
ಮಂಗಳೂರು, ಮೇ.20 : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2015 – 16 ನೇ ಸಾಲಿನ ಹತ್ತನೇ (ಎಸ್.ಎಸ್.ಎಲ್.ಸಿ) ತರಗತಿಯಲ್ಲಿ ಶೇಖಡ ನೂರು ಫಲಿತಾಂಶಗಳಿಸಿದ ನಗರದ ರಥಬೀದಿಯ ಹೆಣ್ಣು ಮಕ್ಕಳ ಸರಕಾರಿ ಫ್ರೌಡಶಾಲೆಯ ಆಡಳಿತಾ ಮಂಡಳಿ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
ರಥಬೀದಿಯ ಹೆಣ್ಣು ಮಕ್ಕಳ ಸರಕಾರಿ ಫ್ರೌಡಶಾಲೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯಿನಿ ರಾಜೀವಿ ಕೆ ಅವರನ್ನು ಗೌರವಿಸಿದರು. ಬಳಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿನಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮುಖ್ಯ ಪಾತ್ರ ನಿರ್ವಾಹಿಸುತ್ತಿರುವಂತಹ ಶಾಲೆಯ ಅಧ್ಯಾಪರು ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು.

ಶಾಲೆಯ ಶಿಕ್ಷಕಿಯರಾದ ಕೆ ಸುಜಾತ ಹೆಗ್ಡೆ, ಲಲಿತಾ ಕಲ್ಕೂರ ಹಾಗೂ ಇದೇ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಂತಹ ವಿದ್ಯಾರ್ಥಿನಿಗಳಾದ ಪೃಥ್ವಿ 92 % (575 ಅಂಕ), ಸುಷ್ಮಾ 90% (568 ಅಂಕ), ಆಯಿಷಾತುಲ್ ಶಬ್ನಂ 86% (537 ಅಂಕ ), ಮೆಹವೇಶ್ 82% (511 ಅಂಕ ) ಮತ್ತು ವಿದ್ಯಾರ್ಥಿನಿಯರ ಫೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments are closed.