraru- May 24_2015-003

Dubai Yaksha mitraru- May 24_2015-004

Dubai Yaksha mitraru- May 24_2015-005

Dubai Yaksha mitraru- May 24_2015-006

Dubai Yaksha mitraru- May 24_2015-007

Dubai Yaksha mitraru- May 24_2015-008

Dubai Yaksha mitraru- May 24_2015-009

Dubai Yaksha mitraru- May 24_2015-010

Dubai Yaksha mitraru- May 24_2015-011

Dubai Yaksha mitraru- May 24_2015-012

ಯಕ್ಷಮಿತ್ರರು ದುಬೈ ಇದರ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜೆ ಟಿಕೆಟ್ ಬಿಡುಗಡೆಗೊಳಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಚೆಂಡೆಯಲ್ಲಿ ಚೈತನ್ಯ ಪದ್ಯಾಣ, ವಿಶೇಷ ವೇಷ ವೈವಿದ್ಯಗಾರರಾಗಿ ಅಕ್ಷಯ್ ಕುಮಾರ್ ಹಾಗೂ ಲಕ್ಷ್ಮಣ ಕುಮಾರ್ ಮರಕಡ, ವೇಷ ಭೂಷಣ ಮತ್ತು ವರ್ಣಾಲಂಕಾರರಾಗಿ ಗಂಗಾಧರ ಡಿ.ಶೆಟ್ಟಿಗಾರ್ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚಿಂದಾನಂದ ಪೂಜಾರಿ, ವೆಂಕಟೇಶ್ ಶಾಸ್ತ್ರಿ, ಶೇಖರ್ ಶೆಟ್ಟಿಗಾರ್, ರಾಜೇಶ್ ಶೆಟ್ಟಿ, ಮನೋಹರ್ ಹೆಗ್ಡೆ, ರಾಜೇಶ್ ಕುತ್ತಾರು, ಲಕ್ಷ್ಮಿನಾರಾಯಣ ಶರ್ಮಾ ಹಾಗೂ ಹಲವಾರು ಮಂದಿ ಯಕ್ಷಗಾನ ಪ್ರೇಮಿಗಳು ಉಪಸ್ಥಿತರಿದ್ದರು.

Write A Comment