ಮನೋರಂಜನೆ

ಟೀಂ ಇಂಡಿಯಾ ಕೋಚ್ ಹುದ್ದೆಗೆ ದ್ರಾವಿಡ್‌, ಜಹೀರ್‌ ಅತ್ಯಂತ ಸೂಕ್ತ: ಹರ್ಭಜನ್ ಸಿಂಗ್

Pinterest LinkedIn Tumblr

dravid-zaheer-1463656178

ಹೊಸದಿಲ್ಲಿ: ಬ್ಯಾಟಿಂಗ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಹಾಗೂ ಹಿರಿಯ ಎಡಗೈ ವೇಗಿ ಜಹೀರ್‌ ಖಾನ್‌ ಟೀಮ್‌ ಇಂಡಿಯಾದ ಮುಂದಿನ ಪ್ರಧಾನ ಕೋಚ್‌ ಮತ್ತು ಬೌಲಿಂಗ್‌ ಕೋಚ್‌ ಹುದ್ದೆಗೆ ಸಮರ್ಥ ಆಯ್ಕೆಗಳು ಎಂದು ಅನುಭವಿ ಆಫ್‌ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಟೀ ಇಂಡಿಯಾ ಕೋಚ್ ಹುದ್ದೆ ಸಂಬಂಧಿಸಿದಂತೆ ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿವೆ. ಕೆಲ ಹಿರಿಯ ಆಟಗಾರರ ಪರ ಕಿರಿಯ ಆಟಗಾರರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮಧ್ಯೆ ಹರ್ಭಜನ್ ಸಿಂಗ್ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಹಾಗೂ ಬೌಲಿಂಗ್ ಕೋಚ್ ಆಗಲು ಜಹೀರ್ ಖಾನ್ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಬಗ್ಗೆ ಟರ್ಬನೇಟರ್‌ ಖ್ಯಾತಿಯ ಹರ್ಭಜನ್‌ ಸಿಂಗ್‌ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ”ಕ್ರಿಕೆಟ್‌ ಕಡೆಗಿನ ವಿರಾಟ್‌ ಅವರ ಬದ್ಧತೆ ಉಳಿದವರಿಗೆ ಮಾದರಿಯಾಗಿ ನಿಲ್ಲುವಂಥದ್ದು. ತಮ್ಮ ಶ್ರೇಷ್ಠ ಮಟ್ಟದ ಫಿಟ್‌ನೆಸ್‌ನಿಂದ ವಿರಾಟ್‌ ಹೊಸದೊಂದು ಟ್ರೆಂಡ್‌ ಹುಟ್ಟು ಹಾಕಿದ್ದಾರೆ. ಹೊಂದಿದ್ದಾರೆ. ಕಿರಿಯರಷ್ಟೇ ಅಲ್ಲ, ನನ್ನಂತಹ ಹಿರಿಯ ಆಟಗಾರರೂ ಫಿಟ್‌ನೆಸ್‌ನಲ್ಲಿ ಕೊಹ್ಲಿಯನ್ನು ಅನುಕರಿಸಲು ಜಿಮ್‌ನಲ್ಲಿ ಹೆಚ್ಚುವರಿ ಸಮಯವನ್ನು ವ್ಯಯಿಸುತ್ತಿದ್ದೇವೆ. ಫಿಟ್‌ನೆಸ್‌ ವಿಚಾರದಲ್ಲಿ ವಿರಾಟ್‌ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ,” ಎಂದು ಭಜ್ಜಿ ತಿಳಿಸಿದರು.

Comments are closed.