
ಮಂಗಳೂರು, ಮೇ.17 : ಮಂಗಳೂರಿನಲ್ಲಿ ಇಂದು ಸಂಜೆ ಬಾರೀ ಮಳೆಯಾಗಿದೆ. ದಿನ ಬಿಟ್ಟು ದಿನ ಬರುವ ಈ ಮಳೆಯ ನಿರೀಕ್ಷೆ ಇಲ್ಲದೇ ಇದ್ದುದ್ದರಿಂದ ಯಾವುದೇ ಪೂರ್ವ ತಯಾರಿ ಇಲ್ಲದೇ ತಮ್ಮ ತಮ್ಮ ಕರ್ತವ್ಯ ನಿಮಿತ್ತ ತೆರಳಿದ ಕೆಲವರು ಈ ಮಳೆಯಿಂದ ಸ್ವಲ್ಪ ಹೊತ್ತು ಅಡಚಣೆಗೊಳಗಾದರು. ಜೊತೆಗೆ ಪೂರ್ವ ಸಿದ್ದತೆ ಇಲ್ಲದ ದ್ವಿಚಕ್ರ ಚಾಲಕರು ಈ ಮಳೆಯಿಂದ ಪರದಾಡಬೇಕಾಯಿತು.

ಇಂದು ಸಂಜೆ 7.15 ರ ಸುಮಾರಿಗೆ ಆರಂಭಗೊಂಡ ಮಳೆ ಸುಮಾರು 8.30ರವರೆಗೆ ಮುಂದುವರಿದಿದೆ… ಆದರೂ… ದ.ಕ. ಜಿಲ್ಲೆಯ ಜನತೆಯ ಕುಡಿಯುವ ನೀರಿನ ಸಮಸೈಗೆ ಈ ಮಳೆಯಿಂದ ಯಾವೂದೇ ಪರಿಹಾರ ಕಾಣದು. ಏಕೆಂದರೆ ನಗರ ಪ್ರದೇಶಗಳಲ್ಲಿ ಬರುವ ಮಳೆ ನೀರು ಸಮುದ್ರ ಸೇರಿದರೆ… ಘಟ್ಟ ಪ್ರದೇಶಗಳಲ್ಲಿ ಅತೀಯಾಗಿ ಬರುವ ಮಳೆಯಿಂದ ಜಿಲ್ಲೆಯ ಜೀವನದಿಗಳು ತುಂಬಿ ತುಳುಕುತ್ತದೆ.. ಹಾಗಾದಾಗ ಮಾತ್ರ ಜಿಲ್ಲೆಯ ಜನರ ನೀರಿನ ದಾಹ ತೀರಲು ಸಾದ್ಯವಾಗುತ್ತದೆ. ತುರ್ತು ಕಾರ್ಯಕ್ರಮವಿರುವುದರಿಂದ ಹೆಚ್ಚಿನ ವಿವರ ನಾಳೆ ನಿರೀಕ್ಷಿಸಿ..

ಚಿತ್ರ : ಅಮ್ಟೂರು ಡಿಜಿಟಲ್ ಸ್ಟೂಡೀಯೋ. ಎಮ್.ಜಿ.ರೋಡ್, ಮಂಗಳೂರು.
Comments are closed.