
ಮಂಗಳೂರು,ಮೇ.21: ಅರೋರಾ ತಂಡ ನಿರ್ಮಾಣದ “ಮೇ.22 ದ ಲಾಸ್ಟ್ ಫೈಟ್” ಮೋಷನ್ ಪಿಕ್ಚರ್ ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಶನಿವಾರ ಬಿಡುಗಡೆಗೊಂಡಿತು. ಆಲ್ಬಂನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕುಟುಂಬದ ನೆಮ್ಮದಿಯ ಬದುಕಿಗೆ ಇಂತಹ ಜೀವಹಾನಿಗಳು ಬಹಳ ದೊಡ್ಡ ಆಘಾತವನ್ನು ತಂದು ಒಡ್ಡುತ್ತದೆ. ಈ ತಂಡದಿಂದ ಮೂಡಿಬಂದಿರುವ ಈ ಆಲ್ಬಂನಲ್ಲಿ ಆ ಕರಾಳ ದಿನದ ನೆನಪು ಮತ್ತು ಇವತ್ತಿಗೂ ತಮ್ಮವರನ್ನು ಕಳೆದುಕೊಂಡ ಆ ಕುಟುಂಬಗಳ ನೋವನ್ನು ವ್ಯಕ್ತಪಡಿಸುವಂತಿತ್ತು ಎಂದು ತಂಡದ ಪ್ರಯತ್ನವನ್ನು ಶಾಘ್ಲಸಿದರು .
ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಚಾಲನೆ ನೀಡಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜೆ.ಟಿ.ರಾಧಾಕೃಷ್ಣ ,ತಂಡದ ವಿಶಿಷ್ಟ ಪ್ರಯತ್ನವನ್ನು ಬೆಂಬಲಿಸಬೇಕೆಂದು ಕೋರಿದರು. ಭಾರತ್ ಬಿಗ್ ಸಿನಿಮಾದ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ, ರೆಡ್‌ರಾಕ್ಸ್ ಬಿಲ್ಡರ್‍ಸ್ ನ ಮಾಲಕರಾದ ಪ್ರಶಾಂತ್ ರಸ್ಕಿನ್ಹಾ, ತಂಡದ ಸದಸ್ಯರು ಮತ್ತಿತರು ಉಪಸ್ಥತರಿದ್ದರು.

“ಮೇ 22 ದಿ ಲಾಸ್ಟ್ ಫ್ಲೈಟ್” ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತದ ಸುತ್ತ ಹೆಣೆದ ಒಂದು ಸಂಗೀತರೂಪಕ.ಪ್ರಿಯಕರನಿಗಾಗಿ ವಿಮಾನನಿಲ್ದಾಣದಲ್ಲಿ ಕಾಯುತ್ತಿರುವ ಪ್ರೇಯಸಿ,ಈ ನಡುವೆ ಪ್ರೀತಿಯ ನೆನಪುಗಳು, ಕೊನೆಯಲ್ಲಿ ವಿಮಾನ ದುರಂತದ ದೃಶ್ಯಗಳು ಕಣ್ಣಮುಂದೆ ಕಟ್ಟಿದಂತಿರುತ್ತದೆ. ವಿಶ್ಯುಲ್‌ದೃಶ್ಯಗಳ ಹೊರತಾಗಿ,ಸುಮಾರು 5000 ಸ್ಟಿಲ್ ಇಮೇಜಸ್‌ಗಳನ್ನು ಹಾಗೂ 25 ಸಾವಿರ ಲೇಯರ್‍ಸ್‌ಗಳನ್ನು ಬಳಸಿ ನಿರ್ಮಿಸಿದ ಒಂದು ವಿನೂತನ ಪ್ರಯತ್ನ. ಪ್ರತ್ಯೇಕವಾಗಿ ತುಳು,ಕನ್ನಡ, ಹಾಗೂ ಹಿಂದಿ ಭಾಷೆಯಲ್ಲಿರುವ ಈ ಆಲ್ಬಂ ಕರ್ನಾಟಕದ ಮೊದಲ ಮೋಷನ್‌ಫಿಕ್ಟರ್ ಎನಿಸಿಕೊಳ್ಳಲಿದೆ.
ವಿ.ಜೆ ವಿನೀತ್ ಈ ಆಲ್ಬಂನ ನಾಯಕನಟನಾಗಿದ್ದು ಮೊದಲ ಬಾರಿಗೆ ಕ್ಯಾಮರಾ ಎದುರಿಸುತ್ತಿರುವ ನೇಹಾಲ್ ಪರಿಣಿತ ನಾಯಕಿ. ದಿನೇಶ್‌ಆಚಾರ್ಯ ಅವರ ಪರಿಕಲ್ಪನೆ,ನಿರ್ದೇಶನದ ಈ ಆಲ್ಬಂಗೆ ಸಾಹಿತ್ಯ ಬರೆದವರು ಶಶಿರಾಜ್‌ರಾವ್ ಕಾವೂರ್,ಕರಣ್ ಮಂಜುನಾಥ್ ಹಾಗೂ ಮಹಮ್ಮದ್ ಇಬಾದ್ .ಡಾ.ನಿತಿನ್‌ಆಚಾರ್ಯ ಅವರ ಸಂಗೀತ, ಹರೀಶ್‌ನಾಯಕ್.ಕೆ ಅವರ ಛಾಯಾಗ್ರಹಣವಿರುವ ಈ ಅಲ್ಬಂನ ಸಹನಿರ್ದೇಶಕ ನಿತೇಶ್‌ಕುಲಾಲ್. ನಿರ್ಮಾಣನಿರ್ವಹಣೆಯ ಜವಾಬ್ದಾರಿ ಹೊತ್ತವರು ರಾಮ್‌ದಾಸ್ .
Comments are closed.