ಕರ್ನಾಟಕ

ಆನ್‌ಲೈನ್ ಮೂಲಕ ತೆರಿಗೆ ಪಾವತಿ

Pinterest LinkedIn Tumblr

21bbmp1clr-715x350ಬೆಂಗಳೂರು, ಮೇ ೨೧- ನಗರದ ಬ್ರಿಗೇಡ್ ಅಪಾರ್ಟ್‌ಮೆಂಟ್ ಆವರಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಇಂದು ತೆರಿಗೆ ಅಭಿಯಾನ ನಡೆಸಿದ ವೇಳೆ ಸುಮಾರು ೪೦೦ಕ್ಕೂ ಹೆಚ್ಚು ಆಸ್ತಿ ಮಾಲೀಕರು ತೆರಿಗೆಯನ್ನು ಆನ್‌ಲೈನ್ ಮೂಲಕ ಕಟ್ಟಿದ್ದಾರೆ.
ಇಂದು ಬೆಳಿಗ್ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ತೆರಿಗೆ ಆಂದೋಲನದಲ್ಲಿ ಅಪಾರ್ಟ್‌ಮೆಂಟ್‌ನ ಆಸ್ತಿ ಮಾಲೀಕರು ಸ್ವಯಂ ಪ್ರೇರಣೆಯಿಂದ ಆನ್‌ಲೈನ್ ಮೂಲಕ ತೆರಿಗೆ ಕಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಶಿವರಾಜ್ ಅವರು ನಗರದ ಪ್ರತಿ ಅಪಾರ್ಟ್‌ಮೆಂಟ್‌ಗಳ ಮುಂದೆ ಇಂತದ್ದೆ ತೆರಿಗೆ ಆಂದೋಲನವನ್ನು ನಡೆಸಲಾಗುವುದು. ಆನ್‌ಲೈನ್ ಅವ್ಯವಸ್ಥೆ ಬಗ್ಗೆ ಇದ್ದ ಗೊಂದಲವನ್ನು ಸ್ಥಳದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಆನ್‌ಲೈನ್ ವ್ಯವಸ್ಥೆ ಸುಧಾರಿಸಿದ್ದು, ಆಸ್ತಿ ತೆರಿಗೆದಾರರು ಶೇ.೫ರಷ್ಟು ತೆರಿಗೆ ರಿಯಾಯಿತಿಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಈಗಾಗಲೇ ೫೦೦ ಕೋಟಿ ರೂ. ತೆರಿಗೆ ವಸೂಲಾಗಿದೆ ಎಂದು ಹೇಳಿದರು.
ಇಂದು ಮಧ್ಯಾಹ್ನ ಮಂತ್ರಿಗ್ರೀನ್ ಅಪಾರ್ಟ್‌ಮೆಂಟ್ ಆವರಣದಲ್ಲೂ ತೆರಿಗೆ ಅಭಿಯಾನವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

Comments are closed.