ಗಲ್ಫ್

ಸಾಬ್ ವಾರಿಯರ್ಸ್‌ ತೆಕ್ಕೆಗೆ ದಮಾಮ್ ಸೋಶಿಯಲ್ ಫೋರಮ್ ಕಪ್

Pinterest LinkedIn Tumblr

Social Forom Damam _Apr 23_2015-002

ದಮಾಮ್: ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಂ ಹಾಗೂ ಖೊಬಾರ್ ಘಟಕಗಳ ಜಂಟಿ ಆಶ್ರಯದಲ್ಲಿ ಸಾಲೆಹ್ ಅಯಾದ್ ಬಲ್‌ಹಾರಿತ್‌ ಪ್ರಾಯೋಜಕತ್ವದೊಂದಿಗೆ ನಡೆದ ನಾಕೌಟ್ ಓವರ್ ಆರ್ಮ್ ಕ್ರಿಕೆಟ್ ಟೂರ್ನಿಯಲ್ಲಿ ಸಾಬ್ ವಾರಿಯರ್ಸ್‌ತಂಡವು ಚಾಂಪಿಯನ್ ಆಗಿ ಮೂಡಿಬಂದಿದೆ, ಖೋಬರ್ ಯುನೈಟೆಡ್ ಫೈನಲ್ ಪಂದ್ಯದಲ್ಲಿ ಸಾಬ್ ತಂಡದ ಎದುರು ಮುಗ್ಗರಿಸಿ ರನ್ನರ್ಸ್‌ಅಪ್ ಪ್ರಶಸ್ತಿಗೆ ತಪ್ತಿಪಟ್ಟುಕೊಂಡಿತು. ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸಾಬ್ ವಾರಿಯರ್ಸ್‌ತಂಡದ ಸಲ್ಮಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಮಾಸ್ಟರ್ ಸಿಸಿ ತಂಡದ ರಾಜೇಶ್, ಅತ್ಯುತ್ತಮ ಎಸೆತಗಾರನಾಗಿ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಾಬ್ ವಾರಿಯರ್ಸ್‌ತಂಡದ ನಝೀರ್ ಬಾಚಿಕೊಂಡರು.

Social Forom Damam _Apr 23_2015-001

Social Forom Damam _Apr 23_2015-004

Social Forom Damam _Apr 23_2015-005

Social Forom Damam _Apr 23_2015-006

Social Forom Damam _Apr 23_2015-007

Social Forom Damam _Apr 23_2015-008

Social Forom Damam _Apr 23_2015-003

ಅಲ್‌ಖೋಬರ್ ರಾಕದಲ್ಲಿರುವ ಸುಸಜ್ಜಿತ ಸಾಬ್ಸ ಕ್ರೀಡಾಂಗಣದಲ್ಲಿ ಎಪ್ರಿಲ್ 10ರಂದು ನಡೆದ ಕ್ರಿಕೆಟ್ ಟೂರ್ನಿಯಲ್ಲಿ ದಮಾಮ್-ಖೋಬರ್ ವ್ಯಾಪ್ತಿಯ ಪ್ರಮುಖ 18 ತಂಡಗಳು ಭಾಗವಹಿಸಿದ್ದವು. ಬೆಳಗ್ಗೆ ಇಂಡಿಯನ್ ಸೋಶಿಯಲ್ ಫೋರಮ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ್ ಅವರಿಗೆ ಸಾಲೆಹ್ ಅಯಾದ್ ಬಲ್‌ಹಾರಿತ್‌ನ ಕಂಪೆನಿಯ ಸಿಇಒ ಸಲ್ಮಾನ್ ಸಲಾಹುದ್ದೀನ್ ಅವರು ಬಾಲ್ ಮಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಅಧ್ಯಕ್ಷ ವಾಸಿಮ್ ಮಾತನಾಡಿ, ಅನಿವಾಸಿ ಭಾರತೀಯರ ನಡುವೆ ಸಾಮಾಜಿಕ ಸೇವಾ ಚಟುವಟಿಕೆಯಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯನ್ ಸೋಶಿಯಲ್ ಫೋರಮ್ ಇಂದಿಲ್ಲಿ ಕ್ರೀಡೆಯ ಮೂಲಕ ಸಾರ್ವಭೌಮತೆಯನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಊರು, ಕುಟುಂಬವನ್ನು ತೊರೆದು ಬಂದಿರುವ ಅನಿವಾಸಿ ಭಾರತೀಯರು ತಮ್ಮ ಅಮೂಲ್ಯ ಸಮಯವನ್ನು ಕ್ರೀಡೆ, ಮನರಂಜೆಯಲ್ಲಿ ಮಾತ್ರ ವಿನಿಯೋಗಿಸದೆ ದೇಶದ ಸರ್ವಾಂಗೀಣ ಅಭಿವದ್ಧಿಯ ಬಗ್ಗೆಯೂ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಐಎಸ್‌ಎಫ್ ಇಲ್ಲಿ ಭಾರತದ ರಾಷ್ಟ್ರೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಮಾತ್ರವಲ್ಲದೆ, ನಿರಂತರ ರಾಜಕೀಯ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡು ಬರುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

Social Forom Damam _Apr 23_2015-009

Social Forom Damam _Apr 23_2015-010

Social Forom Damam _Apr 23_2015-011

Social Forom Damam _Apr 23_2015-012

Social Forom Damam _Apr 23_2015-013

Social Forom Damam _Apr 23_2015-014

Social Forom Damam _Apr 23_2015-015

Social Forom Damam _Apr 23_2015-016

Social Forom Damam _Apr 23_2015-017

Social Forom Damam _Apr 23_2015-018

Social Forom Damam _Apr 23_2015-019

Social Forom Damam _Apr 23_2015-020

ವೇದಿಕೆಯಲ್ಲಿ ಸಾಲೆಹ್ ಅಯಾದ್ ಬಲ್‌ಹಾರಿತ್‌ ಕಂಪೆನಿಯ ಸಿಇಒ ಸಲ್ಮಾನ್ ಸಲಾಹುದ್ದೀನ್, ಅಲ್‌ಮುಸಾದ್ ಇಂಡಸ್ಟ್ರಿಯಲ್ ಸೊಲೂಶನ್‌ನ ಸಿಇಒ ಜಾಬಿರ್ ಅಹ್ಮದ್ ಅಲ್ ಮುಸಾದ್ ಹಾಗೂ ಹುಸೈನ್ ಅಲ್ ಗನ್ನಾಂ , ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್‌ಎಫ್) ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶರೀಫ್, ಇಂಡಿಯನ್ ಫ್ರೆಟರ್ನಿಟಿ ಫೋರಮ್‌ನ ಈಸ್ಟರ್ನ್ ಪ್ರೊವಿನ್ಸ್ ಕಾರ್ಯದರ್ಶಿ ಅಶ್ರಫ್, ಐಎಫ್‌ಎಫ್ ರೀಜಿನಲ್ ಕಾರ್ಯದರ್ಶಿ ಅಶ್ರಫ್, ಐಎಸ್‌ಎಫ್ ಕೇರಳ ರಾಜ್ಯಾಧ್ಯಕ್ಷ ಫಾರೂಖ್, ಐಎಸ್‌ಎಫ್ ಆಂಧ್ರ-ತೆಲಂಗಾಣ ರಾಜ್ಯಾಧ್ಯಕ್ಷ ಅಬ್ದುಲ್ ವಾಹಿದ್, ಈಸ್ಟರ್ನ್‌ಅರೇಬಿಯದ ಇಮ್ರಾನ್ ಕಾರ್ಕಳ, ಜಮೀಯ್ಯತುಲ್ ಫಲಾಹ್ ದಮಾಮ್ ಅಧ್ಯಕ್ಷ ಮುಹಮ್ಮದ್ ವಾಹಿದ್ ಕುಂದಾಪುರ, ಹಿದಾಯ ಫೌಂಡೇಶನ್ ಉಪಾಧ್ಯಕ್ಷ ಶರೀಫ್ ಕಾರ್ಕಳ, ದಕ್ಷಿಣ ಕನ್ನಡ ಸುನ್ನೀ ಸೆಂಟರ್ ದಮಾಮ್ ಘಟಕದ ಅಧ್ಯಕ್ಷ ಸಂಶೀರ್ ಮುಲ್ಕಿ, ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಅಧ್ಯಕ್ಷ ಅಡ್ವಕೇಟ್ ಅಬ್ದುಲ್ ಬಶೀರ್, ಕಾರ್ಕಳ ಅಸೋಸಿಯೇಶನ್‌ನ ಸಂಶೀರ್, ಹೆಲ್ಪಿ ಸಂಘಟನೆಯ ಅಧ್ಯಕ್ಷ ಸಮೀರ್ ಹಾಗೂ ದಕ್ಷಿಣ ಕನ್ನಡ ಎಸ್‌ಡಿಪಿಐನ ಮುಷ್ತಾಕ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.

Social Forom Damam _Apr 23_2015-021

Social Forom Damam _Apr 23_2015-022

Social Forom Damam _Apr 23_2015-023

Social Forom Damam _Apr 23_2015-024

Social Forom Damam _Apr 23_2015-025

Social Forom Damam _Apr 23_2015-026

Social Forom Damam _Apr 23_2015-027

Social Forom Damam _Apr 23_2015-028

Social Forom Damam _Apr 23_2015-029

Social Forom Damam _Apr 23_2015-030

Social Forom Damam _Apr 23_2015-031

Social Forom Damam _Apr 23_2015-032

ಇಂಡಿಯನ್ ಸೋಶಿಯಲ್ ಫೋರಮ್ ಖೋಬರ್ ಬ್ರಾಂಚ್ ಅಧ್ಯಕ್ಷ ಅಬ್ದುಲ್ ನಾಸಿರ್ ಸ್ವಾಗತಿಸಿದರು. ಐಎಸ್‌ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಇಮ್ರಾನ್ ಕಾಟಿಪಳ್ಳ ಧನ್ಯವಾದ ಸಲ್ಲಿಸಿದರು. ಅಝರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭವು ”ಸಾರೆ ಜಹಾಂಸೆ ಅಚ್ಚಾ..” ಗೀತೆಯೊಂದಿಗೆ ಆರಂಭಗೊಂಡು, ”ಜನ ಗಣ ಮನ” ನಾಡಗೀತೆಯೊಂದಿಗೆ ಸಮಾಪ್ತಿಗೊಂಡು ದೇಶ, ಭಾಷೆಗಳ ಮೇರೆ ಇಲ್ಲದೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದು ಸಭೆಯ ಮೆರುಗನ್ನು ಹೆಚ್ಚಿಸಿತು. ಕ್ರಿಕೆಟ್ ಟೂರ್ನಿಯ ತೀರ್ಪುಗಾರ ಹಾಗೂ ಕ್ರೀಡಾ ವೀಕ್ಷಣೆ ವಿವರಗಾರರಾಗಿ ಸೇವೆ ಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾತ್ರವಲ್ಲದೆ ಸಾರ್ವಜನಿಕರಿಗೆ ಅದಷ್ಟ ಚೀಟಿ ಎತ್ತುವ ಮೂಲಕವೂ ಬಹುಮಾನಗಳನ್ನು ವಿತರಿಸಲಾಯಿತು.

Social Forom Damam _Apr 23_2015-033

Social Forom Damam _Apr 23_2015-034

Social Forom Damam _Apr 23_2015-035

Social Forom Damam _Apr 23_2015-036

Social Forom Damam _Apr 23_2015-037

Social Forom Damam _Apr 23_2015-038

ಸೋಶಿಯಲ್ ಫೋರಮ್ ಕಪ್-2015 ದಮಾಮ್-ಖೋಬರ್ ವ್ಯಾಪ್ತಿಯಲ್ಲಿ ನಡೆದ ಈ ಕ್ರಿಕೆಟ್ ಟೂರ್ನಿಯ ಪ್ರಾಯೋಜಕತ್ವವನ್ನು ಸಾಲೇಹ್ ಅಯಾದ್ ಬಲ್‌ ಹಾರಿತ್‌ ಕಂಪೆನಿ ವಹಿಸಿಕೊಂಡಿತ್ತು ಹಾಗೂ ಸಹಪ್ರಾಯೋಜಕರಾಗಿ ಸ್ಮಾರ್ಟ್ ಪವರ್ ಕಂಪೆನಿ ಲಿ., ಹಿಟ್ ಸೌದಿ ಕಂಪೆನಿ, ಗಲ್ಫ್ ಪೈಪ್ಸ್, ಈಸ್ಟರ್ನ್ ಅರೇಬಿಯ, ರಖ್ವಾನಿ ಕಂಪೆನಿ, ಅಲ್‌ಮುಸಾದ್ ಇಂಜಿನಿಯರಿಂಗ್ ಆ್ಯಂಡ್ ಕನ್‌ಸ್ಟ್ರಕ್ಶನ್, ಸಫಾ ಮೆಡಿಕಲ್ ಸೆಂಟರ್ ದಮಾಮ್, ಕ್ಲಾಸಿಕ್ ಫ್ಯಾಮಿಲಿ ರೆಸ್ಟೋರೆಂಟ್, ಫವಾಝ್ ರೆಸ್ಟೋರೆಂಟ್ ಗ್ರೂಪ್ ಖೋಬರ್, ಜಾಸ್ ಫಾರ್ವರ್ಡಿಂಗ್ ಸರ್ವೀಸಸ್ ದಮಾಮ್, ಎ.ಎಸ್.ನಟ್ಸ್ ಆ್ಯಂಡ್ ಸ್ಪೆೃಸಸ್ ದಮಾಮ್, ಅಲ್‌ಕಫ್‌ಜಿ ಪ್ಲಾಸ್ಟಿಕ್, ಅಲ್ ಖೋಬರ್ ಟ್ರೇಡಿಂಗ್, ಇಂಡೋಮಿ ನೂಡಲ್ಸ್, ಅಯಾದ್ ಎಸ್ಟಾಬ್ಲಿಶ್‌ಮೆಂಟ್, ಝಯಾನ್ ರೆಸ್ಟೋರೆಂಟ್ ಅಲ್ ಖೋಬರ್, ಅಪ್ಸರಾ ರೆಸ್ಟೋರೆಂಟ್ ಖೋಬರ್, ಮಾಜಿದ್ ಅಲ್ ರಮ್ಮಾ ಖೋಬರ್, ಬಿನ್ ಫಹದ್ ಇಂಜಿನಿಯರಿಂಗ್, ಶಿಫಾ ಮೆಡಿಕಲ್ ಸೆಂಟರ್ ಖೋಬರ್, ಲಬ್ಬಾದ್ ಫರ್ನೀಚರ್, ಅರಕಿ ಇಂಟರ್‌ನ್ಯಾಶನಲ್ ಖೋಬರ್, ಫತೇಹ್ ಅಲ್ ಜುಬೈಲ್, ದಾದಾ ಬಾಯಿ ಟ್ರಾವೆಲ್ಸ್ ಮುಂತಾದ ಕಂಪೆನಿಗಳು, ಸಂಸ್ಥೆಗಳು ವಹಿಸಿದ್ದವು.

Write A Comment